ದುಬೈ: ಐಸಿಸಿ ನೂತನ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ(ICC Odi Ranking) ಟೀಮ್ ಇಂಡಿಯಾದ ಆಟಗಾರರಾದ ರೋಹಿತ್ ಶರ್ಮ(Rohit Sharma), ಶುಭಮನ್ ಗಿಲ್(Shubman Gill) ಮತ್ತು ಕುಲ್ದೀಪ್ ಯಾದವ್(Kuldeep Yadav) ಉತ್ತಮ ಪ್ರಗತಿ ಸಾಧಿಸಿದ್ದಾರೆ. ಇವರೆಲ್ಲ ಏಷ್ಯಾಕಪ್ನಲ್ಲಿ ತೋರುತ್ತಿರುವ ಶ್ರೇಷ್ಠ ಪ್ರದರ್ಶನದಿಂದಾಗಿ ಶ್ರೇಯಾಂಕದಲ್ಲಿ ಏರಿಕೆ ಕಂಡಿದ್ದಾರೆ.
ಗಿಲ್ಗೆ ದ್ವಿತೀಯ ಸ್ಥಾನ
ಶುಭಮನ್ ಗಿಲ್ ಅವರು 759 ರೇಟಿಂಗ್ ಅಂಕ ಪಡೆದು ದ್ವಿತೀಯ ಸ್ಥಾನ ಪಡೆದಿದ್ದಾರೆ. ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ(836 ರೇಟಿಂಗ್ ಅಂಕ) ಅಗ್ರಸ್ಥಾನದಲ್ಲೇ ಮುಂದುವರಿದ್ದಾರೆ. ನೇಪಾಳ, ಪಾಕಿಸ್ತಾನ ಮತ್ತು ಶ್ರೀಲಂಕಾ ವಿರುದ್ಧ ಏಷ್ಯಾಕಪ್ನಲ್ಲಿ ಸತತ ಮೂರು ಅರ್ಧಶತಕ ಬಾರಿಸಿದ ರೋಹಿತ್ ಶರ್ಮ(707 ರೇಟಿಂಗ್ ಅಂಕ) ಅವರು ಒಂದು ಸ್ಥಾನ ಮೇಲೇರಿ 9ನೇ ಸ್ಥಾನಕ್ಕೇರಿದ್ದಾರೆ. ಪಾಕಿಸ್ತಾನ ವಿರುದ್ಧ ಶತಕ ಬಾರಿಸಿ ಸಂಭ್ರಮಿಸಿದ ವಿರಾಟ್ ಕೊಹ್ಲಿ 8ನೇ ಸ್ಥಾನ ಪಡೆದಿದ್ದಾರೆ.
ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಮತ್ತು ಕ್ವಿಂಟನ್ ಡಿ ಕಾಕ್ ತಮ್ಮ ಶ್ರೇಯಾಂಕವನ್ನು ಸುಧಾರಿಸಿದ್ದಾರೆ. ಉಭಯ ಆಟಗಾರರು ಒಂದೊಂದು ಸ್ಥಾನ ಏರಿಕೆ ಕಂಡು ಪಟ್ಟಿಯಲ್ಲಿ 7 ಮತ್ತು 4 ನೇ ಸ್ಥಾನದಲ್ಲಿದ್ದಾರೆ. ಏಷ್ಯಾ ಕಪ್ ಭಾನುವಾರ (ಸೆಪ್ಟೆಂಬರ್ 17) ಮುಕ್ತಾಯಗೊಳ್ಳಲಿದ್ದು ಮುಂದಿನ ವಾರ ಶ್ರೇಯಾಂಕ ಪಟ್ಟಿಯಲ್ಲಿ ಇನ್ನಷ್ಟು ಬದಲಾಗುವ ನಿರೀಕ್ಷೆಯಿದೆ. ಏಕೆಂದರೆ ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್, ದಕ್ಷಿಣ ಆಫ್ರಿಕಾ vs ಆಸ್ಟ್ರೇಲಿಯಾ ನಡುವೆ ಏಕದಿನ ಸರಣಿ ನಡೆಯುತ್ತಿದೆ. ಹೀಗಾಗಿ ಈ ತಂಡದ ಆಟಗಾರರು ಪ್ರಗತಿ ಸಾಧಿಸಬಹುದು.
ಇದನ್ನೂ ಓದಿ ICC ODI Ranking: ಭಾರತ ಪಂದ್ಯಕ್ಕೂ ಮುನ್ನವೇ ಅಗ್ರ ಸ್ಥಾನದಿಂದ ಕೆಳಗಿಳಿದ ಪಾಕ್
ಟಾಪ್ 10ಗೆ ಎಂಟ್ರಿ ಕೊಟ್ಟ ಕುಲ್ದೀಪ್
ಏಷ್ಯಾಕಪ್ನಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ತೋರುತ್ತಿರುವ ಚೈನಾಮನ್ ಖ್ಯಾತಿಯ ಸ್ಪಿನ್ನರ್ ಕುಲ್ದೀಪ್ ಯಾದವ್ ಬೌಲರ್ಗಳ ಶ್ರೇಯಾಂಕದಲ್ಲಿ ಅಗ್ರ 10ರೊಳಗೆ ಸ್ಥಾನ ಪಡೆದಿದ್ದಾರೆ. ಪಾಕಿಸ್ತಾನ ಮತ್ತು ಶ್ರೀಲಂಕಾ ವಿರುದ್ಧ ಕೇವಲ 24 ಗಂಟೆಗಳಲ್ಲಿ ಒಂಬತ್ತು ವಿಕೆಟ್‌ಗಳನ್ನು ಕಬಳಿಸಿದ ಅವರು ಪ್ರಸ್ತುತ 656 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಏಳನೇ ಸ್ಥಾನದಲ್ಲಿದ್ದಾರೆ. ಜಂಟಿಯಾಗಿ ಎರಡನೇ ಸ್ಥಾನದಲ್ಲಿರುವ ಕಿವೀಸ್ನ ಟ್ರೆಂಟ್ ಬೌಲ್ಟ್ ಮತ್ತು ಆಸೀಸ್ ಮಿಚೆಲ್ ಸ್ಟಾರ್ಕ್ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಸದ್ಯ ಉಭಯ ಆಟಗಾರರು 666 ರೇಟಿಂಗ್ ಅಂಕ ಹೊಂದಿದ್ದಾರೆ.
ಅಗ್ರ ಕ್ರಮಾಂಕದ 10 ಬ್ಯಾಟರ್ಗಳ ಪಟ್ಟಿ
1. ಬಾಬರ್ ಅಜಂ (863 ರೇಟಿಂಗ್) ಪಾಕಿಸ್ತಾನ
2. ಶುಭಮನ್ ಗಿಲ್ (759 ರೇಟಿಂಗ್) ಭಾರತ
3. ರಸ್ಸಿ ವಾನ್ಡರ್ ಡುಸ್ಸೆನ್ (745 ರೇಟಿಂಗ್), ದಕ್ಷಿಣ ಆಫ್ರಿಕಾ
4. ಡೇವಿಡ್ ವಾರ್ನರ್ (739 ರೇಟಿಂಗ್) ಆಸ್ಟ್ರೇಲಿಯಾ
5. ಇಮಾಮ್ ಉಲ್ ಹಕ್ (735 ರೇಟಿಂಗ್) ಪಾಕಿಸ್ತಾನ
6. ಹ್ಯಾರಿ ಟೆಕ್ಟರ್ (726 ರೇಟಿಂಗ್) ಐರ್ಲೆಂಡ್
7. ಕ್ವಿಂಟನ್ ಡಿ ಕಾಕ್ (721 ರೇಟಿಂಗ್) ದಕ್ಷಿಣ ಆಫ್ರಿಕಾ
8. ವಿರಾಟ್ ಕೊಹ್ಲಿ (715 ರೇಟಿಂಗ್) ಭಾರತ
9. ರೋಹಿತ್ ಶರ್ಮಾ (707 ರೇಟಿಂಗ್) ಭಾರತ
10. ಫಖಾರ್ ಜಮಾನ್ (705 ರೇಟಿಂಗ್) ಪಾಕಿಸ್ತಾನ