ಮುಂಬಯಿ: ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ(Hardik Pandya) ಅವರನ್ನು ಮುಂಬೈ ಇಂಡಿಯನ್ಸ್ ತಂಡದ ನಾಯಕನನ್ನಾಗಿ ನೇಮಿಸಿದಾಗಿನಿಂದ ರೋಹಿತ್ ಶರ್ಮ(Rohit Sharma) ಅವರು ಮುಂಬೈ ತಂಡ ತೊರೆಯಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಲೇ ಇದೆ. ಕೆಲ ದಿನಗಳ ಹಿಂದಷ್ಟೇ ಪಾಂಡ್ಯ ನಾಯಕತ್ವದ ಬಗ್ಗೆ ರೋಹಿತ್ ಶರ್ಮಾ ಅತೃಪ್ತರಾಗಿದ್ದಾರೆ ಹೀಗಾಗಿ ಮುಂದಿನ ವರ್ಷ ರೋಹಿತ್ ಬೇರೆ ಫ್ರಾಂಚೈಸಿ ಪರ ಆಡಲಿದ್ದಾರೆ ಎಂದು ವರದಿಯಾಗಿತ್ತು. ಇದೀಗ ರೋಹಿತ್ 2025ರಲ್ಲಿ(IPL 2025) ಡೆಲ್ಲಿ ಕ್ಯಾಪಿಟಲ್ಸ್(Delhi Capitals) ಫ್ರಾಂಚೈಸಿ ವಿರುದ್ಧ ಆಡುವ ಸಾಧ್ಯತೆಯೊಂದು ಕಂಡುಬಂದಿದೆ.
ಇಂಡಿಯನ್ಸ್ ಎಕ್ಸ್ಪ್ರೆಸ್ ವರದಿಯ ಪ್ರಕಾರ ರೋಹಿತ್ ಶರ್ಮ ಅವರನ್ನು ಡೆಲ್ಲಿ ಫ್ರಾಂಚೈಸಿ ಮುಂದಿನ ಮೆಗಾ ಹರಾಜಿನಲ್ಲಿ ಖರೀದಿಸಲಿದೆ ಎಂದು ತಿಳಿಸಿದೆ. ಅಲ್ಲದೆ ಫ್ರಾಂಚೈಸಿ ಸಹ-ಮಾಲೀಕ ಪಾರ್ಥ್ ಜಿಂದಾಲ್ ಅವರು ರೋಹಿತ್ ಅವರನ್ನು ಮುಂದಿನ ಬಾರಿ ಡೆಲ್ಲಿ ತಂಡದ ನಾಯಕನಾಗಿ ಕಣಕ್ಕಿಳಿಸಲು ಎಲ್ಲ ಸಿದ್ಧತೆಯೂ ಮಾಡಲಾಗಿದೆ ಎಂದು ಹೇಳಿರುವುದಾಗಿ ತನ್ನ ವರದಿಯಲ್ಲಿ ತಿಳಿಸಿದೆ.
JUST IN 🚨🚨🚨
— Shubham 𝕏 (@DankShubhum) April 9, 2024
Rohit Sharma is going to Delhi Captials in IPL 2025 through Transfer Mode .
Owner of DC Parth Jindal Recently Said : " We are Ready to welcome Captain Rohit Sharma 🔥.
Rohit Sharma will not be in IPL mega Auction.
Source : TOI pic.twitter.com/AoqGNxOoOg
ರೋಹಿತ್ ಅಭಿಮಾನಿಗಳು ಕೂಡ ಮುಂಬೈ ತೊರೆದು ಬೇರೆ ತಂಡದ ಪರ ಆಡುವಂತೆ ಒತ್ತಾಯಿಸುತ್ತಿದ್ದಾರೆ. ಜಸ್ಪ್ರೀತ್ ಬುಮ್ರಾ ಕೂಡ ಪಾಂಡ್ಯ ನಾಯಕತ್ವದ ಬಗ್ಗೆ ಅತೃಪ್ತರಾಗಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಆಟಗಾರ, ಮುಂಬೈ ಇಂಡಿಯನ್ಸ್ ಪರವೂ ಆಡಿರುವ ಅಂಬಾಟಿ ರಾಯುಡು(Ambati Rayudu) ಅವರು ರೋಹಿತ್ ಶರ್ಮ ಮುಂದಿನ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಬೇಕು ಎಂದು ಹೇಳಿದ್ದರು. ಒಟ್ಟಾರೆಯಾಗಿ ಮುಂದಿನ ವರ್ಷದ ಮೆಗಾ ಹರಾಜಿನ ಪ್ರಮುಖ ಆಕರ್ಷಣೆಯೇ ರೋಹಿತ್ ಆಗಿರಲಿದ್ದಾರೆ.
ಇದನ್ನೂ ಓದಿ IPL 2024: ರಿಂಕು ಸಿಂಗ್ ಸಿಕ್ಸರ್ ಸುರಿಮಳೆಗೆ 1ನೇ ವರ್ಷದ ಸಂಭ್ರಮ; ಹೇಗಿತ್ತು ಅಂದಿನ ಸಿಕ್ಸರ್?
My captain forever.. @ImRo45 💙
— Nithin45 (@NitinRa2021) April 3, 2024
Cook Landya🤬#RohitSharma #Hitman pic.twitter.com/qNynRfPMat
“ಮುಂಬೈ ತಂಡ ಎಂದಿಗೂ ಅಸಾಧಾರಣ ನಾಯಕತ್ವ ಕಂಡ ತಂಡ. ಸಚಿನ್ ತೆಂಡೂಲ್ಕರ್ ಅವರಿಂದ ಹರ್ಭಜನ್ ತನಕ, ಪಾಂಟಿಂಗ್ ಅವರಿಂದ ರೋಹಿತ್ ತನಕ ಉತ್ತಮ ನಾಯಕರನ್ನು ಕಂಡಿದೆ. ಇವರಲ್ಲಿ ರೋಹಿತ್ ಅವರದು ಅತ್ಯಂತ ದೊಡ್ಡ ಕೊಡುಗೆ ಇದೆ. 5 ಬಾರಿ ತಂಡವನ್ನು ಚಾಂಪಿಯನ್ ಮಾಡಿದ್ದಾರೆ. ಫ್ರಾಂಚೈಸಿ ಎಂದಿಗೂ ರೋಹಿತ್‌ಗೆ ಕೃತಜ್ಞವಾಗಿದೆ” ಎಂದು ಮುಂಬೈ ಇಂಡಿಯನ್ಸ್ ತನ್ನ ವೆಬ್‌ಸೈಟ್‌ನಲ್ಲಿ ಬರೆದು ರೋಹಿತ್ ಅವರನ್ನು ನಾಯಕ್ವದಿಂದ ಕೆಳಗಿಳಿಸಿದ ನಿರ್ಧಾರವನ್ನು ಪ್ರಕಟಿಸಿತ್ತು. ಗುಜರಾತ್ ತಂಡದ ನಾಯಕನಾಗಿದ್ದ ಪಾಂಡ್ಯ ಅವರನ್ನು ಟ್ರೇಡಿಂಗ್ ಮೂಲಕ ಮುಂಬೈಗೆ ಸೇರಿಸಿ ನಾಯಕತ್ವ ನೀಡಲಾಗಿತ್ತು. 2011ರ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ತಂಡ ಸೇರಿದ ರೋಹಿತ್ ಶರ್ಮಾ ಅವರು ತಂಡದ ನಾಯಕತ್ವ ವಹಿಸಿದ್ದರು. 2013, 2015, 2017, 2019 ಮತ್ತು 2020ರಲ್ಲಿ ಅವರ ನಾಯಕತ್ವದಲ್ಲಿ ಮುಂಬೈ ಕಪ್ ಗೆದ್ದುಕೊಂಡಿತ್ತು.
God bless this little boy ☺
— Immy|| 🇮🇳 (@TotallyImro45) April 3, 2024
Chapri ko hatao. Team ko bachao 👍#RohitSharma𓃵 pic.twitter.com/thJQFJkpZG