Site icon Vistara News

Rohit Sharma : ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಬಂದ ಭಾರತ ತಂಡದ ನಾಯಕ

Tirupathi Temple

ಬೆಂಗಳೂರು: ಟೀಮ್ ಇಂಡಿಯಾದ ನಾಯಕ ರೋಹಿತ್​ ಶರ್ಮಾ ಅವರು ಕ್ರಿಕೆಟ್​ನಿಂದ ವಿಶ್ರಾಂತಿ ಪಡೆದುಕೊಂಡಿದ್ದಾರೆ. ಅವರು ವೆಸ್ಟ್​ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಆಡುತ್ತಿಲ್ಲ ಹಾಗೂ ಐರ್ಲೆಂಡ್​ ವಿರುದ್ಧದ ಸರಣಿಯಲ್ಲೂ ಆಡುತ್ತಿಲ್ಲ. ಈ ಅವಧಿಯಲ್ಲಿ ಅವರು ಪತ್ನಿ ಹಾಗೂ ಮಕ್ಕಳೊಂದಿಗೆ ಸಮಯ ಕಳೆಯುತ್ತಿದ್ದಾರೆ. ಅಂತೆಯೇ ಅವರು ಮಂಗಳವಾರ ತಮ್ಮ ಪತ್ನಿ ಮತ್ತು ಮಗಳೊಂದಿಗೆ ವಿಶ್ವ ಪ್ರಸಿದ್ಧ ತಿರುಪತಿ ಬಾಲಾಜಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.

ರೋಹಿತ್ ತನ್ನ ಹಿಂದಿನ ವಿರಾಟ್ ಕೊಹ್ಲಿಯನ್ನು ನಕಲು ಮಾಡುತ್ತಿದ್ದಾರೆ ಎಂದು ಕೆಲವು ಅಭಿಮಾನಿಗಳು ಹೇಳಿದರೆ (ಈ ವರ್ಷದ ಮೇ ತಿಂಗಳಲ್ಲಿ ಕೊಹ್ಲಿ ಉಜ್ಜೈನಿಯ ಮಹಾಕಾಲೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದು ನೆನಪಿದೆಯೇ?), ಇತರರು ರೋಹಿತ್ ಶರ್ಮಾ ಅವರ ಬ್ಯಾಟ್ನಿಂದ ಪವಿತ್ರಾತ್ಮವು ಮತ್ತೆ ರನ್ ಹರಿಯುವಂತೆ ಮಾಡುತ್ತದೆ ಎಂದು ಆಶಿಸಿದರು.

ಯಾವುದಾದರೂ ಪ್ರಮುಖ ಟೂರ್ನಿಗಳ ಮೊದಲು ಆಟಗಾರರು ದೇವರ ದರ್ಶನ ಪಡೆಯುತ್ತಾರೆ. ಅಂತೆಯೇ ರೋಹಿತ್ ಶರ್ಮಾ ತಿರುಪತಿಗೆ ಭೇಟಿ ನೀಡಿದ್ದಾರೆ. ಏಷ್ಯಾ ಕಪ್ 2023 ಪ್ರಾರಂಭಕ್ಕೆ ಇನ್ನು ಹದಿನೈದು ದಿನ ಬಾಕಿ ಉಳಿದಿರುವ ಕಾರಣ ರೋಹಿತ್​ ತಿಮ್ಮಪ್ಪನ ದರ್ಶನ ಪಡೆಯಲು ಬಂದಿದ್ದಾರೆ. ಟೂರ್ನಿಯಲ್ಲಿ ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ.

ರೋಹಿತ್​ ಶರ್ಮಾ ಅವರು ತಿರುಪತಿ ತಿಮ್ಮಪ್ಪನ ಕ್ಷೇತ್ರಕ್ಕೆ ಹೋಗಿರುವ ವೀಡಿಯೊ ವೈರಲ್ ಆದ ಕೂಡಲೇ, ಅಭಿಮಾನಿಗಳು ಅದರ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಅದೇ ರೀತಿ ನಾನಾ ರೀತಿಯ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ರೋಹಿತ್ ಶರ್ಮಾ ವಿರಾಟ್ ಕೊಹ್ಲಿಯನ್ನು ನಕಲು ಮಾಡುತ್ತಿದ್ದಾರೆ ಎಂದು ಕೆಲವು ಅಭಿಮಾನಿಗಳು ಬರೆದುಕೊಂಡಿದ್ದಾರೆ. ಈ ವರ್ಷದ ಮೇ ತಿಂಗಳಲ್ಲಿ ಕೊಹ್ಲಿ ಉಜ್ಜೈನಿಯ ಮಹಾಕಾಲೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಹಿನ್ನೆಲೆಯಲ್ಲಿ ಈ ಪ್ರತಿಕ್ರಿಯೆ ಬರೆದಿದ್ದಾರೆ), ತಿಮ್ಮಪ್ಪನ ದರ್ಶನದ ಕಾರಣಕ್ಕೆ ರೋಹಿತ್ ಶರ್ಮಾ ಅವರ ಬ್ಯಾಟ್​ನಿಂದ ರನ್​ ಹರಿದುಬರಲಿದೆ ಎಂದು ಹೇಳಿದ್ದಾರೆ.

ತಿಲಕ್​ವರ್ಮಾ ಲಭ್ಯತೆ ಕುರಿತು ರೋಹಿತ್ ಮಾತು

ಮುಂಬರುವ ವಿಶ್ವಕಪ್​ಗಾಗಿ ಏಕದಿನ ತಂಡದಲ್ಲಿ ರೆಡ್-ಹಾಟ್ ಫಾರ್ಮ್​​ನಲ್ಲಿರುವ ತಿಲಕ್ ವರ್ಮಾ ಅವರನ್ನು ಸೇರಿಸಬೇಕೆಂದು ತಜ್ಞರು ಕರೆ ನೀಡಿದ ಮಧ್ಯೆ ರೋಹಿತ್ ಶರ್ಮಾ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅನುಭವಿ ಕ್ರಿಕೆಟಿಗ ರೋಹಿತ್ ವಿಶ್ವಕಪ್​​ನಲ್ಲಿ ತಮ್ಮದೇ ಆದ ಕಾರ್ಯತಂತ್ರವನ್ನು ಬಹಿರಂಗಪಡಿಸದಿದ್ದರೂ ಯುವ ಆಟಗಾರನನ್ನು ಶ್ಲಾಘಿಸಿದರು.

ಇದನ್ನೂ ಓದಿ : Red Card : ಫುಟ್ಬಾಲ್​ನಂತೆ ಕ್ರಿಕೆಟ್​ಗೂ ಬಂತು ರೆಡ್​ ಕಾರ್ಡ್​ ರೂಲ್ಸ್​!

ತಿಲಕ್​ ವರ್ಮಾ ತುಂಬಾ ಭರವಸೆದಾಯಕವಾಗಿ ಕಾಣುತ್ತಾರೆ. ನಾನು ಈಗ ಎರಡು ವರ್ಷಗಳಿಂದ ಅವರನ್ನು ನೋಡಿದ್ದೇನೆ. ಅವರಿಗೆ ಆಟದ ಹಸಿವು ಇರುವುದೇ ಮುಖ್ಯವಾದ ವಿಷಯ” ಎಂದು ರೋಹಿತ್ ಹೇಳಿದ್ದಾರೆ. ಅವರಲ್ಲಿ ನಾನು ನೋಡುತ್ತಲೇ ಇದ್ದೇನೆ. ಅವರು ಸಾಕಷ್ಟು ಪ್ರಬುದ್ಧರಾಗಿದ್ದಾರೆ. ಅವರ ಬ್ಯಾಟಿಂಗ್ ವೈಖರಿ ಚೆನ್ನಾಗಿದೆ ಎಂದು ಅವರು ಹೇಳಿದ್ದಾರೆ.

ನಾನು ಅವರ ಬಗ್ಗೆ ಇಷ್ಟು ಮಾತ್ರ ಹೇಳುತ್ತೇನೆ. ವಿಶ್ವಕಪ್ ಮತ್ತು ಎಲ್ಲದರ ಬಗ್ಗೆ ನನಗೆ ತಿಳಿದಿಲ್ಲ, ಆದರೆ ಖಂಡಿತವಾಗಿಯೂ ತಿಲಕ್​​ ಪ್ರತಿಭಾವಂತ ಮತ್ತು ಅವರು ಭಾರತಕ್ಕಾಗಿ ಆಡಿದ ಈ ಕೆಲವು ಪಂದ್ಯಗಳಲ್ಲಿ ಅದನ್ನು ತೋರಿಸಿದ್ದಾರೆ ಎಂದು ಅವರು ಹೇಳಿದರು.

Exit mobile version