Site icon Vistara News

Rohit Sharma: 18ನೇ ಆವೃತ್ತಿಯಲ್ಲಿ ಚೆನ್ನೈ ತಂಡ ಸೇರಲಿದ್ದಾರೆ ರೋಹಿತ್​; ಸುಳಿವು ಕೊಟ್ಟ ಸಿಎಸ್​ಕೆ ಮಾಜಿ ಆಟಗಾರ

rohit sharma and ms dhoni

ಮುಂಬಯಿ: ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಅವರನ್ನು ಮುಂಬೈ ಇಂಡಿಯನ್ಸ್‌(Mumbai Indians) ತಂಡ ಟ್ರೇಡಿಂಗ್​ ಮೂಲಕ ಖರೀದಿಸಿ ತಂಡದ ನಾಯಕನನ್ನಾಗಿ ನೇಮಿಸಿದಾಗಿನಿಂದ ರೋಹಿತ್​ ಶರ್ಮ(Rohit Sharma) ಅವರು ಮುಂಬೈ ತಂಡ ತೊರೆಯಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿತ್ತು. ರೋಹಿತ್​ ತಂಡ ತೊರೆಯದೆ ಈ ಬಾರಿಯೂ ಮುಂಬೈ ಪರವೇ ಕಣಕ್ಕಿಳಿಯುತ್ತಿದ್ದಾರೆ. ಆದರೆ, ಮುಂದಿನ ಆವೃತ್ತಿಯಲ್ಲಿ(IPL 2025) ಅವರು ಮುಂಬೈ ತೊರೆದು ಚೆನ್ನೈ ಸೂಪರ್​ ಕಿಂಗ್ಸ್​ ಸೇರುವು ಸಾಧ್ಯತೆ ಅಧಿಕವಾಗಿದೆ. ಈ ಸುಳಿವನ್ನು ಚೆನ್ನೈ(Chennai Super Kings) ತಂಡದ ಮಾಜಿ ಆಟಗಾರರೊಬ್ಬರು ಬಿಟ್ಟುಕೊಟ್ಟಿದ್ದಾರೆ.

ಹೌದು, ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಮಾಜಿ ಆಟಗಾರ, ಮುಂಬೈ ಇಂಡಿಯನ್ಸ್​ ಪರವೂ ಆಡಿರುವ ಅಂಬಾಟಿ ರಾಯುಡು(Ambati Rayudu) ಅವರು ರೋಹಿತ್​ ಶರ್ಮ ಮುಂದಿನ ಆವೃತ್ತಿಯಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ತಂಡವನ್ನು ಮುನ್ನಡೆಸಬೇಕು ಎಂದು ಹೇಳಿದ್ದಾರೆ. ಅವರ ಈ ಹೇಳಿಕೆಯನ್ನು ಗಮನಿಸುವಾಗ ರೋಹಿತ್​ ಅವರು ಚೆನ್ನೈ ಸೇರುವುದು ಬಹುತೇಕ ಖಚಿತ ಎನ್ನುವಂತಿದೆ.

“ಭವಿಷ್ಯದಲ್ಲಿ ರೋಹಿತ್​ ಅವರು ಚೆನ್ನೈ ಸೂಪರ್​ ಕಿಂಗ್ಸ್​ ಪರ ಆಡುವುದನ್ನು ನೋಡಲು ಬಯಸುತ್ತೇನೆ. ಅವರು ಮುಂಬೈ ಇಂಡಿಯನ್ಸ್‌ಗಾಗಿ ಇಷ್ಟು ದಿನ ಆಡಿದ್ದಾರೆ. ಮುಂದಿನ ಆವೃತ್ತಿಯಿಂದ ಸಿಎಸ್​ಕೆಗಾಗಿ ಆಡಿದರೆ ಮತ್ತು ಅಲ್ಲಿಯೂ ಅವರ ನಾಯಕತ್ವದಲ್ಲಿ ತಂಡ ಗೆದ್ದರೆ ಒಳ್ಳೆಯದು. ಚೆನ್ನೈ ಪರ ಆಡಬೇಕೆ ಅಥವಾ ಆಡಬಾರದೇ ಎಂಬುವುದು ರೋಹಿತ್​ಗೆ ಬಿಟ್ಟ ನಿರ್ಧಾರ. ಅವರು ಆಡಬೇಕು ಎನ್ನುವುದು ನನ್ನ ಸಲಹೆ” ಎಂದು ರಾಯುಡು ಹೇಳಿದರು.

ಮುಂದಿನ ವರ್ಷ ಆಟಗಾರರ ಮೆಗಾ ಹರಾಜು ಕೂಡ ನಡೆಯಲಿದೆ. ಜತೆಗೆ ಧೋನಿ ಕೂಡ ಈ ಬಾರಿ ಕೊನೆಯ ಐಪಿಎಲ್​ ಆಡುತ್ತಿದ್ದಾರೆ. ಹೀಗಾಗಿ ಧೋನಿ ಬಳಿಕ ಚೆನ್ನೈ ತಂಡಕ್ಕೆ ಸೂಕ್ತ ಸಾರಥಿಯೊಬ್ಬರ ಅವಶ್ಯವಿದೆ. ರಾಯುಡು ಹೇಳಿದಂತೆ ರೋಹಿತ್ ಚೆನ್ನೈ ಸೇರಿದರೂ​ ಅಚ್ಚರಿಯಿಲ್ಲ.

ಇದನ್ನೂ ಓದಿ IPL 2025: ಮುಂದಿನ ಐಪಿಎಲ್​ಗೂ ಮುನ್ನ ಮೆಗಾ ಹರಾಜು; ತಂಡವೊಂದಕ್ಕೆ ಎಷ್ಟು ಆಟಗಾರರ ರಿಟೇನ್ ಸಾಧ್ಯ?

“ಮುಂಬೈ ತಂಡ ಎಂದಿಗೂ ಅಸಾಧಾರಣ ನಾಯಕತ್ವ ಕಂಡ ತಂಡ. ಸಚಿನ್‌ ತೆಂಡೂಲ್ಕರ್​ ಅವರಿಂದ ಹರ್ಭಜನ್‌ ತನಕ, ಪಾಂಟಿಂಗ್‌ ಅವರಿಂದ ರೋಹಿತ್‌ ತನಕ ಉತ್ತಮ ನಾಯಕರನ್ನು ಕಂಡಿದೆ. ಇವರಲ್ಲಿ ರೋಹಿತ್‌ ಅವರದು ಅತ್ಯಂತ ದೊಡ್ಡ ಕೊಡುಗೆ ಇದೆ. 5 ಬಾರಿ ತಂಡವನ್ನು ಚಾಂಪಿಯನ್​ ಮಾಡಿದ್ದಾರೆ. ಫ್ರಾಂಚೈಸಿ ಎಂದಿಗೂ ರೋಹಿತ್‌ಗೆ ಕೃತಜ್ಞವಾಗಿದೆ” ಎಂದು ಮುಂಬೈ ಇಂಡಿಯನ್ಸ್​ ತನ್ನ ವೆಬ್‌ಸೈಟ್‌ನಲ್ಲಿ ಬರೆದು ರೋಹಿತ್​ ಅವರನ್ನು ನಾಯಕ್ವದಿಂದ ಕೆಳಗಿಳಿಸಿದ ನಿರ್ಧಾರವನ್ನು ಪ್ರಕಟಿಸಿತ್ತು.

ಈ ಬಾರಿಯ ಐಪಿಎಲ್​ ಟೂರ್ನಿ ಇದೇ ಮಾರ್ಚ್​ 22 ರಿಂದ ಆರಂಭಗೊಳ್ಳಲಿದೆ. ಲೋಕಸಭಾ ಚುನಾವಣೆಯ ಹಿನ್ನಲೆ 2 ಹಂತದಲ್ಲಿ ಪಂದ್ಯವಾಳಿಗಳು ನಡೆಯಲಿದೆ. ಉದ್ಘಾಟನ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ಮತ್ತು ರಾಯಲ್​ ಚಾಲೆಂಜರ್ಸ್ ಬೆಂಗಳೂರು ಮುಖಾಮುಖಿಯಾಗಲಿದೆ. ಈ ಪಂದ್ಯಕ್ಕೆ ಎಂ.ಎಂ ಚಿದಂಬರಂ ಸ್ಟೇಡಿಯಂ ಅಣಿಯಾಗಿದೆ.

Exit mobile version