ಹೈದರಾಬಾದ್: ನ್ಯೂಜಿಲ್ಯಾಂಡ್ ವಿರುದ್ಧದ ಏಕ ದಿನ ಸರಣಿಯ (INDvsNZ ODI) ಮೊದಲ ಪಂದ್ಯದಲ್ಲಿ ಭಾರತ ತಂಡ 12 ರನ್ಗಳಿಂದ ವಿಜಯ ಸಾಧಿಸಿದೆ. ಇದು ಭಾರತದ ಪಾಲಿಗೆ ಥ್ರಿಲ್ಲಿಂಗ್ ವಿಕ್ಟರ್. ಕೊನೇ ಓವರ್ನಲ್ಲಿ ನ್ಯೂಜಿಲ್ಯಾಂಡ್ ಗೆಲುವಿಗೆ 20 ರನ್ ಬೇಕಾಗಿತ್ತು. ಎದುರಾಳಿ ತಂಡದ ಸ್ಫೋಟಕ ಬ್ಯಾಟರ್ ಮೈಕಲ್ ಬ್ರಾಸ್ವೆಲ್, ಶಾರ್ದೂಲ್ ಠಾಕೂರ್ ಎಸೆದ ಮೊದಲ ಎಸೆತವನ್ನೇ ಸಿಕ್ಸರ್ಗೆ ಅಟ್ಟಿದ್ದರು. ಮುಂದಿನ ಎಸೆತ ವೈಡ್ ಹೀಗಾಗಿ. ಐದು ಎಸೆತಗಳಲ್ಲಿ ನ್ಯೂಜಿಲ್ಯಾಂಡ್ ತಂಡಕ್ಕೆ 13 ರನ್ಗಳು ಮಾತ್ರ ಬೇಕಾಗಿತ್ತು. ಬಳಿಕದ ಎಸೆತದಲ್ಲಿ ಬ್ರಾಸ್ವೆಲ್ ಎಲ್ಬಿಡಬ್ಲ್ಯು ಆದರು. ಅಲ್ಲಿಗೆ ಭಾರತ ತಂಡದ ಅಭಿಮಾನಿಗಳಿಗೆ ಜಯದ ರೋಮಾಂಚನ.
ಗೆಲುವಿನ ಬಳಿಕ ಮಾತನಾಡಿದ ಭಾರತ ತಂಡದ ನಾಯಕ ರೋಹಿತ್ ಶರ್ಮ, ದ್ವಿ ಶತಕ ಬಾರಿಸಿದ ಶುಬ್ಮನ್ ಗಿಲ್ (208 ರನ್) ಹಾಗೂ ಬೌಲಿಂಗ್ನಲ್ಲಿ ಉತ್ತಮ ಸಾಹಸ ತೋರಿದ ಮೊಹಮ್ಮದ್ ಸಿರಾಜ್ (46 ರನ್ಗಳಿಗೆ 4 ವಿಕೆಟ್) ಅವರನ್ನು ಪ್ರಶಂಸಿಸಲು ಮರೆಯಲಿಲ್ಲ.
ಶುಬ್ಮನ್ ಗಿಲ್ ಅವರ ಇನಿಂಗ್ಸ್ ಅತ್ಯುತ್ತಮವಾಗಿತ್ತು. ಅವರು ಅದ್ಭುತವಾಗಿ ಆಡುತ್ತಿದ್ದಾರೆ. ಶ್ರೀಲಂಕಾ ವಿರುದ್ಧದ ಪಂದ್ಯದಿಂದಲೇ ಅವರಿಗೆ ಉತ್ತಮ ಬೆಂಬಲ ನೀಡಲಾಗುತ್ತಿದೆ. ಅವರು ಸಲೀಸಾಗಿ ಆಡಬಲ್ಲವರು ಹಾಗೂ ಆಟವನ್ನು ನೋಡುವುದೇ ಚಂದ ಎಂದು ರೋಹಿತ್ ಶರ್ಮ ಹೊಗಳಿದ್ದಾರೆ.
ಮೊಹಮ್ಮದ್ ಸಿರಾಜ್ ಕೂಡ ಅತ್ಯುತ್ತಮ ಬೌಲರ್. ಅವರನ್ನು ಟೆಸ್ಟ್ ಕ್ರಿಕೆಟ್ಗೆ ಮಾತ್ರ ಸೀಮಿತಗೊಳಿಸುವ ಅಗತ್ಯವಿಲ್ಲ. ಎದುರಾಳಿ ತಂಡಕ್ಕೆ ಅವರು ಪೈಪೋಟಿ ಒಡ್ಡಬಲ್ಲರು. ಅವರು ತಮ್ಮ ಯೋಜನೆಗೆ ತಕ್ಕ ಹಾಗೆ ಬೌಲಿಂಗ್ ಮಾಡಬಲ್ಲರು. ಹೀಗಾಗಿ ತಂಡಕ್ಕೆ ನೆರವಾಗುತ್ತಿದೆ ಎಂದು ಹೇಳಿದರು.
ಮೊಹಮ್ಮದ್ ಸಿರಾಜ್ ಇನಿಂಗ್ಸ್ನ 45ನೇ ಓವರ್ನಲ್ಲಿ ಎರಡು ವಿಕೆಟ್ಗಳನ್ನು ಕಬಳಿಸಿದ್ದರು. ಒಂದು ಅರ್ಧ ಶತಕ ಬಾರಿಸಿ ಕ್ರಿಸ್ನಲ್ಲಿ ತಳವೂರಿದ್ದ ಮಿಚೆಲ್ ಸ್ಯಾಂಟ್ನರ್ ಹಾಗೂ ಎರಡನೇ ವಿಕೆಟ್ ಕ್ರೀಸ್ಗೆ ಬಂದಿದ್ದ ಶಿಪ್ಲೆ. ಈ ಓವರ್ ಭಾರತದ ಪಾಲಿನ ಟರ್ನಿಂಗ್ ಪಾಯಿಂಟ್ ಎನಿಸಿತು.
ಇದನ್ನೂ ಓದಿ | INDvsNZ ODI | ಭಾರತಕ್ಕೆ ಗಿಲ್ ಮಾಂಗೆ ಮೋರ್; ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಏಕ ದಿನ ಪಂದ್ಯದಲ್ಲಿ 12 ರನ್ ಜಯ