Site icon Vistara News

Rohit Sharma: ಜೈಸ್ವಾಲ್​, ಜುರೆಲ್​, ಸರ್ಫರಾಜ್​ಗೆ ವಿಶೇಷ ಮೆಚ್ಚುಗೆ ಸೂಚಿಸಿದ ರೋಹಿತ್​; ಫೋಟೊ ವೈರಲ್​

rohit sharma and sarfaraz khan

ಮುಂಬಯಿ: ರಾಜ್​ಕೋಟ್​ನಲ್ಲಿ ನಡೆದ ಇಂಗ್ಲೆಂಡ್​ ವಿರುದ್ಧದ ಮೂರನೇ ಟೆಸ್ಟ್​(India vs England 3rd Test) ಪಂದ್ಯದಲ್ಲಿ ಅಮೋಘ ಪ್ರದರ್ಶನ ತೋರಿದ ಯುವ ಆಟಗಾರರಾದ ಯಶಸ್ವಿ ಜೈಸ್ವಾಲ್(Yashasvi Jaiswal)​, ಸರ್ಫರಾಜ್​ ಖಾನ್(Sarfaraz Khan)​ ಮತ್ತು ಧ್ರುವ್​ ಜುರೇಲ್(Dhruv Jurel)​ ಬಗ್ಗೆ ತಂಡದ ನಾಯಕ ರೋಹಿತ್​ ಶರ್ಮ(Rohit Sharma)ವಿಶೇಷ ಮೆಚ್ಚುಗೆ ಸೂಚಿಸಿದ್ದಾರೆ.

ರೋಹಿತ್​ ಶರ್ಮ ಅವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಜೈಸ್ವಾಲ್​, ಸರ್ಫರಾಜ್ ಮತ್ತು ಜುರೇಲ್ ಅವರ ಫೋಟೊ ಕೊಲಾಜ್ ಮಾಡಿ “ಈ ಜಾಯಮಾನದ ಮಕ್ಕಳು”(Ye aajkal ke bachche) ಎಂದು ಬರೆದು ಸ್ಟೋರಿ ಹಾಕಿದ್ದಾರೆ. ಈ ಮೂಲಕ ಯುವ ಆಟಗಾರರಿಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ರೋಹಿತ್​ ಅವರ ಈ ಸ್ಟೋರಿಯ ಫೋಟೊವನ್ನು ಸ್ಕ್ರೀನ್​ ಶಾಟ್​ ಹೊಡೆದು ಐಪಿಎಲ್​ ಫ್ರಾಂಚೈಸಿಯಾದ ಮುಂಬೈ ಇಂಡಿಯನ್ಸ್​ ತನ್ನ ಅಧಿಕೃತ ಟ್ವಿಟರ್​ ಎಕ್ಸ್​ನಲ್ಲಿ ಹಂಚಿಕೊಂಡಿದೆ.

ಮುಂಬೈ ತಂಡಕ್ಕೆ 5 ಬಾರಿ ಕಪ್​ ತಂದುಕೊಟ್ಟರೂ ಕೂಡ ರೋಹಿತ್​ ಅವರನ್ನು ಮುಂಬೈ ಫ್ರಾಂಚೈಸಿ ತಂಡದ ನಾಯಕತ್ವದಿಂದ ಕೆಳಗಿಳಿಸಿದೆ. ಅವರ ಸ್ಥಾನಕ್ಕೆ ಗುಜರಾತ್​ ಟೈಟಾನ್ಸ್​ ತಂಡದ ನಾಯಕನಾಗಿದ್ದ ಹಾರ್ದಿಕ್​ ಪಾಂಡ್ಯ ಅವರನ್ನು ಟ್ರೇಟ್​ ಮೂಲಕ ಖರೀದಿ ಮಾಡಿ ತಂಡಕ್ಕೆ ಸೇರಿಸುವ ಜತೆಗೆ ನಾಯಕತ್ವ ನೀಡಿದೆ. ಮುಂಬೈಯ ಈ ನಡೆಗೆ ರೋಹಿತ್​ ಅಭಿಮಾನಿಗಳು ಸೇರಿ ಹಲವು ಮಾಜಿ ಮತ್ತು ಹಾಲಿ ಆಟಗಾರರು ಕೂಡ ಬೇಸರ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ IND vs ENG: ಪಿಚ್‌ ಯಾವುದೇ ಆಗಿರಲಿ, ನಮ್ಮ ತಂಡಕ್ಕೆ ಗೆಲ್ಲುವ ಸಾಮರ್ಥ್ಯವಿದೆ ಎಂದ ರೋಹಿತ್​

ಸರ್ಫರಾಜ್​ ಖಾನ್​ ಮತ್ತು ಜುರೆಲ್​ ಈ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದರು. ಚೊಚ್ಚಲ ಪಂದ್ಯದಲ್ಲೇ ಉತ್ತಮ ಪ್ರದರ್ಶನ ತೋರುವ ಮೂಲಕ ಟೀಮ್​ ಇಂಡಿಯಾದ ಬರವಸೆಯ ಆಟಗಾರರಾಗಿ ಗುರುತಿಸಿಕೊಂಡಿದ್ದಾರೆ. ಸರ್ಫರಾಜ್​ ಆಡಿದ ಎರಡೂ ಇನಿಂಗ್ಸ್​ನಲ್ಲಿಯೂ ಅರ್ಧಶತಕ ಬಾರಿಸಿದರು. ಮೊದಲ ಇನಿಂಗ್ಸ್​ನಲ್ಲಿ ಜಡೇಜಾ ಅವರಿಂದ ಸರ್ಫರಾಜ್​ ರನೌಟ್​ ಆಗುವಾಗ ಡ್ರೆಸಿಂಗ್​ ರೋಮ್​ನಲ್ಲಿದ್ದ ರೋಹಿತ್​ ತಮ್ಮ ಕ್ಯಾಪ್ ಎಸೆದು ಅವರನ್ನು ಔಟ್​ ಆಗುವಂತೆ ಮಾಡಿದ ಜಡೇಜಾ ವಿರುದ್ಧ ಆಕ್ರೋಶ ಹೊರಹಾಕಿದ್ದರು.

ಜೈಸ್ವಾಲ್​ ಅವರು ದ್ವಿಶತಕ ಬಾರಿಸುವ ಮೂಲಕ ಹಲವು ದಾಖಲೆ ಬರೆದರು. ವಿಶಾಖಪಟ್ಟದಲ್ಲಿ ನಡೆದಿದ್ದ 2ನೇ ಟೆಸ್ಟ್​ನಲ್ಲಿಯೂ ಜೈಸ್ವಾಲ್​ ದ್ವಿಶತಕ ಬಾರಿಸಿದ್ದರು. ಒಟ್ಟಾರೆ ಯುವ ಆಟಗಾರರು ತೋರುತ್ತಿರುವ ಪ್ರದರ್ಶನಕ್ಕೆ ರೋಹಿತ್​ ಫೋಟೊ ಹಾಕಿ ಪ್ರಶಂಸೆ ವ್ಯಕ್ತಪಡಿಸುವ ಮೂಲಕ ಬೆಂಬಲ ಸೂಚಿಸಿದ್ದಾರೆ.

ಪಂದ್ಯದ ಗೆಲುವಿನ ಬಳಿಕ ಮಾತನಾಡಿದ, ಪಿಚ್‌ ಯಾವುದೇ ಆಗಿರಲಿ, ನಮ್ಮ ತಂಡಕ್ಕೆ ಗೆಲ್ಲುವ ಸಾಮರ್ಥ್ಯವಿದೆ ಎಂದು ಹೇಳಿದ್ದಾರೆ. ‘ಸ್ಪಿನ್‌ ಸ್ನೇಹಿ ಪಿಚ್‌ ಸೇರಿ ಯಾವುದೇ ಪಿಚ್‌ಗಳಲ್ಲೂ ನಮ್ಮ ತಂಡ ಗೆಲ್ಲಲಿದೆ. ಹಲವು ವರ್ಷಗಳಿಂದ ನಾವು ಎದುರಾದ ಸವಾಲುಗಳನ್ನು ಮೆಟ್ಟಿನಿಂತು ಗೆದ್ದಿದ್ದೇವೆ. ಮುಂದೆಯೂ ಗೆಲ್ಲುತ್ತೇವೆ’ ಎಂದು ಹೇಳಿದರು. ಇದೇ ವೇಳೆ ನಾವು ಯಾವುದೇ ಕ್ರೀಡಾಂಗಣದ ಪಿಚ್‌ ಕ್ಯುರೇಟರ್​ಗಳ ಬಳಿ ಪಿಚ್‌ ಬಗ್ಗೆ ಚರ್ಚಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

Exit mobile version