ಮುಂಬಯಿ: ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮ(Rohit Sharma) ಅವರು ಅಮೆರಿಕಾದಲ್ಲಿ ಕ್ರಿಕೆಟ್ ಅಕಾಡೆಮಿಯೊಂದನ್ನು(Rohit Sharma Cricket Academy) ಆರಂಭಿಸಿದ್ದಾರೆ. ವಿಂಡೀಸ್ ಏಕದಿನ ಪ್ರವಾಸ ಮುಗಿಸಿ ಅಮೆರಿಕಾಕ್ಕೆ ತೆರಳಿ ರೋಹಿತ್ ತಮ್ಮ ಕ್ರಿಕೆಟ್ ಅಕಾಡೆಮಿನ್ನು ಉದ್ಘಾಟಿಸಿದ್ದಾರೆ. ಈ ಕಾರ್ಯಕ್ರಮದ ವಿಡಿಯೊ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಭಾರತದಲ್ಲಿ ‘ಕ್ರಿಕಿಂಗ್‌ಡಮ್'(Crickingdom) ಹೆಸರಿನ ಕ್ರಿಕೆಟ್ ಅಕಾಡೆಮಿ ನಡೆಸುತ್ತಿರುವ ರೋಹಿತ್ ತಮ್ಮ ಹೊಸ ಬ್ರ್ಯಾಂಚ್ವೊಂದನ್ನು ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದ (USA)ದಲ್ಲಿ ಪ್ರಾರಂಭಿಸಲಿದ್ದಾರೆ. ಭಾರತದಲ್ಲಿ ಈ ಕ್ರಿಕೆಟ್ ಅಕಾಡೆಮಿ ಸಾಕಷ್ಟು ಪ್ರಸಿದ್ಧವಾಗಿದೆ. ರೋಹಿತ್ ಅವರು ವಿದೇಶದಲ್ಲಿ ತಮ್ಮ ಕ್ರಿಕೆಟ್ ಅಕಾಡೆಮಿ ತೆರೆಯುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೇ ಅವರು ಸಿಂಗಾಪುರ ಮತ್ತು ಜಪಾನ್ನಲ್ಲಿ ಕ್ರಿಕೆಟ್ ಅಕಾಡೆಮಿಗಳನ್ನು ಹೊಂದಿದ್ದಾರೆ. ಮುಂದಿನ ವರ್ಷದ ಟಿ20 ವಿಶ್ವಕಪ್ ಕೂಡ ಅಮೆರಿಕಾದಲ್ಲಿ ನಡೆಯಲಿದೆ. ಈ ಟೂರ್ನಿಗೆ ವಿಂಡೀಸ್ ಮತ್ತು ಅಮೆರಿಕ ಜಂಟಿ ಆತಿಥ್ಯವಹಿಸಿಕೊಂಡಿದೆ. ಕ್ರಿಕೆಟ್ ಕ್ಷೇತ್ರದಲ್ಲಿ ಬೆಳವಣಿಗೆ ಕಾಣತ್ತಿರುವ ಅಮೆರಿಕಾಕ್ಕೆ ರೋಹಿತ್ ಅವರ ಈ ಕ್ರಿಕೆಟ್ ಅಕಾಡೆಮಿ ಮತ್ತಷ್ಟು ಸಹಕರಿಸಲಿದೆ.
ಇದನ್ನೂ ಓದಿ Rohit Sharma: ಕೇವಲ ಇಷ್ಟು ರನ್ ಬಾರಿಸಿದರೆ ನೂತನ ದಾಖಲೆ ಬರೆಯಲಿದ್ದಾರೆ ಹಿಟ್ಮ್ಯಾನ್ ರೋಹಿತ್
ರೋಹಿತ್ ಶರ್ಮ ವಿಶ್ರಾಂತಿಯಲ್ಲಿದ್ದು ಅಮೆರಿಕದಿಂದ ಮರಳಿದ ತಕ್ಷಣ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಗೆ ಸಿದ್ಧತೆ ಆರಂಭಿಸಲಿದ್ದಾರೆ. ಇದಾದ ಬಳಿಕ ಆಸೀಸ್ ವಿರುದ್ಧದ ಏಕದಿನ ಸರಣಿ ಮತ್ತು ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. ವಿಂಡೀಸ್ ವಿರುದ್ಧದ ಏಕದಿನ ಸರಣಿಯ ಭಾಗವಾಗಿದ್ದರೂ ಮೊದಲ ಪಂದ್ಯ ಆಡಿ ಬಳಿಕದ ಎರಡು ಪಂದ್ಯಗಳಿಗೆ ವಿಶ್ರಾಂತಿ ಪಡೆದಿದ್ದರು.
ಈಗಾಗಲೇ ಟಿ20 ಮತ್ತು ಟೆಸ್ಟ್ ವಿಶ್ವಕಪ್ನಲ್ಲಿ ಕಪ್ ಗೆಲ್ಲಲು ವಿಫಲರಾದ ರೋಹಿತ್ ಏಕದಿನ ವಿಶ್ವಕಪ್ನಲ್ಲಿ ಭಾರತಕ್ಕೆ ಕಪ್ ತಂದುಕೊಡಲಿದ್ದಾರಾ ಎಂದು ಕಾದು ನೋಡಬೇಕಿದೆ. ಹಲವು ಸ್ಟಾರ್ ಆಟಗಾರರ ಗಾಯವೂ ಭಾರತ ತಂಡಕ್ಕೆ ಹಿನ್ನಡೆಯಾಗಿ ಪರಿಣಮಿಸುವ ಸಾಧ್ಯತೆಯೂ ಕಂಡುಬಂದಿದೆ. ಎಲ್ಲ ಸವಾಲನ್ನು ಮೆಟ್ಟಿ ನಿಂತು ರೋಹಿತ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿ ಕಪ್ ಗೆದ್ದರೆ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಅವರ ಹೆಸರು ಅಚ್ಚಳಿಯದೆ ಉಳಿಯಲಿದೆ.