ಮುಂಬಯಿ: ನ್ಯೂಜಿಲ್ಯಾಂಡ್ ವಿರುದ್ಧ ಶನಿವಾರ ನಡೆದ ದ್ವಿತೀಯ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ರೋಹಿತ್ ಶರ್ಮಾ(Rohit vs Kohli) ತಮ್ಮ ಆಯ್ಕೆಯನ್ನು ಪ್ರಕಟಿಸಲು ಕೆಲ ಕಾಲ ಯೋಚಿಸಿ ನಗೆಪಾಟಲೀಗೀಡಾಗಿದ್ದರು. ಇದೀಗ ವಿರಾಟ್ ಕೊಹ್ಲಿ 5 ವರ್ಷಗಳ ಹಿಂದೆ ರೋಹಿತ್ ಮರೆವಿನ ಬಗ್ಗೆ ಹೇಳಿದ ಹೇಳಿಕೆಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿರಾಟ್ ಕೊಹ್ಲಿ 5 ವರ್ಷಗಳ ಹಿಂದೆ ಕ್ರೀಡಾ ನಿರೂಪಕ ಗೌರವ್ ಕಪೂರ್ ಅವರೊಂದಿಗಿನ ಸಂದರ್ಶನದಲ್ಲಿ ರೋಹಿತ್ ಶರ್ಮಾ ಅವರಿಗೆ ವಿಪರೀತ ಮರೆವಿನ ಸಮಸ್ಯೆ ಇದೆ ಎಂದು ಹೇಳಿದ್ದರು. ಈ ವಿಡಿಯೊ ಇದೀಗ ವೈರಲ್ ಆಗಿದೆ.
ಕೊಹ್ಲಿ ಹೇಳಿದ್ದೇನು?
“ರೋಹಿತ್ ಶರ್ಮಾ ಮರೆಯುವುದು ಒಂದಲ್ಲ ಎರಡಲ್ಲ. ಅನೇಕ ವಿಷಯಗಳನ್ನು ಮರೆಯತ್ತಾರೆ. ಇಂತಹ ಮರೆಗುಳಿಯನ್ನು ನಾನೆಂದು ನೋಡಿಲ್ಲ. ಐಪ್ಯಾಡ್, ವ್ಯಾಲೆಟ್, ಫೋನ್ ಮಾತ್ರವಲ್ಲ. ಎಲ್ಲ ದೈನಂದಿನ ಬಳಕೆಯ ವಸ್ತುಗಳನ್ನೇ ಮರೆಯುತ್ತಾರೆ. ತಾವು ಮರೆದ ವಸ್ತು ಸಿಗದೇ ಹೊದರೆ ಈ ಬಗ್ಗೆ ಅವರು ಯಾವುದೇ ಚಿಂತೆ ಮಾಡುವುದಿಲ್ಲ ಹೊಸತು ಕೊಂಡರೆ ಆಯಿತು ಎಂದು ಬರುತ್ತಾರೆ. ಆದರೆ ಅವರಿಗೆ ತಾನು ಏನನ್ನು ಮರೆತು ಬಂದಿದ್ದೇನೆ ಎಂಬುದೇ ತಿಳಿದಿರುವುದಿಲ್ಲ” ಎಂದು ಕೊಹ್ಲಿ ಹೇಳಿದ್ದರು.
“ಎಷ್ಟೋ ಬಾರಿ ಬಸ್ ಹೊರಟು ಅರ್ಧ ದಾರಿಯಲ್ಲಿ ಪ್ರಯಾಣಿಸುವಾಗ ಓಹ್, ನಾನು ನನ್ನ ಐಪ್ಯಾಡ್ ಅನ್ನು ವಿಮಾನದಲ್ಲಿ ಬಿಟ್ಟಿದ್ದೇನೆ ಎಂದು ನೆನಪಿಸಿಕೊಳ್ಳುತ್ತಾರೆ. ಪಾಸ್‌ಪೋರ್ಟ್ ಕೂಡ ಕೆಲವು ಬಾರಿ ಹೊಟೇಲ್ನಲ್ಲಿಯೇ ಬಿಟ್ಟು ಹೋಗಿದ್ದಾರೆ. ಅದನ್ನು ಹಿಂಪಡೆಯುವುದು ನಿಜವಾಗಿಯೂ ಕಷ್ಟಕರವಾಗಿತ್ತು. ಲಾಜಿಸ್ಟಿಕಲ್ ಮ್ಯಾನೇಜರ್ ಯಾವಾಗಲೂ ರೋಹಿತ್ ಶರ್ಮಾ ಅವರ ಬಳಿ ಎಲ್ಲ ವಸ್ತುಗಳು ಇದೆಯೇ ಎಂದು ಕೇಳುತ್ತಾರೆ. ಬಳಿಕ ರೋಹಿತ್ ಹೌದು ಎಂದು ಕೇಳಿದರೆ ಮಾತ್ರ ಬಸ್ ಹೊರಡುತ್ತದೆ” ಎಂದು ಕೊಹ್ಲಿ ಐದು ವರ್ಷಗಳ ಹಿಂದೆ ಹೇಳಿದ್ದರು.
ಇದೀಗ ಕಿವೀಸ್ ವಿರುದ್ಧದ ದ್ವಿತೀಯ ಪಂದ್ಯದ ಟಾಸ್ ವೇಳೆ ತಮ್ಮ ನಿರ್ಧಾರವನ್ನು ಪ್ರಕಟಿಸಲು ರೋಹಿತ್ ಶರ್ಮಾ ಚಡಪಡಿಸಿದ ಬಳಿಕ ಕೊಹ್ಲಿಯ ಈ ಹೇಳಿಕೆ ಮತ್ತೆ ಮುನ್ನೆಲೆಗೆ ಬಂದಿದೆ. ಈ ವಿಡಿಯೊ ಕಂಡ ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಡಲಾರಂಭಿಸಿದ್ದಾರೆ.
ಇದನ್ನೂ ಓದಿ | IND VS NZ: ಮೈದಾನಕ್ಕೆ ನುಗ್ಗಿದ ಅಭಿಮಾನಿ; ಗಾಬರಿಯಾದ ರೋಹಿತ್ ಶರ್ಮಾ; ವಿಡಿಯೊ ವೈರಲ್