ಮುಂಬಯಿ: ಟೀಮ್ ಇಂಡಿಯಾದ ನಾಯಕ, ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮ(Rohit Sharma) ಅವರ ಕ್ರಿಕೆಟ್ ಬಾಳ್ವೆಗೆ 16 ವರ್ಷಗಳು ತುಂಬಿದೆ. ಇಷ್ಟು ವರ್ಷದ ಕ್ರಿಕೆಟ್ ಪಯಣದಲ್ಲಿ ಅವರು ಹಲವು ಏರಿಳಿತಗಳನ್ನು ಕಂಡಿದ್ದಾರೆ. ಜೂನ್ 23, 2007ರಂದು ಅವರು ಐರ್ಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಆಡುವ ಮೂಲಕ ಅಂತಾರಾಷ್ಟ್ರಿಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಡಕ್ವರ್ತ್ ನಿಯದ ಅನ್ವಯ ಭಾರತ ತಂಡ ಈ ಪಂದ್ಯವನ್ನು 9 ವಿಕೆಟ್ಗಳಿಂದ ಗೆದ್ದಿತ್ತು. ಆದರೆ ರೋಹಿತ್ಗೆ ಬ್ಯಾಟಿಂಗ್ ಅವಕಾಶ ಸಿಕ್ಕಿರಲಿಲ್ಲ.
ಸ್ವಾರಸ್ಯವೆಂದರೆ ರೋಹಿತ್ ಶರ್ಮ ಕ್ರಿಕೆಟ್ ಪದಾರ್ಪಣೆ ಮಾಡಿದ್ದು ರಾಹುಲ್ ದ್ರಾವಿಡ್(Rahul Dravid) ಅವರ ನಾಯಕತ್ವದಲ್ಲಿ. ಇದೀಗ ರೋಹಿತ್ ನಾಯಕನಾಗಿದ್ದಾರೆ. ಅಂದು ನಾಯಕನಾಗಿದ್ದ ಡ್ರಾವಿಡ್ ಇಂದು ಕೋಚ್ ಆಗಿದ್ದರೆ.
ರೋಹಿತ್ ಶರ್ಮಾ ಸದ್ಯ ಮೂರು ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಇದುವರೆಗೆ 441 ಪಂದ್ಯಗಳನ್ನು ಆಡಿದ್ದು, 17,115 ರನ್‌ಗಳು ಮತ್ತು 43 ಅಂತಾರಾಷ್ಟ್ರೀಯ ಶತಕಗಳನ್ನು ಬಾರಿಸಿದ್ದಾರೆ. ಭಾರತ ತಂಡ ಕಳೆದ 10 ವರ್ಷಗಳಿಂದ ಎದುರಿಸುತ್ತಿರುವ ಐಸಿಸಿ ಟ್ರೋಫಿ ಬರವನ್ನು ಈ ಬಾರಿಯ ಏಕದಿನ ವಿಶ್ವ ಕಪ್ ಗೆಲ್ಲುವ ಮೂಲಕ ಕೊನೆಗೊಳಿಸಲು ರೋಹಿತ್ ಎದುರು ನೋಡುತ್ತಿದ್ದಾರೆ. ಸದ್ಯ ಅವರ ಬ್ಯಾಟಿಂಗ್ ಫಾರ್ಮ್ ಅಷ್ಟಾಗಿ ಉತ್ತಮವಾಗಿಲ್ಲ. ಈ ಬಾರಿಯ ಐಪಿಎಲ್ನಲ್ಲಿ ಅವರು ಹೆಚ್ಚಿನ ಪಂದ್ಯಗಳಲ್ಲಿ ಸಿಂಗಲ್ ಡಿಜಿಟ್ಗೆ ಔಟಾಗಿದ್ದರು. ಜತೆಗೆ ಆಸೀಸ್ ವಿರುದ್ಧ ಇದೇ ತಿಂಗಳಿನ ಮೊದಲ ವಾರದಲ್ಲಿ ನಡೆದಿದ್ದ ಐಸಿಸಿ ವಿಶ್ವ ಟೆಸ್ಟ್ ಫೈನಲ್ ಪಂದ್ಯದಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನ ತೋರಿದ್ದರು.
ಇದನ್ನೂ ಓದಿ WTC Final 2023 : ಸೋಲಿನ ಕಾರಣಗಳನ್ನು ಬಿಡಿಸಿ ಹೇಳಿದ ನಾಯಕ ರೋಹಿತ್ ಶರ್ಮಾ
ಕ್ರಿಕೆಟ್ ಬಾಳ್ವೆಗೆ 16 ವರ್ಷ ತುಂಬಿದ ಕುರಿತು ಪ್ರತಿಕ್ರಿಯೆ ನೀಡಿರುವ ರೋಹಿತ್, “2007ರಲ್ಲಿ ನಾನು ಭಾರತ ತಂಡಕ್ಕೆ ಆಯ್ಕೆಯಾದಾಗ, ಮೊದಲ ಬಾರಿಗೆ ನಾನು ರಾಹುಲ್ ದ್ರಾವಿಡ್ ಸರ್ ಅವರೊಂದಿಗೆ ಸಂವಾದ ನಡೆಸುವ ಅವಕಾಶ ಸಿಕ್ಕಿತು. ಅವರ ನಾಯಕತ್ವದಲ್ಲೇ ನಾನು ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದು ಸಂತಸದ ವಿಚಾರ. ಈಗ ನಾನು ಅವರ ಮಾರ್ಗದರ್ಶನದಲ್ಲಿ ತಂಡವನ್ನು ಮುನ್ನಡೆಸುತ್ತಿರುವುದು ಮತ್ತಷ್ಟು ಖುಷಿಯ ವಿಚಾರ” ಎಂದು ಹೇಳಿದ್ದಾರೆ.