Site icon Vistara News

Rohit Sharma | ಬಾಂಗ್ಲಾ ಸರಣಿಗೆ ಸಜ್ಜಾಗುತ್ತಿರುವ ರೋಹಿತ್​ ಶರ್ಮ; ನೆಟ್ಸ್​ನಲ್ಲಿ ಭರ್ಜರಿ ತಾಲೀಮು

Rohit Sharma

ಮುಂಬಯಿ: ಮುಂದಿನ ತಿಂಗಳು ಭಾರತ ತಂಡ ಬಾಂಗ್ಲಾದೇಶ ಪ್ರವಾಸ ಕೈಗೊಳ್ಳಲಿದ್ದು ಏಕದಿನ ಮತ್ತು ಟೆಸ್ಟ್​ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಈ ಸರಣಿಯಲ್ಲಿ ಭರ್ಜರಿ ಪ್ರದರ್ಶನ ತೋರುವ ನಿಟ್ಟಿನಲ್ಲಿ ನಾಯಕ ರೋಹಿತ್​ ಶರ್ಮಾ ನೆಟ್ಸ್​ನಲ್ಲಿ ಭರ್ಜರಿ ಬ್ಯಾಟಿಂಗ್​ ಅಭ್ಯಾಸ ನಡೆಸಿದ್ದಾರೆ.

ನ್ಯೂಜಿಲ್ಯಾಂಡ್​ ಪ್ರವಾಸಕ್ಕೆ ವಿಶ್ರಾಂತಿ ಪಡೆದಿರುವ ರೋಹಿತ್​ ಇದೀಗ ನೆಟ್​ನಲ್ಲಿ ಅಭ್ಯಾಸ ನಡೆಸುತ್ತಿರುವ ಫೋಟೊವನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ರೋಹಿತ್​ ಜತೆಗೆ ವಿರಾಟ್​ ಕೊಹ್ಲಿ, ಕೆಲ್​. ಎಲ್ ರಾಹುಲ್​ ಸೇರಿ ಪ್ರಮುಖ ಹಿರಿಯ ಆಟಗಾರರಿಗೆ ಕಿವೀಸ್​ ಸರಣಿಯಿಂದ ವಿಶ್ರಾಂತಿ ನೀಡಲಾಗಿತ್ತು. ಆದರೆ ಈ ಎಲ್ಲ ಆಟಗಾರರು ಬಾಂಗ್ಲಾ ವಿರುದ್ಧದ ಸರಣಿಗೆ ತಂಡ ಸೇರಿಕೊಳ್ಳಲಿದ್ದಾರೆ.

ವಿರಾಟ್ ಕೊಹ್ಲಿಯೂ ಬಾಂಗ್ಲಾ ಸರಣಿಗೆ ಮುನ್ನ ಜಿಮ್​ನಲ್ಲಿ ವರ್ಕ್​ಔಟ್​ ಮಾಡಿ ಫಿಟ್​ನೆಸ್​ ಕಾಯ್ದುಕೊಳ್ಳುತ್ತಿರುವ ವಿಡಿಯೊ ಕೆಲ ದಿನಗಳ ಹಿಂದೆ ವೈರಲ್ ಆಗಿತ್ತು. ಇದೀಗ ನಾಯಕ ರೋಹಿತ್ ಶರ್ಮಾ ಕೂಡ ಪ್ಯಾಡ್ ಕಟ್ಟಿ ಬ್ಯಾಟಿಂಗ್ ಅಭ್ಯಾಸ ಶುರು ಮಾಡಿದ್ದು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ನೆಟ್ ಒಳಗಡೆ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿರುವ ಫೋಟೊವನ್ನು ಹಂಚಿಕೊಂಡಿದ್ದಾರೆ. ಸದ್ಯ ಫಾರ್ಮ್​ನಲ್ಲಿ ಇಲ್ಲದ ರೋಹಿತ್​ಗೆ ಬಾಂಗ್ಲಾ ಸರಣಿ ಪ್ರಮುಖವಾಗಿದೆ.

ಇದನ್ನೂ ಓದಿ | Virat Kohli | ವಿಶ್ರಾಂತಿಯ ಅವಧಿಯನ್ನು ಚಾರಿಟಿ ಕೆಲಸಕ್ಕೆ ಮೀಸಲಿಟ್ಟ ವಿರಾಟ್​ ಕೊಹ್ಲಿ

Exit mobile version