ನವ ದೆಹಲಿ : ಪ್ರವಾಸಿ ಆಸ್ಟ್ರೇಲಿಯಾ ತಂಡದ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಹಣಾಹಣಿಯಲ್ಲೂ ಭಾರತ ತಂಡ 6 ವಿಕೆಟ್ಗಳ ವಿಜಯ ಸಾಧಿಸಿದೆ. ಈ ಮೂಲಕ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಂಡಿದೆ. ಇನ್ನೆರಡು ಪಂದ್ಯಗಳಲ್ಲಿ ಭಾರತ ಸೋತರೂ ಸರಣಿಯ 2-2 ಅಂತರದಿಂದ ಡ್ರಾ ಆಗಲಿದೆ. ಹೀಗಾಗಿ ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಸರಣಿ ಗೆದ್ದಿರುವ ಟ್ರೋಫಿ ಟೀಮ್ ಇಂಡಿಯಾದ ಪಾಲಾಗಲಿದೆ. ಇದೇ ವೇಳೆ ಎರಡನೇ ಪಂದ್ಯದ ಮೂರನೇ ದಿನ ಎರಡು ವಿಶೇಷತೆಗಳು ನಡೆದಿವೆ. ಒಂದು ರೋಹಿತ್ ಶರ್ಮಾ ಅವರ ರನ್ಔಟ್, ಇನ್ನೊಂದು ವಿರಾಟ್ ಕೊಹ್ಲಿಯ ಸ್ಟಂಪ್ ಔಟ್. ಇವರಿಬ್ಬರ ವೃತ್ತಿ ಟೆಸ್ಟ್ನಲ್ಲಿ ಈ ರೀತಿ ಔಟಾಗವುದು ಇದೇ ಮೊದಲು.
ರೋಹಿತ್ ಶರ್ಮಾ ಇದುವರೆಗೆ 47 ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದಾರೆ. ಅದರಲ್ಲಿ ಇದೇ ಮೊದಲ ಬಾರಿಗೆ ಅವರು ಟೆಸ್ಟ್ ಪಂದ್ಯವೊಂದರಲ್ಲಿ ರನ್ಔಟ್ ಆದಂತಾಗಿದೆ. ಪಂದ್ಯದಲ್ಲಿ ಅವರು 20 31 ರನ್ ಬಾರಿಸಿ ವೇಗದ ರನ್ ಗಳಿಕೆಗೆ ಇಂಬು ಕೊಟ್ಟಿದ್ದರು. ಆದರೆ, ತಪ್ಪು ನಿರ್ಧಾರ ಕರೆ ನೀಡುವ ಮೂಲಕ ಅವರು ರನ್ಔಟ್ ಬಲಿಯಾದರು.
ಇದನ್ನೂ ಓದಿ : KL Rahul : ನಿಮ್ಮಷ್ಟು ಅವಕಾಶ ಇನ್ಯಾರಿಗೂ ಸಿಗದು ಎಂದು ಕೆ. ಎಲ್ ರಾಹುಲ್ ತರಾಟೆಗೆ ತೆಗೆದುಕೊಂಡ ವೆಂಕಟೇಶ್ ಪ್ರಸಾದ್
ವಿರಾಟ್ ಕೊಹ್ಲಿಯೂ ಟೆಸ್ಟ್ ಬ್ಯಾಟಿಂಗ್ ಲೆಜೆಂಡ್. ತಪ್ಪು ಹೊಡೆತಗಳು ಮೂಲಕ ಅವರು ರನ್ ಮಾಡುವುದಿಲ್ಲ. ಕ್ರೀಸ್ನಲ್ಲಿರುವಾಗ ಅವರ ನಿರ್ಧಾರಗಳು ಬಹುತೇಕ ಸರಿಯಾಗಿರುತ್ತವೆ. ಆದರೆ, ಪಂದ್ಯದ ಮೂರನೇ ದಿನ ಅವರು ಕ್ರೀಸ್ ಬಿಟ್ಟು ಮುಂದಕ್ಕೆ ಬರುವ ಮೂಲಕ ತಪ್ಪು ನಿರ್ಧಾರ ತೆಗೆದುಕೊಂಡರು. ಮರ್ಫಿ ಎಸೆದ ಎಸೆತ ವಿಕೆಟ್ ಕೀಪರ್ ಕೈಸೇರಿತು. ಅವರು ಸ್ಟಂಪ್ಡ್ ಔಟ್ ಮಾಡಿದರು.