ಮೊಹಾಲಿ : ಭಾರತ ಕ್ರಿಕೆಟ್ ತಂಡದ ಆಟಗಾರರು ಎಂದರೆ ದಾಖಲೆ ಶೂರರು. ಒಬ್ಬೊಬ್ಬರು ಒಂದೊಂದು ರೀತಿಯ ದಾಖಲೆ ಸೃಷ್ಟಿಸಿರುತ್ತಾರೆ. ಅಂತೆಯೇ ನಾನಾ ದಾಖಲೆಗಳನ್ನು ತಮ್ಮೆಸರಿಗೆ ಬರೆಸಿಕೊಂಡಿರುವ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮ ಅವರು ಶೀಘ್ರದಲ್ಲೇ ಮತ್ತೊಂದು ಹೊಸ ದಾಖಲೆ ಸೃಷ್ಟಿಸಲಿದ್ದಾರೆ. ಅದುವೇ ಗರಿಷ್ಠ ಸಿಕ್ಸರ್‌ಗಳ ದಾಖಲೆ.
ರೋಹಿತ್ ಶರ್ಮ ಅವರು ಟಿ೨೦ ಮಾದರಿಯಲ್ಲಿ ಸದ್ಯ ೧೭೧ ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಇಷ್ಟೊಂದು ಸಿಕ್ಸರ್‌ಗಳೊಂದಿಗೆ ಅವರು ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. ನ್ಯೂಜಿಲೆಂಡ್ ತಂಡದ ಮಾರ್ಟಿನ್ ಗಪ್ಟಿಲ್ ಪ್ರಸ್ತುತ ೧೭೨ ಸಿಕ್ಸರ್‌ಗಳೊಂದಿಗೆ ಮೊದಲ ಸ್ಥಾನದಲ್ಲಿ ಇದ್ದಾರೆ. ಆಸ್ಟ್ರೇಲಿಯಾದ ವಿರುದ್ಧದ ಸರಣಿ ಸೆಪ್ಟೆಂಬರ್ ೨೦ರಂದು ಆರಂಭವಾಗಲಿದ್ದು ಮೊದಲ ಪಂದ್ಯ ಮೊಹಾಲಿಯಲ್ಲಿ, ಎರಡನೇ ಪಂದ್ಯ ಸೆಪ್ಟೆಂಬರ್ ೨೩ರಂದು ನಾಗ್ಪುರ ಹಾಗೂ ಮೂರನೇ ಹಾಗೂ ಕೊನೇ ಪಂದ್ಯದ ಹೈದರಾಬಾದ್‌ನಲ್ಲಿ ಸೆಪ್ಟೆಂಬರ್ ೨೫ರಂದು ನಡೆಯಲಿದೆ. ಈ ಸರಣಿಯಲ್ಲಿ ರೋಹಿತ್ ಎರಡು ಸಿಕ್ಸರ್ ಬಾರಿಸಿದರೆ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ದಾಖಲೆಯನ್ನು ತಮ್ಮೆಸರಿಗೆ ಬರೆಸಿಕೊಳ್ಳಲಿದ್ದಾರೆ.
ವೆಸ್ಟ್ ಇಂಡೀಸ್‌ನ ಮಾಜಿ ದೈತ್ಯ ಬ್ಯಾಟರ್ ೧೨ರ ಸಿಕ್ಸರ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್ ಮಾಜಿ ನಾಯಕ ಇಯಾನ್ ಮಾರ್ಗನ್ ೧೨೦ ಸಿಕ್ಸರ್ ಬಾರಿಸಿ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ. ಆಸ್ಟ್ರೇಲಿಯಾ ತಂಡದ ನಾಯಕ ಆರೋನ್ ಫಿಂಚ್ ೧೧೭ ಸಿಕ್ಸರ್ ಬಾರಿಸಿ ಐದನೇ ಸ್ಥಾನ ಪಡೆದುಕೊಂಡಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಟಿ೨೦ ಸರಣಿಯ ಕಡೆಗೆ ಕ್ರಿಕೆಟ್ ಪ್ರೇಮಿಗಳ ದೃಷ್ಟಿ ನೆಟ್ಟಿದ್ದು, ಈ ಪಂದ್ಯಗಳು ಮುಂಬರುವ ವಿಶ್ವ ಕಪ್‌ಗೆ ಭಾರತ ತಂಡದ ಆಟಗಾರರಿಗೆ ಉತ್ತಮ ಅಭ್ಯಾಸ ಪಂದ್ಯ ಎನಿಸಿಕೊಳ್ಳಬಹುದು. ಆಸೀಸ್ ಬಳಗದ ವಿರುದ್ಧದ ಸರಣಿ ಮುಕ್ತಾಯಗೊಂಡ ಬಳಿಕ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಸೀಮಿತ ಓವರ್‌ಗಳ ಸರಣಿ ಆಯೋಜನೆಗೊಂಡಿವೆ.
ಇದನ್ನೂ ಓದಿ | Asia Cup | ರೋಹಿತ್ ಶರ್ಮ, ಎರಡೆರಡು ದಾಖಲೆಗಳ ಹಿಟ್; ಅವುಗಳು ಯಾವುದೆಲ್ಲ?