Site icon Vistara News

Rohit Sharma : ಫಾರಿನ್ ಟೂರ್​ ಮುಗಿಸಿ ಮರಳಿದ ರೋಹಿತ್​ ಶರ್ಮಾ ಫ್ಯಾಮಿಲಿ

Rohit Sharma

ಮುಂಬಯಿ: ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ಅವರು ಪತ್ನಿ ರಿತಿಕಾ ಸಜ್ದೇ ಮತ್ತು ಮಗಳು ಸಮೈರಾ ಜತೆಗೆ ಸೋಮವಾರ ಮುಂಬೈಗೆ ಮರಳಿದರು. ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಭಾರತೀಯ ನಾಯಕ ತನ್ನ ಕುಟುಂಬದೊಂದಿಗೆ ಕಾಣಿಸಿಕೊಂಡರು. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಕ್ರಿಕೆಟ್ ವಿಶ್ವಕಪ್ ಫೈನಲ್​ನಲ್ಲಿ ಭಾರತ ತಂಡದ ಸೋಲಿನ ಬಳಿಕ ರೋಹಿತ್ ಮತ್ತು ಇತರ ಹಿರಿಯ ಆಟಗಾರರು ವಿರಾಮ ತೆಗೆದುಕೊಂಡಿದ್ದರು. ಈ ಅವಧಿಯಲ್ಲಿ ಅವರು ಬ್ರಿಟನ್​ಗೆ ಪ್ರವಾಸ ಹೋಗಿದ್ದರು ಎಂದು ಹೇಳಲಾಗಿದೆ. ಪ್ರವಾಸದಲ್ಲಿದ್ದ ಕಾರಣ ರೋಹಿತ್ ಶರ್ಮಾ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 5 ಪಂದ್ಯಗಳ ಟಿ 20 ಪಂದ್ಯಗಳಲ್ಲಿ ಪಾಲ್ಗೊಂಡಿರಲಿಲ್ಲ.

ಭಾರತದ ವಿಶ್ವಕಪ್ ಫೈನಲ್ ಸೋಲಿನ ನಂತರ ಭಾರತೀಯ ನಾಯಕ ಸಾರ್ವಜನಿಕ ದೃಷ್ಟಿಯಿಂದ ದೂರ ಉಳಿದಿದ್ದರು. ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಪತ್ನಿಯೊಂದಿಗೆ ರಜಾದಿನಗಳನ್ನು ಕಳೆಯುವ ಚಿತ್ರವನ್ನು ಹಂಚಿಕೊಂಡಿದ್ದರು. ಹೀಗಾಗಿ ಅವರು ಬ್ರಿಟನ್​ನಲ್ಲಿ ತಿರುಗಾಟ ನಡೆಸುತ್ತಿದ್ದಾರೆ ಎಂಬುದು ಗೊತ್ತಾಗಿತ್ತು.

ಏಕದಿನ ವಿಶ್ವಕಪ್​ನಲ್ಲಿ ರೋಹಿತ್ ಶರ್ಮಾ ಬ್ಯಾಟಿಂಗ್ ಮೂಲಕ ಅದ್ಭುತ ಪ್ರದರ್ಶನ ನೀಡಿದ್ದರು. ಅವರು ತಂಡವನ್ನು ಮುಂಚೂಣಿ ಸ್ಥಾನದಲ್ಲಿ ನಿಂತು ಮುನ್ನಡೆಸಿದ್ದರು. ಒಟ್ಟು 597 ರನ್​​ಗಳೊಂದಿಗೆ 2 ನೇ ಅತಿ ಹೆಚ್ಚು ರನ್ ಬಾರಿಸಿದ ಆಟಗಾರನಾಗಿ ಪ್ರವಾಸವನ್ನು ಕೊನೆಗೊಳಿಸಿದ್ದರು. ಏಕದಿನ ವಿಶ್ವಕಪ್​​ನಲ್ಲಿ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿಯುವುದು ಸೇರಿದಂತೆ 11 ಪಂದ್ಯಗಳ ಅಭಿಯಾನದಲ್ಲಿ 36 ವರ್ಷದ ಬ್ಯಾಟರ್​​ ಅನೇಕ ದಾಖಲೆಗಳನ್ನು ಮುರಿದಿದ್ದಾರೆ.

ವಿಶೇಷವೆಂದರೆ, ಡಿಸೆಂಬರ್ 10 ರಿಂದ ಪ್ರಾರಂಭವಾಗುವ ದಕ್ಷಿಣ ಆಫ್ರಿಕಾ ವಿರುದ್ಧದ ಮುಂಬರುವ ಟಿ 20 ಐ ಮತ್ತು ಏಕದಿನ ಸರಣಿಯಿಂದ ರೋಹಿತ್​ಗೆ ವಿಶ್ರಾಂತಿ ನೀಡಲಾಗಿದೆ. ಡಿಸೆಂಬರ್ 26 ರಿಂದ ಸೆಂಚೂರಿಯನ್​ನಲ್ಲಿ ಪ್ರಾರಂಭವಾಗುವ ದಕ್ಷಿಣ ಆಫ್ರಿಕಾ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಲು ಭಾರತೀಯ ನಾಯಕ ಟೆಸ್ಟ್ ತಂಡವನ್ನು ಸೇರಿಕೊಳ್ಳಲಿದ್ದಾರೆ.

ಬುಮ್ರಾಗೆ ಸಲಹೆ ಕೊಟ್ಟ ನೀರಜ್​

ಭಾರತದಲ್ಲಿ ಜಾವೆಲಿನ್ ಎಸೆತವನ್ನು ಜನಪ್ರಿಯಗೊಳಿಸಿದ ಕೀರ್ತಿಗೆ ಪಾತ್ರರಾಗಿರುವ ಹಾಲಿ ಒಲಿಂಪಿಕ್ ಚಾಂಪಿಯನ್ ಚಿನ್ನದ ಹುಡುಗ ನೀರಜ್ ಚೋಪ್ರಾ ತಮ್ಮ ನೆಚ್ಚಿನ ಮತ್ತು ಭಾರತದ ಸ್ಟಾರ್​ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರಿಗೆ ತಮ್ಮ ವೇಗವನ್ನು ಹೆಚ್ಚಿಸುವ ಕುರಿತು ಒಳನೋಟದ ಸಲಹೆ ನೀಡಿದ್ದಾರೆ. ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಏಕದಿನ ವಿಶ್ವಕಪ್ ಫೈನಲ್​ ಪಂದ್ಯವನ್ನು ವೀಕ್ಷಿಸಿದ್ದ ನೀರಜ್, ಬುಮ್ರಾ ಅವರ ವಿಶಿಷ್ಟ ಬೌಲಿಂಗ್ ಶೈಲಿಯನ್ನು ಶ್ಲಾಘಿಸಿದ್ದಾರೆ. ಇದೇ ವೇಳೆ ಅವರನ್ನು ತಮ್ಮ ಆದ್ಯತೆಯ ವೇಗದ ಬೌಲರ್ ಎಂದು ಹೇಳಿದ್ದಾರೆ.

“ನಾನು ಜಸ್ಪ್ರೀತ್ ಬುಮ್ರಾ ಅವರನ್ನು ಸಾಕಷ್ಟು ಇಷ್ಟಪಡುತ್ತೇನೆ. ಅವರ ಬೌಲಿಂಗ್​ ಶೈಲಿಯನ್ನು ವಿಶೇಷವಾಗಿ ಆಸ್ವಾದಿಸುತ್ತೇನೆ ” ಎಂದು ನೀರಜ್ ಇಂಡಿಯನ್ ನ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ವಿಶ್ವಕಪ್​​ನಲ್ಲಿ ಬುಮ್ರಾ ಅವರ ಅಸಾಧಾರಣ ಪ್ರದರ್ಶನದಿಂದಾಗಿ ಅವರಿಗೆ 20 ವಿಕೆಟ್​ಗಳನ್ನು ಗಳಿಸಲು ಸಹಾಯ ಮಾಡಿತು. ಚೆಂಡನ್ನು ಎರಡೂ ರೀತಿಯಲ್ಲಿ ಸ್ವಿಂಗ್ ಮಾಡುವ ಅವರ ಅಸಾಧಾರಣ ಸಾಮರ್ಥ್ಯವು ಭಾರತದ ಯಶಸ್ಸಿಗೆ ಕೊಡುಗೆ ನೀಡಿದೆ. ಬುಮ್ರಾ ಅವರ ಅದ್ಭುತ ಪ್ರದರ್ಶನದ ಹೊರತಾಗಿಯೂ, ಚೋಪ್ರಾ ಅವರ ವೇಗವನ್ನು ಹೆಚ್ಚಿಸಬೇಕು ಎಂಬ ಸಣ್ಣ ಬದಲಾವಣೆಯನ್ನೂ ಸೂಚಿಸಿದ್ದಾರೆ.

ಹೆಚ್ಚು ದೂರ ಓಡಲಿ

ತಮ್ಮ ಎಸೆತಗಳಿಗೆ ಇನ್ನಷ್ಟು ವೇಗ ನೀಡಲು ಬುಮ್ರಾ ತಮ್ಮ ರನ್-ಅಪ್ ಅನ್ನು ಹೆಚ್ಚಿಸಬೇಕು ಎಂದು ನಾನು ಭಾವಿಸುತ್ತೇನೆ. ಜಾವೆಲಿನ್ ಎಸೆತಗಾರರಾಗಿ ನಾನು ಹೇಳುವುದಾದರೆ ಬೌಲರ್​ಗಳು ತಮ್ಮ ರನ್-ಅಪ್ ಅನ್ನು ಸ್ವಲ್ಪ ಹಿಂದಿನಿಂದ ಪ್ರಾರಂಭಿಸಿದರೆ ವೇಗವನ್ನು ವೃದ್ದಿಸಲು ಸಾಧ್ಯವಿದೆ ಎಂದು ಹೇಳುತ್ತೇನೆ. ಆದರೆ, ಬುಮ್ರಾ ಅವರ ಬೌಲಿಂಗ್​ ಶೈಲಿಯನ್ನು ನಾನು ಇಷ್ಟಪಡುತ್ತೇನೆ, “ಎಂದು ಅವರು ಹೇಳಿದರು.

Exit mobile version