Site icon Vistara News

Rohit Sharma: ಶತಕದ ಮೂಲಕ ಬರೋಬ್ಬರಿ 4 ದಾಖಲೆ ಬರೆದ ಹಿಟ್​ಮ್ಯಾನ್​ ರೋಹಿತ್​

Rohit Sharma

ಧರ್ಮಶಾಲಾ: ಇಲ್ಲಿ ನಡೆಯುತ್ತಿರುವ ಇಂಗ್ಲೆಂಡ್​ ವಿರುದ್ಧದ ಅಂತಿಮ ಟೆಸ್ಟ್​ನ(India vs England 5th Test) 2ನೇ ದಿನದಾಟದಲ್ಲಿ ಟೀಮ್​ ಇಂಡಿಯಾದ ನಾಯಕ ರೋಹಿತ್​ ಶರ್ಮ(Rohit Sharma) ಅವರು ಶತಕ ಬಾರಿಸಿ ಮಿಂಚಿದ್ದಾರೆ. ಜತೆಗೆ ಹಲವು ದಾಖಲೆಗಳನ್ನು ಕೂಡ ಬರೆದಿದ್ದಾರೆ.

ಟೆಸ್ಟ್ ವೃತ್ತಿಜೀವನದ 12ನೇ ಶತಕವನ್ನು ಪೂರ್ಣಗೊಳಿಸಿದ ರೋಹಿತ್ ಶರ್ಮಾ ಪ್ರಸ್ತುತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್​ನಲ್ಲಿ ತಮ್ಮ ಬ್ಯಾಟಿಂಗ್​ ಪತಾಪವನ್ನು ಮುಂದುವರಿಸಿದ್ದಾರೆ. ಇಂಗ್ಲೆಂಡ್​ ಸರಣಿಯಲ್ಲಿ ರೋಹಿತ್​ ಬಾರಿಸಿದ 2ನೇ ಶತಕ ಇದಾಗಿದೆ. ಜತೆಗೆ ಸರಣಿಯಲ್ಲಿ 400 ರನ್‌ಗಳನ್ನು ಪೂರೈಸುವ ಸಮೀಪಕ್ಕೆ ಬಂದು ನಿಂತಿದ್ದಾರೆ. ಬ್ಯಾಟಿಂಗ್​ ಕಾಯ್ದುಕೊಂಡಿರುವ ಇವರು ಮತ್ತಷ್ಟು ರನ್​ ಗಳಿಸುವ ನೀರೀಕ್ಷೆಯಲ್ಲಿದ್ದಾರೆ.

ಸದ್ಯ ಭಾರತ ಭೋಜನ ವಿರಾಮಕ್ಕೆ ಒಂದು ವಿಕೆಟ್​ಗೆ 264 ರನ್​ ಗಳಿಸಿ 46 ರನ್​ ಲೀಡ್ ಪಡೆದಿದೆ. ರೋಹಿತ್​ ಶರ್ಮ(102*) ಮತ್ತು ಶುಭಮನ್​ ಗಿಲ್​(101*) ಬ್ಯಾಟಿಂಗ್​ ಕಾಯ್ದುಕೊಂಡಿದ್ದಾರೆ.

ಇದನ್ನೂ ಓದಿ WPL Points Table: 6 ಲೀಗ್​ ಪಂದ್ಯಗಳು ಮಾತ್ರ ಬಾಕಿ; ಡಬ್ಲ್ಯುಪಿಎಲ್ ಅಂಕಪಟ್ಟಿ ಹೇಗಿದೆ?

ರೋಹಿತ್​ ಶರ್ಮ ಅವರು ಬರೆದ ದಾಖಲೆಗಳ ಪಟ್ಟಿ ಇಲ್ಲಿದೆ

2021 ರಿಂದ ಭಾರತದ ಪರ ಅತಿ ಹೆಚ್ಚು ಟೆಸ್ಟ್ ಶತಕಗಳು


ರೋಹಿತ್​ ಶರ್ಮ-6

ಶುಭಮನ್​ ಗಿಲ್​-4

ರವೀಂದ್ರ ಜಡೇಜಾ-3

ಯಶಸ್ವಿ ಜೈಸ್ವಾಲ್​-3

ರಿಷಭ್​ ಪಂತ್​-3

ಕೆಎಲ್​ ರಾಹುಲ್​-3

ಇಂಗ್ಲೆಂಡ್ ವಿರುದ್ಧ ಭಾರತದ ಆರಂಭಿಕ ಆಟಗಾರರಿಂದ ಅತಿ ಹೆಚ್ಚು ಟೆಸ್ಟ್ ಶತಕ


ಸುನೀಲ್​ ಗವಾಸ್ಕರ್​-4

ರೋಹಿತ್​ ಶರ್ಮ-4

ವಿಜಯ್ ಮರ್ಚೆಂಟ್-3

ಮುರಳಿ ವಿಜಯ್-3

ಕೆ.ಎಲ್​ ರಾಹುಲ್​-3

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆರಂಭಿಕರಾಗಿ ಅತಿ ಹೆಚ್ಚು ಶತಕಗಳು


ಡೇವಿಡ್​ ವಾರ್ನರ್​-49

ಸಚಿನ್ ತೆಂಡೂಲ್ಕರ್- 45

ರೋಹಿತ್ ಶರ್ಮಾ-43

ಕ್ರಿಸ್ ಗೇಲ್-42

ಸನತ್ ಜಯಸೂರ್ಯ-41

ಮ್ಯಾಥ್ಯೂ ಹೇಡನ್-40

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತ ಪರ ಅತಿ ಹೆಚ್ಚು ಶತಕಗಳು


ಸಚಿನ್​ ತೆಂಡೂಲ್ಕರ್​-100

ವಿರಾಟ್​ ಕೊಹ್ಲಿ-80

ರಾಹುಲ್​ ದ್ರಾವಿಡ್​-48

ರೋಹಿತ್​ ಶರ್ಮ-48

ವಿರೇಂದ್ರ ಸೆಹವಾಗ್​-38

ಸೌರವ್​ ಗಂಗೂಲಿ-38

Exit mobile version