Site icon Vistara News

Asia Cup 2023 : ಏಷ್ಯಾವನ್ನೇ ಗೆಲ್ಲಲಿದೆ ರೋಹಿತ್​ ಪಡೆ, ಸ್ಟಾರ್​ ಸ್ಪೋರ್ಟ್ಸ್​ ಟ್ರೈಲರ್​ ಬಿಡುಗಡೆ

Asia Cup 2023

#image_title

ಮುಂಬಯಿ: ಏಷ್ಯಾಕಪ್ 2023ರ (Asia Cup 2023) ಉದ್ಘಾಟನಾ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಟೀಮ್ ಇಂಡಿಯಾ ಎದುರಿಸಲಿದೆ. ಈ ಮೂಲಕ ಖಂಡಾಂತರ ಟೂರ್ನಿಗೆ ಅದ್ಧೂರಿ ಆರಂಭ ಸಿಗಲಿದೆ. ಏತನ್ಮಧ್ಯೆ, ಭಾರತದಲ್ಲಿ ಟೂರ್ನಿಯ ಅಧಿಕೃತ ನೇರ ಪ್ರಸಾರ ಟಿವಿ ಸ್ಟಾರ್ ಸ್ಪೋರ್ಟ್ಸ್​ ತಮ್ಮ ಸಾಮಾಜಿಕ ಮಾಧ್ಯಮ ಫ್ಲ್ಯಾಟ್​ಫಾರ್ಮ್​​ಗಳಲ್ಲಿ ಟ್ರೈಲರ್​ ಬಿಡುಗಡೆ ಮಾಡಿದೆ. ಅದರಲ್ಲಿ ಭಾರತ ತಂಡ ಮತ್ತೊಮ್ಮೆ ಟ್ರೋಫಿ ಗೆಲ್ಲುವ ಎಲ್ಲ ಸಾಧ್ಯತೆಗಳಿವೆ ಎಂಬುದಾಗಿ ತೋರಿಸಲಾಗಿದೆ. ಭಾರತ ತಂಡದ ಆಟಗಾರರ ಪರಾಕ್ರಮವನ್ನು ತೋರಿಸಿ ಏಷ್ಯಾವನ್ನೇ ಭಾರತ ಗೆಲ್ಲಲಿದೆ ಎಂದು ಬಣ್ಣಿಸಲಾಗಿದೆ.

ಏಷ್ಯಾಕಪ್ 2023 ರಲ್ಲಿ ಒಟ್ಟು 6 ತಂಡಗಳಿವೆ. ಈ ತಂಡಗಳನ್ನು ಗ್ರೂಪ್ ಎ ಮತ್ತು ಗ್ರೂಪ್ ಬಿ ಎಂದು ಕರೆಯಲಾಗುವ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ‘ಎ’ ಗುಂಪಿನಲ್ಲಿ ಪಾಕಿಸ್ತಾನ, ಭಾರತ, ನೇಪಾಳ ತಂಡಗಳಿವೆ. ‘ಬಿ’ ಗುಂಪಿನಲ್ಲಿ ಅಫ್ಘಾನಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ ತಂಡಗಳಿವೆ. ನಾಕೌಟ್ ಹಂತಗಳನ್ನು ತಲುಪಲು ಈ ತಂಡಗಳು ಪರಸ್ಪರ ಆಡಲಿವೆ. ನಂತರ ಅಗ್ರ 2 ತಂಡಗಳು ಪ್ರಶಸ್ತಿ ಗೆಲ್ಲಲು ಫೈನಲ್​ ಪಂದ್ಯದಲ್ಲಿ ಆಡಲಿದೆ.

ಮುಂಬರುವ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮೂರು ಬಾರಿ ಮುಖಾಮುಖಿಯಾಗುವ ಸಾಧ್ಯತೆ ಇದೆ. ಪಾಕಿಸ್ತಾನ ಮತ್ತು ನೇಪಾಳದೊಂದಿಗೆ ಭಾರತ ತಂಡ ಎ ಗುಂಪಿನಲ್ಲಿ ಸ್ಥಾನ ಪಡೆದಿದೆ. ಇದರರ್ಥ ರೋಹಿತ್ ಶರ್ಮಾ ಬಳಗ ಗ್ರೂಪ್ ಹಂತದ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ಭಾರತ ಮತ್ತು ಪಾಕಿಸ್ತಾನ ತಂಡಗಳು ‘ಎ’ ಗುಂಪಿನಿಂದ ಸೂಪರ್ 4ಕ್ಕೆ ಅರ್ಹತೆ ಪಡೆಯುವ ಸಾಧ್ಯತೆಯಿದೆ.

ಇದನ್ನೂ ಓದಿ : IPL 2023 : ಡಕ್​ಔಟ್​ ಆಗುವ ಮೂಲಕ ಅನಗತ್ಯ ದಾಖಲೆ ಸೃಷ್ಟಿಸಿಕೊಂಡ ರೋಹಿತ್ ಶರ್ಮಾ

ಸೂಪರ್ 4 ಹಂತದಲ್ಲಿ ಎಲ್ಲಾ ತಂಡಗಳು ಫೈನಲ್ ಪಂದ್ಯಕ್ಕೆ ಅರ್ಹತೆ ಪಡೆಯಲು ಪರಸ್ಪರ ಮುಖಾಮುಖಿಯಾಗಲಿವೆ. ಭಾರತ ಮತ್ತು ಪಾಕಿಸ್ತಾನ ತಂಡಗಳೆರಡೂ ಫೈನಲ್​​ಗೆ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾದರೆ, ಅಭಿಮಾನಿಗಳಿಗೆ ಮತ್ತೊಂದು ಮಿನಿ ಸಮರದ ಖುಷಿ ಸಿಗಲಿದೆ. ಆಗಸ್ಟ್ 31ರಂದು ಆರಂಭವಾಗಲಿರುವ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಪಾಕಿಸ್ತಾನ ತಂಡ ಭಾರತವನ್ನು ಎದುರಿಸಲಿದೆ.

ವಿಶ್ವಕಪ್ ವೇಳಾಪಟ್ಟಿ ವಿಳಂಬ: ಪಾಕ್​ ಕ್ರಿಕೆಟ್​ ಮಂಡಳಿ ಉದ್ಧಟತನಕ್ಕೆ ಬಿಸಿಸಿಐ ಗರಂ

ಐಸಿಸಿ ವಿಶ್ವಕಪ್ 2023 ರ ವೇಳಾಪಟ್ಟಿ ಬಿಡುಗಡೆಗೆ ಸಂಬಂಧಿಸಿದಂತೆ ಬಿಸಿಸಿಐ ಮತ್ತು ಪಿಸಿಬಿ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ ತಮ್ಮ ಅಗತ್ಯಕ್ಕೆ ಅನುಗುಣವಾಗಿ ಪಂದ್ಯದ ಸ್ಥಳಗಳನ್ನು ಬದಲಾವಣೆ ಮಾಡಲು ಕೋರುತ್ತಿದೆ. ಹೀಗಾಗಿ ಕರಡು ಪ್ರತಿಗೆ ಅವರು ಒಪ್ಪಿಗೆ ಕೊಡುತ್ತಿಲ್ಲ. ಹೀಗಾಗಿ ವೇಳಾಪಟ್ಟಿಯ ನಿರಂತರ ವಿಳಂಬದಿಂದ ಬಿಸಿಸಿಐ ನಿರಾಶೆಗೊಂಡಿದೆ. ಡಬ್ಲ್ಯುಟಿಸಿ ಫೈನಲ್ಸ್ ನಂತರ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಆದರೆ ಪಿಸಿಬಿಯ ಒಪ್ಪಿಗೆ ಸಿಗದ ಕಾರಣ ವೇಳಾಪಟ್ಟಿ ಬಿಡುಗಡೆ ಮಾಡಲು ಇನ್ನೂ ಸಾಧ್ಯವಾಗಿಲ್ಲ. ಹೀಗಾಗಿ ವೇಳಾಪಟ್ಟಿಯನ್ನು ಮುಂದಿನ ವಾರ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

ಕಳೆದ ವಾರ ಐಸಿಸಿ ಕರಡು ವೇಳಾಪಟ್ಟಿಯನ್ನು ಕಳುಹಿಸಿದೆ. ಇದಕ್ಕಾಗಿ ತಮ್ಮ ಪ್ರತಿಕ್ರಿಯೆಯನ್ನು ನೀಡುವಂತೆ ಪಿಸಿಬಿಯನ್ನು ಕೋರಿದೆ. ಕರಡು ವೇಳಾಪಟ್ಟಿಗೆ ಭಾರತಕ್ಕೆ ಯಾವುದೇ ಆಕ್ಷೇಪಣೆಗಳಿಲ್ಲವಾದರೂ, ಪಿಸಿಬಿ ತಮ್ಮ ಪಂದ್ಯಗಳಲ್ಲಿ ಎರಡು ಪ್ರಮುಖ ಬದಲಾವಣೆಗಳನ್ನು ವಿನಂತಿಸಿದೆ. ಇದು ವೇಳಾಪಟ್ಟಿಯ ಬಿಡುಗಡೆಯನ್ನು ಮತ್ತಷ್ಟು ವಿಳಂಬಗೊಳಿಸುತ್ತಿದೆ.

ಪಿಸಿಬಿ ಏನು ಬೇಕಾದರೂ ಹೇಳಬಹುದು. ಆದರೆ ವೇಳಾಪಟ್ಟಿ ಘೋಷಣೆ ವಿಳಂಬಕ್ಕೆ ಪಿಸಿಬಿ ಕಾರಣ. ಮೊದಲಿಗೆ, ಪಾಕಿಸ್ತಾನವು ಅಹಮದಾಬಾದ್​ನಲ್ಲಿ ಆಡಲು ಸಿದ್ಧರಿರಲಿಲ್ಲ. ಈಗ ಅವರು ಚೆನ್ನೈನಲ್ಲಿ ಆಡಲು ಸಿದ್ಧರಿಲ್ಲ. ಅವರಿಗೆ ಹೇಗಾದರೂ ಅಸುರಕ್ಷಿತ ಭಾವ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಕ್ರೀಡಾ ವೆಬ್​ಸೈಟ್​ ಒಂದಕ್ಕೆ ತಿಳಿಸಿದ್ದಾರೆ.

Exit mobile version