ಗುವಾಹಟಿ : ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ (Rohit sharma) ಶ್ರೀಲಂಕಾ ವಿರುದ್ಧದ ಏಕ ದಿನ ಸರಣಿಯ ಮೊದಲ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. 67 ಎಸೆತಗಳಿಗೆ 83 ರನ್ ಬಾರಿಸಿದ ಅವರು ಟೀಮ್ ಇಂಡಿಯಾಗೆ ದೊಡ್ಡ ಮೊತ್ತ ಪೇರಿಸಲು ನೆರವಾಗಿದ್ದಾರೆ. ಆದರೆ, 17 ರನ್ಗಳಿಂದ ಶತಕ ಬಾರಿಸುವ ಅವಕಾಶದಿಂದ ವಂಚಿತರಾದರು. ಅಲ್ಲದೆ ಕಳೆದ ಮೂರು ವರ್ಷಗಳಿಂದ ಎದುರಿಸುತ್ತಿರುವ ಶತಕದ ಬರದಿಂದ ಪಾರಾಗಲು ಸಾಧ್ಯವಾಗಿಲ್ಲ. ಏತನ್ಮಧ್ಯೆ ಅವರು ಗಮನ ಸೆಳೆದಿರುವುದು ಅರ್ಧ ಶತಕ ಬಾರಿಸಿದ ಬಳಿಕ ಸಂಭ್ರಮಿಸಿದ ರೀತಿಯಿಂದ.
ಅರ್ಧ ಶತಕ ಬಾರಿಸಿದ ರೋಹಿತ್ ಶರ್ಮಾ ಅರ್ಧ ಬ್ಯಾಟ್ ಹಿಡಿದು ಆಕಾಶಕ್ಕೆ ಮುಖ ಮಾಡಿ ಏನೂ ಹೇಳಿದ್ದಾರೆ. ಕೆಲವು ದಿನಗಳ ಹಿಂದೆ ರೋಹಿತ್ ಅವರ ಮುದ್ದಿನ ನಾಯಿ ಮೃತಪಟ್ಟಿತ್ತು. ಹಾಫ್ ಸೆಂಚುರಿ ಬಾರಿಸಿದ ಅವರು ತಮ್ಮ ನಾಯಿಯನ್ನು ಸ್ಮರಿಸಿಕೊಂಡಿದ್ದಾರೆ ಎಂದು ಟ್ವಿಟರ್ನಲ್ಲಿ ಹಲವರು ಬರೆದುಕೊಂಡಿದ್ದಾರೆ.
ಪಂದ್ಯದಲ್ಲಿ ರೋಹಿತ್ ಶರ್ಮ ಹಾಗೂ ಶುಬ್ಮನ್ ಗಿಲ್ ಜೋಡಿ ಮೊದಲ ವಿಕೆಟ್ಗೆ 143 ರನ್ ಬಾರಿಸಿದ್ದರು. ಅವರ ಉತ್ತಮ ಆರಂಭದ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾ 373 ರನ್ಗಳ ಬೃಹತ್ ಮೊತ್ತವನ್ನು ಪೇರಿಸಿತು. ವಿರಾಟ್ ಕೊಹ್ಲಿ 87ಎಸೆತಗಳಲ್ಲಿ 113 ರನ್ ಬಾರಿಸುವ ಮೂಲಕ ಮತ್ತೊಂದು ದಾಖಲೆ ಬರೆದರು.
ಇದನ್ನೂ ಓದಿ | IND VS SL | ಕಣ್ಣೀರು ಹಾಕಿದ ಪುಟ್ಟ ಅಭಿಮಾನಿಯನ್ನು ಸಂತೈಸಿದ ರೋಹಿತ್ ಶರ್ಮಾ; ವಿಡಿಯೊ ವೈರಲ್