Site icon Vistara News

Rohit Sharma: ರೋಹಿತ್​ ಬ್ಯಾಟಿಂಗ್​ ಆರ್ಭಟ; ಸೌರವ್​ ಗಂಗೂಲಿಯ ದಾಖಲೆ ಧೂಳಿಪಟ

Rohit Sharma raises his bat after scoring a hundred

ರಾಜ್​ಕೋಟ್​: ಇಂಗ್ಲೆಂಡ್​(India vs England 3rd Test) ವಿರುದ್ಧ ಸಾಗುತ್ತಿರುವ ಮೂರನೇ ಟೆಸ್ಟ್​ ಪಂದ್ಯದಲ್ಲಿ ಶತಕ ಬಾರಿಸಿ ಸಂಭ್ರಮಿಸಿದ ಹಿಟ್​ಮ್ಯಾನ್​ ಖ್ಯಾತಿಯ ರೋಹಿತ್​ ಶರ್ಮಾ(Rohit Sharma) ಅವರು ಮಾಜಿ ನಾಯಕ ಸೌರವ್​ ಗಂಗೂಲಿಯ(Sourav Ganguly) ದಾಖಲೆಯೊಂದನ್ನು ಮುರಿದಿದ್ದಾರೆ.

ಇಲ್ಲಿನ ನಿರಂಜನ್​ ಶಾ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ರೋಹಿತ್​ ಶರ್ಮ 65 ರನ್ ಗಡಿ ದಾಟುತ್ತಿದಂತೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ 4ನೇ ಭಾರತೀಯ ಆಟಗಾರ ಎನಿಸಿಕೊಂಡರು. ಇದೇ ವೇಳೆ ದಂತಕಥೆ ಸೌರವ್ ಗಂಗೂಲಿ ಅವರ ದಾಖಲೆ ಪತನಗೊಂಡಿತು. ಗಂಗೂಲಿ 424 ಪಂದ್ಯಗಳನ್ನು ಆಡುವ ಮೂಲಕ 18575 ರನ್ ಗಳಿಸಿದ್ದರು. ಇದೀಗ ರೋಹಿತ್ ಶರ್ಮಾ ಅವರು 470 ನೇ ಅಂತಾರಾಷ್ಟ್ರೀಯ ಪಂದ್ಯದಲ್ಲಿ 18600* ರನ್​ ಬಾರಿಸಿ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದರು.

ಸಾರ್ವಕಾಲಿಕ ದಾಖಲೆ ಸಚಿನ್​ ತೆಂಡೂಲ್ಕರ್​ ಹೆಸರಿನಲ್ಲಿದೆ. ತೆಂಡೂಲ್ಕರ್ ಅವರು ತಮ್ಮ ಎರಡು ದಶಕಗಳ ಕ್ರಿಕೆಟ್​ ವೃತ್ತಿಜೀವನದಲ್ಲಿ 34357 ರನ್ ಗಳಿಸಿ ಒಟ್ಟಾರೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಕಳೆದುಕೊಂಡಿರುವ ವಿರಾಟ್ ಕೊಹ್ಲಿ ಇದುವರೆಗೆ 522 ಪಂದ್ಯಗಳಲ್ಲಿ 80 ಶತಕಗಳೊಂದಿಗೆ 54.11 ಸರಾಸರಿಯಲ್ಲಿ 26733 ರನ್ ಗಳಿಸಿ ದ್ವಿತೀಯ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ Rohit Sharma: ಮಹೇಂದ್ರ ಸಿಂಗ್​ ಧೋನಿ ದಾಖಲೆ ಮುರಿದ ರೋಹಿತ್​ ಶರ್ಮ

ಪ್ರಸ್ತುತ ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ 509 ಪಂದ್ಯಗಳಲ್ಲಿ 45.41 ಸರಾಸರಿಯಲ್ಲಿ 24208 ರನ್ ಗಳಿಸುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯರ ಆಟಗಾರರ ಪೈಕಿ ಮೂರನೇ ಸ್ಥಾನದಲ್ಲಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ರನ್​ಗಳಿಸಿದ ಟಾಪ್​ 5 ಭಾರತೀಯ ಆಟಗಾರರು

ಆಟಗಾರರನ್​
ಸಚಿನ್​ ತೆಂಡೂಲ್ಕರ್​34357
ವಿರಾಟ್​ ಕೊಹ್ಲಿ26733*
ರಾಹುಲ್​ ದ್ರಾವಿಡ್​24208
ರೋಹಿತ್​ ಶರ್ಮ18600*
ಸೌರವ್​ ಗಂಗೂಲಿ18575

ಸಿಕ್ಸರ್​ ದಾಖಲೆ ಬರೆದ ರೋಹಿತ್​


ಈ ಪಂದ್ಯದಲ್ಲಿ 3 ಸಿಕ್ಸರ್​ ಬಾರಿಸುವ ಮೂಲಕ ರೋಹಿತ್​ ಶರ್ಮ ಅವರು ಟೆಸ್ಟ್​ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಸಿಕ್ಸರ್​ ಬಾರಿಸಿದ ಭಾರತದ 2ನೇ ಆಟಗಾರ ಎನಿಸಿಕೊಂಡರು. ಈ ಹಿಂದೆ 78 ಸಿಕ್ಸರ್ ಬಾರಿಸಿ ದ್ವಿತೀಯ ಸ್ಥಾನದಲ್ಲಿದ್ದ ಧೋನಿ ಇದೀಗ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ರೋಹಿತ್​ ಸದ್ಯ 80* ಸಿಕ್ಸರ್​ ದಾಖಲಿಸಿದ್ದಾರೆ. ಮಾಜಿ ಡ್ಯಾಶಿಂಗ್​ ಆಟಗಾರ ವಿರೇಂದ್ರ ಸೆಹವಾಗ್​ ಅಗ್ರಸ್ಥಾನದಲ್ಲಿದ್ದಾರೆ. ಸೆಹವಾಗ್ 104 ಟೆಸ್ಟ್​ ಪಂದ್ಯ ಆಡಿ 91 ಸಿಕ್ಸರ್​ ಬಾರಿಸಿದ್ದಾರೆ. ಸೆಹವಾಗ್​ ದಾಖಲೆ ಮುರಿಯಲು ರೋಹಿತ್​ಗೆ ಇನ್ನು 13 ಸಿಕ್ಸರ್​ಗಳ ಅಗತ್ಯವಿದೆ. ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡೂಲ್ಕರ್​ ಅವರು 69 ಸಿಕ್ಸರ್​ ಬಾರಿಸಿ ನಾಲ್ಕನೇ ಸ್ಥಾನ, ಕಪಿಲ್​ ದೇವ್​ 61 ಸಿಕ್ಸರ್​ ಬಾರಿಸಿ 5ನೇ ಸ್ಥಾನ ಪಡೆದಿದ್ದಾರೆ. ಒಟ್ಟು 196 ಎಸೆತ ಎದುರಿಸಿದ ರೋಹಿತ್​ 14 ಬೌಂಡರಿ ಮತ್ತು 3 ಸಿಕ್ಸರ್​ ನೆರವಿನಿಂದ 131 ರನ್ ಬಾರಿಸಿದರು.

Exit mobile version