ಬೆಂಗಳೂರು: ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮ ಅವರು ನೆದರ್ಲೆಂಡ್ಸ್ ವಿರುದ್ಧ ಅರ್ಧಶತಕ ಬಾರಿಸುವ ಮೂಲಕ ಹಲವು ದಾಖಲೆಗಳನ್ನು ಬರೆದಿದ್ದಾರೆ. 54 ಎಸೆತಗಳನ್ನು ಎದುರಿಸಿ 61 ರನ್ ಬಾರಿಸಿ ಔಟಾದರು. ಅವರ ಈ ಅರ್ಧಶತಕದ ಇನಿಂಗ್ಸ್ನಲ್ಲಿ 2 ಸಿಕ್ಸರ್ ಮತ್ತು 8 ಬೌಂಡರಿ ಸಿಡಿಯಿತು.
ವಿಶ್ವಕಪ್ನಲ್ಲಿ 2ನೇ ಬಾರಿಗೆ 500 ಪ್ಲಸ್ ರನ್
ರೋಹಿತ್ ಶರ್ಮ ಅವರು ಸಚಿನ್ ತೆಂಡೂಲ್ಕರ್ ಬಳಿಕ ವಿಶ್ವಕಪ್ನಲ್ಲಿ ಅತ್ಯಧಿಕ 500 ಪ್ಲಸ್ ರನ್ ಗಳಿಸಿದ 2ನೇ ಆಟಗಾರ ಎನಿಸಿಕೊಂಡಿದ್ದಾರೆ. ಸಚಿನ್ ಅವರು 1996 ಮತ್ತು 2003ರ ವಿಶ್ವಕಪ್ನಲ್ಲಿ ಈ ದಾಖಲೆ ಬರೆದಿದ್ದರು. ರೋಹಿತ್ 2019 ಮತ್ತು ಪ್ರಸಕ್ತ ಸಾಲಿನ ವಿಶ್ವಕಪ್ನಲ್ಲಿ ಈ ಸಾಧನೆ ಮಾಡಿದ್ದಾರೆ. ಸತತವಾಗಿ ವಿಶ್ವಕಪ್ ಟೂರ್ನಿಯಲ್ಲಿ 500 ಪ್ಲಸ್ ಗಳಿಸಿದ ಸಾಧಕರಲ್ಲಿ ರೋಹಿತ್ಗೆ ಮೊದಲ ಸ್ಥಾನ.
ನಾಯಕನಾಗಿ ದಾಖಲೆ
ಭಾರತ ತಂಡದ ನಾಯಕನಾಗಿ ವಿಶ್ವಕಪ್ನಲ್ಲಿ ಅತ್ಯಧಿಕ ರನ್ ಗಳಿಸಿದ ಆಟಗಾರ ಎಂಬ ಹಿರಿಮೆಗೂ ರೋಹಿತ್ ಶರ್ಮ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಸೌರವ್ ಗಂಗೂಲಿ ಅವರ ಹೆಸರಿನಲ್ಲಿತ್ತು. ಗಂಗೂಲಿ 2003ರ ವಿಶ್ವಕಪ್ನಲ್ಲಿ 465 ರನ್ ಬಾರಿಸಿದ್ದರು. ರೋಹಿತ್ ಸದ್ಯ 503* ರನ್ ಬಾರಿಸಿದ್ದಾರೆ. ವಿರಾಟ್ ಕೊಹ್ಲಿಗೆ ಮೂರನೇ ಸ್ಥಾನ. ಅವರು 2019ರ ಆವೃತ್ತಿಯಲ್ಲಿ 443 ರನ್ ಬಾರಿಸಿದ್ದರು.
ಇದನ್ನೂ ಓದಿ Rohit Sharma: ಸಿಕ್ಸರ್ ಬಾರಿಸಿ ದಾಖಲೆ ಬರೆದ ಹಿಟ್ಮ್ಯಾನ್ ರೋಹಿತ್ ಶರ್ಮ
ವಿಶ್ವಕಪ್ನಲ್ಲಿ ಅತ್ಯಧಿಕ ರನ್ ಬಾರಿಸಿದ ಭಾರತದ ನಾಯಕರು
ರೋಹಿತ್ ಶರ್ಮ-503* ರನ್ (2023)
ಸೌರವ್ ಗಂಗೂಲಿ-465 ರನ್ (2003)
ವಿರಾಟ್ ಕೊಹ್ಲಿ-443 ರನ್ (2019)
ಮೊಹಮ್ಮದ್ ಅಜರುದ್ದೀನ್-332 ರನ್(1992)
ಕಪಿಲ್ ದೇವ್-303 ರನ್ (1983)
ಸಿಕ್ಸರ್ ಬಾರಿಸಿ ದಾಖಲೆ ಬರೆದ ರೋಹಿತ್
ಈ ಪಂದ್ಯದಲ್ಲಿ ರೋಹಿತ್ 2 ಸಿಕ್ಸರ್ ಬಾರಿಸಿ ಕ್ಯಾಲೆಂಡರ್ ವರ್ಷದಲ್ಲಿ ಅತ್ಯಧಿಕ ಸಿಕ್ಸರ್ ಬಾರಿಸಿದ ಆಟಗಾರನಾಗಿ ಮೂಡಿಬಂದರು. ಇದಕ್ಕೂ ಮುನ್ನ ಈ ದಾಖಲೆ ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕ ಹಾಗೂ ಆಟಗಾರ ಎಬಿ ಡಿ ವಿಲಿಯರ್ಸ್ ಹೆಸರಿನಲ್ಲಿತ್ತು. ವಿಲಿಯರ್ಸ್ ಅವರು 2015ರಲ್ಲಿ 58 ಸಿಕ್ಸರ್ ಬಾರಿಸಿದ್ದರು. ಇದೀಗ ರೋಹಿತ್ ಅವರು ಸದ್ಯ 2023 ಸಾಲಿನಲ್ಲಿ 59 ಸಿಕ್ಸರ್ ಬಾರಿಸಿದ್ದಾರೆ. ವಿಶ್ವಕಪ್ ಸೆಮಿಫೈನಲ್ ಆಡಲಿರುವ ರೋಹಿತ್ ತಮ್ಮ ಸಿಕ್ಸರ್ಗಳ ಸಂಖ್ಯೆಯನ್ನು ಹೆಚ್ಚಿಸುವ ಅವಕಾಶವಿದೆ.
ಕ್ಯಾಲೆಂಡರ್ ವರ್ಷದಲ್ಲಿ ಅತ್ಯಧಿಕ ಸಿಕ್ಸರ್ ಬಾರಿಸಿದ ಆಟಗಾರರು
ರೋಹಿತ್ ಶರ್ಮ-59* ಸಿಕ್ಸರ್
ಎಬಿ ಡಿ ವಿಲಿಯರ್ಸ್-58 ಸಿಕ್ಸರ್
ಕ್ರಿಸ್ ಗೇಲ್-56 ಸಿಕ್ಸರ್
ಶಾಹೀದ್ ಅಫ್ರಿದಿ- 48 ಸಿಕ್ಸರ್