ಪ್ರೊವಿಡೆನ್ಸ್: ಭಾರತ ತಂಡ ನಾಳೆ ನಡೆಯುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ(T20 World Cup 2024) ಇಂಗ್ಲೆಂಡ್ ವಿರುದ್ಧ(IND vs ENG Semi Final) ಕಣಕ್ಕಿಳಿಯಲಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ, ಹಿಟ್ಮ್ಯಾನ್ ಖ್ಯಾತಿಯ ರೋಹಿತ್ ಶರ್ಮ(Rohit Sharma) ಅವರಿಗೆ ಟಿ20 ವಿಶ್ವಕಪ್ ಕ್ರಿಕೆಟ್‌ನಲ್ಲಿ ವಿಶ್ವ ದಾಖಲೆಯೊಂದನ್ನು ನಿರ್ಮಿಸುವ ಸುವರ್ಣಾವಕಾಶವೊಂದಿದೆ.
ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ವಿಸ್ಫೋಟಕ ಬ್ಯಾಟಿಂಗ್ ನಡೆಸಿದ ರೋಹಿತ್, ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಕೇವಲ 4 ಬೌಂಡರಿ ಬಾರಿಸಿದರೆ, ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅತ್ಯಧಿಕ ಬೌಂಡರಿ ಬಾರಿಸಿದ ಆಟಗಾರ ಎಂಬ ದಾಖಲೆಯನ್ನು ನಿರ್ಮಿಸಲಿದ್ದಾರೆ. ಈ ಮೂಲಕ ಶ್ರೀಲಂಕಾದ ಮಾಜಿ ಆಟಗಾರ ಮಹೇಲ ಜಯವರ್ಧನೆ(Mahela Jayawardene) ಅವರ ದಾಖಲೆಯನ್ನು ಮುರಿಯಲಿದ್ದಾರೆ. ಮಹೇಲ ಜಯವರ್ಧನೆ 111 ಬೌಂಡರಿ ಬಾರಿಸಿದ್ದಾರೆ. ರೋಹಿತ್ ಸದ್ಯ 107* ಬೌಂಡರಿ ಬಾರಿಸಿದ್ದಾರೆ. ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನ ರೋಹಿತ್ ಅವರ ಬೌಂಡರಿಗಳ ಸಂಖ್ಯೆ 91 ಇತ್ತು.
ಇದನ್ನೂ ಓದಿ IND vs ENG Semi Final: ಇಂಡೋ-ಆಂಗ್ಲ ಸೆಮಿಫೈನಲ್ ಪಂದ್ಯದ ಸಂಭಾವ್ಯ ತಂಡ, ಪಿಚ್ ರಿಪೋರ್ಟ್ ಹೀಗಿದೆ
ರೇಸ್ನಲ್ಲಿ ಕೊಹ್ಲಿ
ಮಹೇಲ ಜಯವರ್ಧನೆ ಅವರ ಈ ದಾಖಲೆಯನ್ನು ಮುರಿಯಲು ಮೊದಲು ಅವಕಾಶವಿದದ್ದು ವಿರಾಟ್ ಕೊಹ್ಲಿಗೆ. ಆದರೆ ಅವರು ಆಡಿದ ಎಲ್ಲ ಪಂದ್ಯಗಳಲ್ಲಿಯೂ ವಿಫಲರಾದ ಕಾರಣ ಈ ದಾಖಲೆ ಮುರಿಯಲು ಸಾಧ್ಯವಾಗಲಿಲ್ಲ. ಈ ಸಾಧಕರ ಪಟ್ಟಿಯಲ್ಲಿ 2ನೇ ಸ್ಥಾನಿಯಾಗಿದ್ದ ಕೊಹ್ಲಿಯನ್ನು(Virat Kohli) ಹಿಂದಿಕ್ಕಿ ರೋಹಿತ್ ಮುಂದೆ ಸಾಗಿದ್ದಾರೆ. ಕೊಹ್ಲಿ ಸದ್ಯ 105* ಬೌಂಡರಿಯೊಂದಿಗೆ ಮೂರನೇ ಸ್ಥಾನಿಯಾಗಿದ್ದಾರೆ. ಸದ್ಯ ಜಯವರ್ಧನೆ ದಾಖಲೆ ಮುರಿಯಲು ಕೊಹ್ಲಿ ಮತ್ತು ರೋಹಿತ್ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ.
ಅತ್ಯಧಿಕ ಬೌಂಡರಿ ಬಾರಿದ ಬ್ಯಾಟರ್ಗಳು
ಆಟಗಾರ | ದೇಶ | ಇನಿಂಗ್ಸ್ | ಬೌಂಡರಿ |
ಮಹೇಲಾ ಜಯವರ್ಧನೆ | ಶ್ರೀಲಂಕಾ | 31 | 111 |
ರೋಹಿತ್ ಶರ್ಮ | ಭಾರತ | 45 | 107* |
ವಿರಾಟ್ ಕೊಹ್ಲಿ | ಭಾರತ | 33 | 105 |
ಡೇವಿಡ್ ವಾರ್ನರ್ | ಆಸ್ಟ್ರೇಲಿಯಾ | 41 | 101 |
ತಿಲಕರತ್ನೆ ದಿಲ್ಶನ್ | ಶ್ರೀಲಂಕಾ | 35 | 101 |
ಜಾಸ್ ಬಟ್ಲರ್ | ಇಂಗ್ಲೆಂಡ್ | 34 | 87* |
ಕ್ರಿಸ್ ಗೇಲ್ | ವೆಸ್ಟ್ ಇಂಡೀಸ್ | 31 | 78 |
ಶಕೀಬ್ ಅಲ್ ಹಸನ್ | ಬಾಂಗ್ಲಾದೇಶ | 43 | 74* |
ಕೇನ್ ವಿಲಿಯಮ್ಸನ್ | ನ್ಯೂಜಿಲ್ಯಾಂಡ್ | 29 | 71* |
ಬ್ರೆಂಡನ್ ಮೆಕಲಮ್ | ನ್ಯೂಜಿಲ್ಯಾಂಡ್ | 25 | 67 |
ಗೆದ್ದು ಬಾ ಭಾರತ…
ಚುಟುಕು ಕ್ರಿಕೆಟ್‌ನಲ್ಲಿ ತನ್ನದೇ ಹೆಗ್ಗುರುತು ಸ್ಥಾಪಿಸಿರುವ ಟೀಮ್ ಇಂಡಿಯಾ ನಾಳೆ (ಗುರುವಾರ) ನಡೆಯುವ ಟಿ20 ವಿಶ್ವಕಪ್(T20 World Cup 2024) ಟೂರ್ನಿಯ ಸೆಮಿಫೈನಲ್(IND vs ENG Semi Final) ಪಂದ್ಯದಲ್ಲಿ ಇಂಗ್ಲೆಂಡ್(IND vs ENG) ವಿರುದ್ಧ ಅದೃಷ್ಠ ಪರೀಕ್ಷೆಗೆ ಇಳಿಯಲಿದೆ. ಸೀಮಿತ ಓವರ್‌ಗಳ ಮಾದರಿಯ ಕ್ರಿಕೆಟ್‌ನಲ್ಲಿ ಭಾರತ ಕಳೆದ ಕೆಲವು ವರ್ಷಗಳಿಂದ ಸ್ಥಿರತೆಯನ್ನು ಕಾಪಾಡಿಕೊಂಡು ಬಂದಿದೆ. ಅತ್ತ ಹಾಲಿ ಚಾಂಪಿಯನ್ ಆಗಿರುವ ಇಂಗ್ಲೆಂಡ್ ಸಹ ಇತ್ತೀಚೆಗೆ ಟಿ20ಗಳಲ್ಲಿ ಬಲಾಡ್ಯ ತಂಡವಾಗಿ ಹೊರಹೊಮ್ಮಿದೆ. ಹೀಗಾಗಿ ಇತ್ತಂಡಗಳ ನಡುವಿನ ಕ್ರಿಕೆಟ್ ಸಮರ ತೀವ್ರ ಕುತೂಹಲ, ರೋಮಾಂಚನ ಸೃಷ್ಟಿಸುವುದರಲ್ಲಿ ಅನುಮಾನವಿಲ್ಲ.