Site icon Vistara News

WTC Final 2023 : ಸೋಲಿನ ಕಾರಣಗಳನ್ನು ಬಿಡಿಸಿ ಹೇಳಿದ ನಾಯಕ ರೋಹಿತ್ ಶರ್ಮಾ

Rohit Sharma

#image_title

ಲಂಡನ್​ : ವಿಶ್ವ ಟೆಸ್ಟ್ ಚಾಂಪಿಯನ್​​ಷಿಪ್​ (ಡಬ್ಲ್ಯುಟಿಸಿ) ಫೈನಲ್​​ನಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಹೀನಾಯ ಸೋಲನ್ನು ಅನುಭವಿಸಿದೆ. ಡಬ್ಲ್ಯುಟಿಸಿ ಫೈನಲ್ ಪಂದ್ಯದ ಅಂತಿಮ ದಿನದಂದು ಪ್ಯಾಟ್ ಕಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ ತಂಡ ರೋಹಿತ್ ಶರ್ಮಾ ನೇತೃತ್ವದ ತಂಡವನ್ನು 234 ರನ್​​ಗಳಿಗೆ ಆಲೌಟ್ ಮಾಡಿತು. ಇದರೊಂದಿಗೆ ಭಾರತ ತಂಡ ಆಘಾತಕಾರಿ ಅನುಭವಕ್ಕೆ ಒಳಗಾಯಿತು. ಭಾರತ ತಂಡ ಬ್ಯಾಟರ್​ಗಳು ತೀವ್ರ ವೈಫಲ್ಯ ಕಂಡರೆ ಬೌಲರ್​​ಗಳು ಅದಕ್ಕಿಂತ ಮೊದಲು ಆಸೀಸ್​ ತಂಡದ ಬ್ಯಾಟರ್​​ಗಳ ವಿರುದ್ಧ ದುರ್ಬಲರಂತೆ ಕಂಡು ಬಂದರು. ಈ ಎಲ್ಲ ಸಂಗತಿಗಳು ನಮ್ಮ ತಂಡದ ಸೋಲಿಗೆ ಕಾರಣ ಎಂದು ಟೀಮ್​ ಇಂಡಿಯಾ ನಾಯಕ ರೋಹಿತ್​ ಶರ್ಮಾ ಹೇಳಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಡಬ್ಲ್ಯುಟಿಸಿ ಫೈನಲ್​ನ ಎರಡನೇ ಇನಿಂಗ್ಸ್​ನಲ್ಲಿ 444 ರನ್​​ಗಳ ವಿಶ್ವ ದಾಖಲೆಯ ವಿಜಯದ ಗುರಿಯನ್ನು ಬೆನ್ನಟ್ಟಿದ ಟೀಮ್ ಇಂಡಿಯಾ, ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯ ರಹಾನೆ ನೆರವಿನಿಂದ ನಾಲ್ಕನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್​ ನಷ್ಟಕ್ಕೆ 164 ರನ್​ ಬಾರಿಸಿತ್ತು. ಆದರೆ ಐದನೇ ದಿನ ಆಸ್ಟ್ರೇಲಿಯಾ ಬೌಲರ್​​ಗಳು ಮೇಲುಗೈ ಸಾಧಿಸಿ ಜಯವನ್ನು ತಮ್ಮದಾಗಿಸಿಕೊಂಡರು.

ಭಾರತದ ಸೋಲಿನ ಬಗ್ಗೆ ಮಾತನಾಡಿದ ನಾಯಕ ರೋಹಿತ್ ಶರ್ಮಾ. ದಿ ಓವಲ್​​ನಲ್ಲಿ ತಮ್ಮ ತಂಡದ ಬೌಲಿಂಗ್ ಪ್ರದರ್ಶನವು ಉತ್ತಮವಾಗಿರಲಿಲ್ಲ ಎಂದು ಒಪ್ಪಿಸಿಕೊಂಡರು. ಸೋಲಿಗೆ ಭಾರತ ತಂಡದ ಆಟಗಾರರೇ ಕಾರಣ ಎಂಬ ಹಿರಿಯ ಕ್ರಿಕೆಟಿಗರ ಅಭಿಪ್ರಾಯವನ್ನು ಭಾರತ ತಂಡದ ನಾಯಕನೂ ಒಪ್ಪಿಕೊಂಡರು.

ಇದನ್ನೂ ಓದಿ : WTC Final 2023 : ಐಪಿಎಲ್​ ಮುಗಿಸಿ ಓಡಿ ಬಂದು ಟೆಸ್ಟ್​ ಚಾಂಪಿಯನ್​ ಆಡಿದರೆ ಗೆಲ್ಲುವುದು ಹೇಗೆ? ಕೋಚ್​ ಕಿಡಿ!​

ಟಾಸ್ ಗೆಲ್ಲುವ ಮೂಲಕ ನಾವು ಉತ್ತಮ ಆರಂಭ ಪಡೆದೆವು ಎಂದು ನಾನು ಭಾವಿಸಿದ್ದೆ. ಆ ಪರಿಸ್ಥಿತಿಗಳಲ್ಲಿ ಎದುರಾಳಿ ತಂಡವನ್ನು ಬ್ಯಾಟಿಂಗ್​​ಗೆ ಇಳಿಸಿದೆವು. ನಾವು ಮೊದಲ ಸೆಷನ್​​​ನಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಿದೆವು. ನಂತರ ನಮ್ಮ ಬೌಲಿಂಗ್​ ದಾಳಿಯ ನಮ್ಮನ್ನು ನಿರಾಸೆಗೊಳಿಸಿತು. ಆಸ್ಟ್ರೇಲಿಯಾದ ಬ್ಯಾಟ್ಸ್​​ಮನ್​​ಗಳಿಗೆ ಕಡಿವಾಣ ಹಾಕಲಿಲ್ಲ. ಟ್ರಾವಿಡ್​​ ಹೆಡ್ ಹಾಗೂ ಸ್ಟೀವನ್ ಸ್ಮಿತ್ ಉತ್ತಮ ಜತೆಯಾಟ ನೀಡಿದರು. ಈ ಜತೆಯಾಟ ಮುರಿಯುವಲ್ಲಿ ನಾವು ವಿಫಲಗೊಂಡೆವು. ಈ ಹಿನ್ನಡೆಯಿಂದ ಪುನರಾಗಮನ ಮಾಡುವುದು ಕಷ್ಟ ಎಂದು ನಮಗೆ ತಿಳಿಯಿತು. ಆದರೆ ನಾವು ಉತ್ತಮ ಪ್ರದರ್ಶನವನ್ನು ನೀಡಿದೆವು. ಕೊನೆಯವರೆಗೂ ಹೋರಾಡಿದೆವು”ಎಂದು ರೋಹಿತ್ ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಎರಡು ಫೈನಲ್ ಉತ್ತಮ ಸಾಧನೆಯೇ ಸರಿ

ಸ್ಟೀವ್ ಸ್ಮಿತ್ (121) ಮತ್ತು ಟ್ರಾವಿಸ್ ಹೆಡ್ (163) ಅವರ ಶತಕಗಳು ಡಬ್ಲ್ಯುಟಿಸಿ ಫೈನಲ್ ನ ಮೊದಲ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯಾಕ್ಕೆ ಬೃಹತ್​ 469 ರನ್​ಗಳನ್ನು ಪೇರಿಸಲು ನೆರವಾಯಿತು. ಹೆಡ್ ತಮ್ಮ ಬ್ಯಾಟಿಂಗ್​​ಗಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಟೀಮ್ ಇಂಡಿಯಾ ಪುರುಷರ ಕ್ರಿಕೆಟ್​​ನಲ್ಲಿ ಒಂದೇ ಒಂದು ಐಸಿಸಿ ಟ್ರೋಫಿಯನ್ನು ಗೆಲ್ಲದೆ 10 ವರ್ಷಗಳನ್ನು ಕಳೆದಿವೆ. ಸೌತಾಂಪ್ಟನ್​​ನಲ್ಲಿ ನಡೆದ 2021ರ ಫೈನಲ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಸೋತಿತ್ತು.

ಎರಡು ಫೈನಲ್ ಪಂದ್ಯಗಳನ್ನು ಆಡುವುದು ನಮ್ಮ ಪಾಲಿಗೆ ಉತ್ತಮ ಸಾಧನೆಯಾಗಿದೆ. ಆದರೆ ನಾವು ಪ್ರಶಸ್ತಿ ಗೆಲ್ಲಲಬೇಕಾಗಿತ್ತು. ಈ ಹಂತಕ್ಕೇರಲು ಕಳೆದ ಎರಡು ವರ್ಷಗಳಲ್ಲಿ ನಾವು ಏನು ಮಾಡಿದ್ದೇವೆ ಎಂಬುದರ ಕ್ರೆಡಿಟ್ ಕೂಡ ತೆಗೆದುಕೊಳ್ಳುವುದಕ್ಕೂ ಸಾಧ್ಯವಾಗುತ್ತಿಲ್ಲ. ಆದರೆ ನಾವು ತಲೆ ಎತ್ತಿ ಹೋರಾಡುತ್ತೇವೆ ಎಂದು ಹೇಳಿದರು. ಇದೇ ವೇಳೆ ಅವರು ಅಭಿಮಾನಿಗಳಿಗೆ ಧನ್ಯವಾದಗಳನ್ನು ತಿಳಿಸಿದರು.

Exit mobile version