ದುಬೈ : ಅಫಘಾನಿಸ್ತಾನ ತಂಡದ ವಿರುದ್ಧದ ಏಷ್ಯಾ ಕಪ್ (Asia Cup- 2022) ಸೂಪರ್-೪ ಪಂದ್ಯದಲ್ಲಿ ಭಾರತ ತಂಡ ಟಾಸ್ ಸೋತಿದ್ದು, ಬ್ಯಾಟ್ ಮಾಡಲು ಎದುರಾಳಿ ತಂಡದಿಂದ ಆಹ್ವಾನ ಪಡೆದುಕೊಂಡಿದೆ. ಈ ಪಂದ್ಯದಲ್ಲಿ ರೋಹಿತ್ ಶರ್ಮ ಅವರಿಗೆ ವಿಶ್ರಾಂತಿ ಕಲ್ಪಿಸಲಾಗಿದ್ದು, ಕೆ. ಎಲ್ ರಾಹುಲ್ ತಂಡವನ್ನು ಮುನ್ನಡೆಸಲಿದ್ದಾರೆ. ಇತ್ತಂಡಗಳು ಫೈನಲ್‌ಗೇರುವ ಅವಕಾಶ ಕಳೆದುಕೊಂಡಿರುವ ಕಾರಣ ಅನೌಪಚಾರಿಕ ಪಂದ್ಯವಾಗಿದ್ದು, ಇಲ್ಲಿನ ಏಷ್ಯಾ ಕಪ್ ಅಭಿಯಾನ ಮುಕ್ತಾಯಗೊಳ್ಳಲಿದೆ.
ಭಾರತ ತಂಡದಲ್ಲಿ ರೋಹಿತ್ ಶರ್ಮ ಅವರಲ್ಲದೆ, ಹಾರ್ದಿಕ್ ಪಾಂಡ್ಯ ಮತ್ತು ಯಜ್ವೇಂದ್ರ ಚಹಲ್ ಅವರಿಗೂ ವಿಶ್ರಾಂತಿ ನೀಡಲಾಗಿದೆ.
ಸೂಪರ್- ೪ ಹಂತದ ಮೊದಲ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನ ತಂಡದ ವಿರುದ್ಧ ಐದು ವಿಕೆಟ್‌ಗಳಿಂದ ಸೋಲು ಕಂಡಿದ್ದರೆ, ಲಂಕಾ ವಿರುದ್ಧ ಆರು ವಿಕೆಟ್‌ಗಳ ಸೋಲಿಗೆ ಒಳಗಾಗಿತ್ತು. ಇದೊಂದಿಗೆ ಟೂರ್ನಿಯ ಬಲಿಷ್ಠ ತಂಡ ಎನಿಸಿಕೊಂಡಿದ್ದ ರೋಹಿತ್ ಶರ್ಮ ಬಳಗ ನಿರಾಸೆ ಎದುರಿಸಿತ್ತು. ಅಫಘಾನಿಸ್ತಾನ ತಂಡ ಶ್ರೀಲಂಕಾ ವಿರುದ್ಧದ ಮೊದಲ ಪಂದ್ಯ ಹಾಗೂ ಪಾಕಿಸ್ತಾನ ತಂಡದ ಎರಡನೇ ಪಂದ್ಯದಲ್ಲಿ ಸೋಲು ಕಂಡಿತ್ತು.
ತಂಡಗಳು
ಭಾರತ: ಕೆ.ಎಲ್ ರಾಹುಲ್ (ನಾಯಕ) ಸೂರ್ಯಕುಮಾರ್ ಯಾದವ್, ವಿರಾಟ್ ಕೊಹ್ಲಿ, ರಿಷಭ್ ಪಂತ್ (ವಿಕೆಟ್‌ಕೀಪರ್), ದೀಪಕ್ ಹೂಡ, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ದೀಪಕ್ ಚಾಹರ್, ಭುವನೇಶ್ವರ್ ಕುಮಾರ್, ಆರ್. ಅಶ್ವಿನ್, ಅರ್ಶ್‌ದೀಪ್ ಸಿಂಗ್.
ಅಫಘಾನಿಸ್ತಾನ : ಮೊಹಮ್ಮದ್ ನಬಿ (ನಾಯಕ), ಹಜರತುಲ್ಲಾ ಜಜೈ, ರಹಮನುಲ್ಲಾ ಗುರ್ಬಜ್, ಇಬ್ರಾಬಿ ಜದ್ರಾನ್, ನಜೀಬುಲ್ಲಾ ಜದ್ರಾನ್, ಕರೀಮ್ ಜಾನತ್, ರಶೀದ್ ಖಾನ್, ಅಜ್ಮತುಲ್ಲಾ ಒಮರ್ಜೈ, ಮುಜೀಬ್ ಉರ್ ರಹಮಾನ್, ಫರೀದ್ ಅಹಮದ್ ಮಲಿಕ್, ಫಜಲಕ್ ಫರೂಕಿ.