Site icon Vistara News

Rohit Sharma: ಲಂಕಾ ವಿರುದ್ಧ ಅರ್ಧಶತಕ ಬಾರಿಸಿ ಹಲವು ದಾಖಲೆ ಬರೆದ ರೋಹಿತ್​ ಶರ್ಮ

Rohit Sharma

Rohit Sharma: Rohit Sharma shatters Eoin Morgan's world record for sixes in international cricket

ಕೊಲಂಬೊ: ಶ್ರೀಲಂಕಾ(Sri Lanka vs India 1st ODI) ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್​ ನಡೆಸಿ ಅರ್ಧಶತಕ ಬಾರಿಸಿದ ಟೀಮ್​ ಇಂಡಿಯಾದ ನಾಯಕ ರೋಹಿತ್​ ಶರ್ಮ(Rohit Sharma) ಅವರು ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಅವರ ದಾಖಲೆಯ ಪಟ್ಟಿ ಹೀಗಿದೆ.

ಸಿಕ್ಸರ್​ ದಾಖಲೆ

47 ಎಸೆತಗಳಿಂದ 58 ರನ್​ ಬಾರಿಸಿದ ರೋಹಿತ್​ ತಮ್ಮ ಈ ಬ್ಯಾಟಿಂಗ್​ ಇನಿಂಗ್ಸ್​ನಲ್ಲಿ 7 ಬೌಂಡರಿ ಮತ್ತು 3 ಸಿಕ್ಸರ್​ ಬಾರಿಸಿದರು. ಈ ಮೂರು ಸಿಕ್ಸರ್​​ ಬಾರಿಸಿದ ವೇಳೆ ರೋಹಿತ್​ ನಾಯಕನಾಗಿ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಸಿಕ್ಸರ್​ ಬಾರಿಸಿದ ಆಟಗಾರ ಎನಿಸಿಕೊಂಡರು. ಇದಕ್ಕೂ ಮುನ್ನ ಈ ದಾಖಲೆ ಇಂಗ್ಲೆಂಡ್ ತಂಡದ ಮಾಜಿ ನಾಯಕ ಇಯಾನ್‌ ಮಾರ್ಗನ್​(233 ಸಿಕ್ಸರ್​) ಹೆಸರಿನಲ್ಲಿತ್ತು. ಇದೀಗ ರೋಹಿತ್(234 ಸಿಕ್ಸರ್​)​ ಈ ದಾಖಲೆಯನ್ನು ಹಿಂದಿಕ್ಕಿದ್ದಾರೆ. 211 ಸಿಕ್ಸರ್​ ಬಾರಿಸಿರುವ ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ಮೂರನೇ ಸ್ಥಾನದಲ್ಲಿದ್ದಾರೆ.

ನಾಯಕನಾಗಿ ಅತಿ ಹೆಚ್ಚು ಸಿಕ್ಸರ್​ ಬಾರಿಸಿದ ಆಟಗಾರರು


ರೋಹಿತ್​ ಶರ್ಮ-234 ಸಿಕ್ಸರ್​

ಇಯಾನ್​ ಮಾರ್ಗನ್​-233 ಸಿಕ್ಸರ್

ಮಹೇಂದ್ರ ಸಿಂಗ್​ ಧೋನಿ-211 ಸಿಕ್ಸರ್​

ರಿಕಿ ಪಾಂಟಿಂಗ್​-171 ಸಿಕ್ಸರ್​

ಬ್ರೆಂಡನ್​ ಮೆಕಲಮ್​-170 ಸಿಕ್ಸರ್​ 

ಆರಂಭಿಕನಾಗಿ 15 ಸಾವಿರ ರನ್​

ರೋಹಿತ್​ ಶರ್ಮ 58 ರನ್​ ಬಾರಿಸುಮ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಆರಂಭಿಕನಾಗಿ ಅತೀ ವೇಗವಾಗಿ 15 ಸಾವಿರ ರನ್ ಕಲೆಹಾಕಿದ ವಿಶ್ವದ 2ನೇ, ಒಟ್ಟಾರೆಯಾಗಿ 10ನೇ ಬ್ಯಾಟ್ಸ್​ಮನ್ ಎನಿಸಿಕೊಂಡರು. ಡೇವಿಡ್ ವಾರ್ನರ್ 15 ಸಾವಿರ ರನ್ ಪೂರೈಸಲು 361 ಇನಿಂಗ್ಸ್​ಗಳನ್ನು ತೆಗೆದುಕೊಂಡಿದ್ದರು. ಈ ಮೂಲಕ ಅತೀ ವೇಗವಾಗಿ 15000 ರನ್ ಕಲೆಹಾಕಿದ ವಿಶ್ವದ 2ನೇ ಆರಂಭಿಕ ಆಟಗಾರ ಎನಿಸಿಕೊಂಡಿದ್ದರು. ಇದೀಗ ರೋಹಿತ್​ ಕೇವಲ 352 ಇನಿಂಗ್ಸ್​ಗಳ ಮೂಲಕ 15 ಸಾವಿರ ರನ್ ಕಲೆಹಾಕಿ ವಾರ್ನರ್​ ದಾಖಲೆ ಹಿಂದಿಕ್ಕಿದ್ದಾರೆ. ದಾಖಲೆ ಸಚಿನ್​ ತೆಂಡೂಲ್ಕರ್​ ಹೆಸರಿನಲ್ಲಿದೆ. ಸಚಿನ್​ ಆರಂಭಿಕನಾಗಿ 331 ಇನಿಂಗ್ಸ್​ಗಳ ಮೂಲಕ ಈ ದಾಖಲೆ ನಿರ್ಮಿಸಿದ್ದರು.

ಇದನ್ನೂ ಓದಿ Rohit Sharma : ಟಿ20 ನಿವೃತ್ತಿಯಲ್ಲ, ಅದು ವಿಶ್ರಾಂತಿ; ಕೌತುಕ ಮೂಡಿಸಿದ ರೋಹಿತ್ ಶರ್ಮಾ ಹೇಳಿಕೆ

ಪಂದ್ಯ ಟೈ


ಆರ್.ಪ್ರೇಮದಾಸ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದಿದ್ದ ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಏಕದಿನ ಪಂದ್ಯ ರೋಚಕ ಹಣಾಹಣಿಗೆ ಸಾಕ್ಷಿಯಾಗಿ ಟೈ ನಲ್ಲಿ ಅಂತ್ಯಗೊಂಡಿತ್ತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಶ್ರೀಲಂಕಾ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 230 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಭಾರತ ಅಂತಿಮ ಹಂತದಲ್ಲಿ ನಾಟಕೀಯ ಕುಸಿತ ಕಂಡು 47.5 ಓವರ್ ಗಳಲ್ಲಿ 230 ರನ್ ಗಳಿಗೆ ಆಲೌಟಾಯಿತು. ಗೆಲುವಿಗೆ ಒಂದು ರನ್​ ಬೇಕಿದ್ದಾಗ ಶಿವಂ ದುಬೆ ಮತ್ತು ಅರ್ಶ್​ದೀಪ್​ ಸಿಂಗ್​ ಸತತವಾಗಿ ಎಲ್​ಬಿಡಬ್ಲ್ಯು ಬಲೆಗೆ ಬಿದ್ದು ವಿಕೆಟ್​ ಕೈಚೆಲ್ಲಿದರು. ಸೋಲುವ ಭೀತಿಯಲ್ಲಿದ್ದ ಲಂಕಾ ಅಸಾಮಾನ್ಯ ಪ್ರದರ್ಶನ ತೋರಿ ಪಂದ್ಯವನ್ನು ಟೈ ಗೊಳಿಸುವ ಮೂಲಕ ನಿಟ್ಟುಸಿರುಬಿಟ್ಟಿತು.

Exit mobile version