Site icon Vistara News

Rohit Sharma : ಒಂದು ಪಂದ್ಯದಲ್ಲಿ ನಾಲ್ಕು ದಾಖಲೆ ಸೃಷ್ಟಿಸಿದ ರೋಹಿತ್ ಶರ್ಮಾ

Rohit Sharma

ಬೆಂಗಳೂರು: ಅಫ್ಘಾನಿಸ್ತಾನ ವಿರುದ್ಧದ ಐಸಿಸಿ ವಿಶ್ವಕಪ್ 2023 ರ ಪಂದ್ಯದ ವೇಳೆ ಭಾರತದ ಬ್ಯಾಟರ್​ ರೋಹಿತ್ ಶರ್ಮಾ (Rohit Sharma ) ಎಲ್ಲಾ ಸ್ವರೂಪಗಳ ಕ್ರಿಕೆಟ್​ ಸೇರಿ ಅತಿ ಹೆಚ್ಚು ಅಂತಾರಾಷ್ಟ್ರೀಯ ಸಿಕ್ಸರ್​ಗಳನ್ನು ಬಾರಿಸಿದ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ವೆಸ್ಟ್ ಇಂಡೀಸ್​​ನ ಸ್ಫೋಟಕ ಬ್ಯಾಟರ್​ ಕ್ರಿಸ್ ಗೇಲ್ 553 ಸಿಕ್ಸರ್​ಗಳ (551 ಇನ್ನಿಂಗ್ಸ್) ಈ ಹಿಂದೆ ಈ ದಾಖಲೆಯನ್ನು ಹೊಂದಿದ್ದರು. ರೋಹಿತ್​​ ಅಫಘಾನಿಸ್ತಾನ ವಿರುದ್ಧ ಮೂರನೇ ಸಿಕ್ಸರ್ ಬಾರಿಸುವ ಮೂಲಕ ಒಟ್ಟು 554 ಸಿಕ್ಸರ್​ಗಳೊಂದಿಗೆ ಅಗ್ರಸ್ಥಾನ ಪಡೆದರು.

ರೋಹಿತ್ ಶರ್ಮಾ ಕೇವಲ 473 ಇನ್ನಿಂಗ್ಸ್​ಗಳಲ್ಲಿ ಈ ಸಾಧನೆ ಮಾಡಿ ಗೇಲ್​ ಅವರನ್ನು ಹಿಂದಿಕ್ಕಿದ್ದಾರೆ. ಏಕದಿನ ಪಂದ್ಯಗಳಲ್ಲಿ ಶಾಹಿದ್ ಅಫ್ರಿದಿ ಮತ್ತು ಗೇಲ್ ನಂತರ ರೋಹಿತ್ ಮೂರನೇ ಸ್ಥಾನದಲ್ಲಿದ್ದಾರೆ. ಆದರೆ ಟಿ 20 ಐನಲ್ಲಿ 140 ಇನಿಂಗ್ಸ್​​ಗಳಲ್ಲಿ 182 ಸಿಕ್ಸರ್​ಗಳನ್ನು ಬಾರಿಸಿದ ರೋಹಿತ್ ಅಗ್ರಸ್ಥಾನದಲ್ಲಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ 77 ಸಿಕ್ಸ್​ಗಳೊಂದಿಗೆ ರೋಹಿತ್ ಮೂರನೇ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಭಾರತೀಯರಾಗಿದ್ದು, ವೀರೇಂದ್ರ ಸೆಹ್ವಾಗ್ (91) ಮತ್ತು ಎಂಎಸ್ ಧೋನಿ (78) ನಂತರದ ಸ್ಥಾನದಲ್ಲಿದ್ದಾರೆ.

ಈ ಸುದ್ದಿಗಳನ್ನೂ ಓದಿ
ICC World Cup 2023 : ಕಾಂಗರೂ- ಹರಿಣಗಳ ನಡುವಿನ ಹಣಾಹಣಿಯಲ್ಲಿ ಗೆಲುವು ಯಾರಿಗೆ?
ICC World Cup 2023 : ವಿಶ್ವ ಕಪ್​ನಲ್ಲಿ ಹೊಸ ದಾಖಲೆ ಬರೆದ ಪಾಕಿಸ್ತಾನ
Muhammad Rizwan: ಲಂಕಾ ವಿರುದ್ಧದ ಗೆಲುವನ್ನು ಗಾಜಾ ಜನತೆಗೆ ಅರ್ಪಿಸಿದ ರಿಜ್ವಾನ್

ಅತಿವೇಗದ 1000 ರನ್​

ವಿಶ್ವಕಪ್ ನಲ್ಲಿ ಅತಿ ವೇಗವಾಗಿ 1000 ರನ್ ಪೂರೈಸಿದ ದಾಖಲೆಯನ್ನೂ ರೋಹಿತ್ ಶರ್ಮಾ ಮಾಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಡಕ್ ಔಟ್ ಆದ ನಂತರ ಕೇವಲ 21 ರನ್​ಗಳ ಅಗತ್ಯವಿದ್ದ ರೋಹಿತ್, ಇದೀಗ ಅಫ್ಘಾನಿಸ್ತಾನ ವಿರುದ್ಧ 1,000 ರನ್ ಪೂರೈಸಿದರು. ಡೇವಿಡ್ ವಾರ್ನರ್ ಅವರೊಂದಿಗೆ 19 ಇನಿಂಗ್ಸ್​ಗಳಲ್ಲಿ ವೇಗವಾಗಿ ಈ ಸಾಧನೆ ಮಾಡಿದ ಬ್ಯಾಟರ್​ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಸಚಿನ್​ ದಾಖಲೆ ಮುರಿದ ರೋಹಿತ್

ರೋಹಿತ್​ ಶರ್ಮಾ ಭಾರತ ತಂದ ದಿಗ್ಗಜ ಸಚಿನ್​ ತೆಂಡೂಲ್ಕರ್ ಅವರ ದಾಖಲೆಯೊಂದನ್ನೂ ಅಫಘಾನಿಸ್ತಾನ ವಿರುದ್ಧದ ಪಂದ್ಯದ ವೇಳೆ ಅವರು ಬಾರಿಸಿದ ಶತಕ ವಿಶ್ವ ಕಪ್​ನಲ್ಲಿ ಅವರದ್ದು ಏಳನೇ ಶತಕ. ಈ ಮೂಲಕ ವಿಶ್ವ ಕಪ್​​ನಲ್ಲಿ ಅತಿ ಹೆಚ್ಚು ಶತಕಗಳನ್ನು ಪೂರೈಸಿದ ಆಟಗಾರ ಎಂಬ ಖ್ಯಾತಿಯನ್ನೂ ಪಡೆದುಕೊಂಡಿದ್ದಾರೆ. ಈ ಹಿಂದೆ ಸಚಿನ್​ ತೆಂಡೂಲ್ಕರ್ ಮತ್ತು ರೋಹಿತ್​ ತಲಾ ಆರು ಶತಕಗಳನ್ನು ಬಾರಿಸಿದ್ದರು. ಅಂದಹಾಗೆ ರೋಹಿತ್ ಶರ್ಮಾ ಅರು 2019ರ ಒಂದೇ ಆವೃತ್ತಿಯಲ್ಲಿ ಐದು ಶತಕಗಳನ್ನು ಬಾರಿಸಿದ್ದರು.

ವಿಶ್ವ ಕಪ್​ನಲ್ಲಿ ಭಾರತ ಪರ ಅತಿ ವೇಗದ ಶತಕ

ರೋಹಿತ್ ಶರ್ಮಾ ಕೇವಲ 63 ಎಸೆತಗಳಲ್ಲಿ ಶತಕ ಬಾರಿಸಿದ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು, ಈ ಹಿಂದೆ ಕಪಿಲ್ ದೇವ್ 72 ಎಸೆತಗಳಲ್ಲಿ ಶತಕ ಬಾರಿಸಿದ್ದರು. ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಎಲ್ಲರೂ ರೋಹಿತ್ ಶರ್ಮಾ ಅವರ ದೊಡ್ಡ ದಾಖಲೆಯನ್ನು ಶ್ಲಾಘಿಸಿದ್ದಾರೆ.

ಭಾರತಕ್ಕೆ 273 ರನ್​ ಗುರಿ

ಬ್ಯಾಟಿಂಗ್​ಗೆ ಅನುಕೂಲಕರವಾಗಿರವು ಡೆಲ್ಲಿಯ ಪಿಚ್​ನಲ್ಲಿ ಅಫಘಾನಿಸ್ತಾನ ತಂಡ ತನ್ನ ಸಾಮರ್ಥ್ಯಕ್ಕೆ ತಕ್ಕ ಹಾಗೆ ಬ್ಯಾಟಿಂಗ್ ಮಾಡಿತು. ಹೀಗಾಗಿ ಭಾರತ ವಿರುದ್ಧ ವಿಶ್ವ ಕಪ್​ ಪಂದ್ಯದಲ್ಲಿ (IND vs AFG) 272 ರನ್​ಗಳನ್ನು ಪೇರಿಸಿತು. ಇದರೊಂದಿಗೆ ಭಾರತ ತಂಡಕ್ಕೆ 273 ರನ್​ಗಳ ಗೆಲುವಿನ ಗುರಿ ಎದುರಾಗಿದೆ. ಭಾರತ ತಂಡದ ಪರ ಬೌಲಿಂಗ್​ನಲ್ಲಿ ಜಸ್​ಪ್ರಿತ್ ಬುಮ್ರಾ 39 ರನ್​ಗಳಿಗೆ 4 ವಿಕೆಟ್ ಉರುಳಿಸಿ ಮಿಂಚಿದರು. ಅಫಘಾನಿಸ್ತಾನ ತಂಡದಲ್ಲಿ ನಾಯಕ ಹಶ್ಮತುಲ್ಲಾ ಶಾಹಿದಿ (80 ರನ್)​ ಹಾಗೂ ಅಜ್ಮತುಲ್ಲಾ ಒಮರ್ಜೈ (62 ರನ್​) ಅರ್ಧ ಶತಕಗಳನ್ನು ಬಾರಿಸಿದರು.

ಇಲ್ಲಿನ ಅರುಣ್​ ಜೇಟ್ಲಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಅಫಘಾನಿಸ್ತಾನ ತಂಡದ ನಾಯಕ ಹಶ್ಮತುಲ್ಲಾ ಶಾಹಿದಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ತಂಡದ ಆಟಗಾರರು 8 ವಿಕೆಟ್​ ನಷ್ಟಮಾಡಿಕೊಂಡು 272 ರನ್​ಗಳನ್ನು ಬಾರಿಸಿದರು.

Exit mobile version