ಪ್ಯಾರಿಸ್: ಸುಮಾರು ಒಂದು ತಿಂಗಳ ಕಾಲ ರಜೆಯನ್ನು ಪಡೆದಿರುವ ಭಾರತ ತಂಡದ ಕ್ರಿಕೆಟಿಗರು ಫುಟ್ ಟ್ರಿಪ್ನಲ್ಲಿದ್ದಾರೆ. ಅಂತಯೇ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಕುಟುಂಬ ಸಮೇತ ವಿದೇಶ ಟ್ರಿಪ್ ಹೋಗಿದ್ದಾರೆ. ಮೊದಲಿಗೆ ಲಂಡನ್ನಲ್ಲಿ ಸುತ್ತಿದ್ದ ಅವರು ಇದೀಗ ಪ್ಯಾರಿಸ್ನಲ್ಲಿದ್ದರೆ. ಈ ವೇಳೆ ಅವರು ಮಗಳು ಸಮೈರಾಳನ್ನು ಪ್ಯಾರಿಸ್ನ ಜನಪ್ರಿಯ ಫ್ರೋಜನ್ ಶೋಗೆ ಕರೆದೊಯ್ಯುವ ಮೂಲಕ ತಾನು ಪರಿಪೂರ್ಣ ತಂದೆ ಎಂದು ಸಾಬೀತುಪಡಿಸಿದರು. ಲೈವ್ ಪ್ರಿನ್ಸೆಸ್ ಥೀಮ್ ಹೊಂದಿರುವ ಫ್ರೋಜನ್ ಶೋ ವೀಕ್ಷಿಸುವ ತಮ್ಮ ಮಗಳ ಬಹುಕಾಲದ ಕನಸನ್ನು ಟೀಮ್ ಇಂಡಿಯಾ ನಾಯಕ ಈಡೇರಿಸಿದ್ದಾರೆ. ರೋಹಿತ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೃದಯಸ್ಪರ್ಶಿ ವೀಡಿಯೊವನ್ನು ಅಪ್ಲೋಡ್ ಮಾಡಿದ್ದಾರೆ. ಜತೆಗೆ ಪ್ರೀತಿಯ ಎಮೋಜಿಯನ್ನು ಶೇರ್ ಮಾಡಿದ್ದಾರೆ. ರೋಹಿತ್ ಅವರ ಪತ್ನಿ ರಿತಿಕಾ ಸಜ್ದೆಹ್ ತಂದೆ-ಮಗಳ ಮಾತುಕತೆಯನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. \
ಟೀಮ್ ಇಂಡಿಯಾ ನಾಯಕ ಅಪ್ಲೋಡ್ ಮಾಡಿದ ವಿಡಿಯೊದಲ್ಲಿ ಸಮೈರಾಗೆ ಅಪ್ಪ, ಅಮ್ಮ ತನ್ನನ್ನು ಎಲ್ಲಿಗೆ ಕೆರೆದೊಯ್ಯುತ್ತಿದ್ದಾರೆ ಎಂಬುದು ಗೊತ್ತಿಲ್ಲ . ರಿತಿಕಾ ವೀಡಿಯೊವನ್ನು ಪ್ರಾರಂಭಿಸಿ, ಸ್ಯಾಮ್ (ಸಮೈರಾ) ನೀನು ಕೌತುಕದಲ್ಲಿದ್ದೀಯಾ? ನಾವು ಎಲ್ಲಿಗೆ ಹೋಗುತ್ತಿದ್ದೇವೆ ಎಂದು ನಿನನಗೆ ತಿಳಿದಿದೆಯೇ ಎಂದು ಪ್ರಶ್ನಿಸುತ್ತಾರೆ. ಸಮೈರಾ ಇಲ್ಲ ಎಂದು ಉತ್ತರಿಸುತ್ತಾ.ಎ ರೋಹಿತ್ ಶರ್ಮಾ ಕೂಡ ಅಮ್ಮ ಎಲ್ಲಿಗೆ ಹೋಗುತ್ತಿದ್ದಾರೆಂದು ನನಗೆ ತಿಳಿದಿಲ್ಲ ಎಂದು ಹೇಳುತ್ತಾರೆ. ಆದರೆ, ಫ್ರೋಜನ್ ಬೋರ್ಡ್ ಅನ್ನು ನೋಡಿದ ತಕ್ಷಣ , ಅಂಬೆಗಾಲಿಡುವ ಸಮೈರಾಲ ಉತ್ಸಾಹ ಹೆಚ್ಚಾಗುತ್ತದೆ. ದೊಡ್ಡ ನಗುವಿನೊಂದಿಗೆ ಪ್ರದರ್ಶನವನ್ನು ವೀಕ್ಷಿಸುತ್ತದೆ.
ರೋಹಿತ್ ನೇರ ವೆಸ್ಟ್ ಇಂಡೀಸ್ಗೆ
ಮೂರು ವಾರಗಳ ರಜೆಯ ನಂತರ ರೋಹಿತ್ ಶರ್ಮಾ ಮುಂದಿನ ವಾರ ವೆಸ್ಟ್ ಇಂಡೀಸ್ಗೆ ತೆರಳಲಿದ್ದಾರೆ. ಈಗಾಗಲೇ ಮೊದಲ ಬ್ಯಾಚ್ನ ಟೀಮ್ ಇಂಡಿಯಾ ಆಟಗಾರರು ಇಂದು ಕೆರಿಬಿಯನ್ ದ್ವೀಪವನ್ನು ತಲುಪಿದ್ದಾರೆ. ಅಂತೆಯೇ ಮುಂಬೈ ಇಂಡಿಯನ್ಸ್ ನಾಯಕ ಶೀಘ್ರದಲ್ಲೇ ತಂಡ ಸೇರಿಕೊಳ್ಳಲಿದ್ದಾರೆ. ಬಳಿಕ ತಂಡದ ಉಳಿದ ಸದಸ್ಯರೊಂದಿಗೆ ತರಬೇತಿಯನ್ನು ಪ್ರಾರಂಭಿಸಲಿದ್ದಾರೆ. ಜೂನ್ 12ರಂದು ವೆಸ್ಟ್ ಇಂಡೀಸ್ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿ ಪ್ರಾರಂಭವಾಗುವ ಮೊದಲು ಭಾರತ ಒಂದು ಅಭ್ಯಾಸ ಪಂದ್ಯವನ್ನು ಆಡಲಿದೆ.
ಇದನ್ನೂ ಓದಿ : ind vs wi : ಪ್ರತ್ಯೇಕವಾಗಿ ವಿಂಡೀಸ್ ಪ್ರಯಾಣ ಶುರು ಮಾಡಿದ ವಿರಾಟ್, ಕೊಹ್ಲಿ! ಏನಾಯಿತು ಅವರಿಗೆ?
ಸಾಕಷ್ಟು ಊಹಾಪೋಹಗಳ ನಂತರ, ವೆಸ್ಟ್ ಇಂಡೀಸ್ ಪ್ರವಾಸಕ್ಕಾಗಿ ಟೆಸ್ಟ್ ಮತ್ತು ಏಕದಿನ ತಂಡಗಳಲ್ಲಿ ರೋಹಿತ್ ಅವರನ್ನು ಹೆಸರಿಸಲಾಗಿದೆ. 36ರ ಹರೆಯದ ಮುಂಬಯಿ ಮೂಲದ ಬಲಗೈ ಆಟಗಅರ ಕೊನೆಯ ಬಾರಿಗೆ ಆಸ್ಟ್ರೇಲಿಯಾ ವಿರುದ್ಧದ ಡಬ್ಲ್ಯುಟಿಸಿ ಫೈನಲ್ನಲ್ಲಿ ಕಾಣಿಸಿಕೊಂಡಿದ್ದರು. ಆದರೆ, ನಿರಾಶಾದಾಯಕ ಪ್ರದರ್ಶನವನ್ನು ನೀಡಿದ್ದರು. ಎರಡೂ ಇನ್ನಿಂಗ್ಸ್ಗಳಲ್ಲಿ ಅರ್ಧಶತಕ ಗಳಿಸಲು ವಿಫಲರಾಗಿದ್ದರು. ವಿಂಡೀಸ್ ವಿರುದ್ಧ, ರೋಹಿತ್ಗೆ ಫಾರ್ಮ್ಗೆ ಮರಳುವ ಅವಕಾಶ ಸೃಷ್ಟಿಯಾಗಿದೆ. ಭಾರತವು ತಮ್ಮ ಡಬ್ಲ್ಯುಟಿಸಿ 2023-25 ಚಕ್ರವನ್ನು ಗೆಲುವಿನೊಂದಿಗೆ ಆರಂಭಿಸಲು ಯೋಜನೆ ರೂಪಿಸಿಕೊಂಡಿದೆ.
ಟೆಸ್ಟ್ ಸರಣಿಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಋತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ಅಜಿಂಕ್ಯ ರಹಾನೆ (ಉಪನಾಯಕ), ಕೆಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ. ಸಿರಾಜ್, ಮುಖೇಶ್ ಕುಮಾರ್, ಜಯದೇವ್ ಉನಾದ್ಕಟ್, ನವದೀಪ್ ಸೈನಿ.