Site icon Vistara News

ಕಳಚಿದ ಕೈ ಮೂಳೆಯನ್ನು ಮೈದಾನದಲ್ಲೇ ಮರುಜೋಡಿಸಿದ ರೋಹಿತ್‌ ಶರ್ಮ!

ರೋಹಿತ್‌ ಶರ್ಮ

ಲಂಡನ್‌: ಟೀಮ್‌ ಇಂಡಿಯಾ ನಾಯಕ ರೋಹಿತ್‌ ಶರ್ಮ ಫೀಲ್ಡಿಂಗ್‌ ವೇಳೆ ಕಳಚಿದ ತಮ್ಮ ಕೈಮೂಳೆಯನ್ನು ತಾವೇ ಬಳಿಕ ಜೋಡಿಸಿಕೊಂಡ ಪ್ರಸಂಗ ಗುರುವಾರ ನಡೆದ ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ಏಕದಿನ ಪಂದ್ಯದ ವೇಳೆ ನಡೆದಿದೆ.

ಫೀಲ್ಡಿಂಗ್‌ ಮಾಡುವ ವೇಳೆ ರೋಹಿತ್‌ ಅವರ ಮೊಣಕೈ ಮೂಳೆ ಕಳಚಿಕೊಂಡಿದ್ದು, ಗಾಯದ ಸಮಸ್ಯೆಗೆ ಒಳಗಾಗುವ ಆತಂಕಕ್ಕೆ ಒಳಗಾಗಿದ್ದಾರೆ. ಅದಕ್ಕೆ ಆಸ್ಪದ ನೀಡದ ರೋಹಿತ್‌ ಕಳಚಿದ ಮೂಳೆಯನ್ನು ತಾವೇ ಜೋಡಿಸಿಕೊಂಡಿದ್ದಾರೆ. ಬಳಿಕ ಪಕ್ಕದಲ್ಲೇ ಇದ್ದ ಆಲ್‌ರೌಂಡರ್‌ ರವೀಂದ್ರ ಜಡೇಜಾ ಅವರನ್ನು ನೋಡಿ ನಗೆ ಬೀರಿದ್ದಾರೆ.

ರೋಹಿತ್‌ ಅವರ ಚಾಕಚಕ್ಯತೆ ನೇರ ಪ್ರಸಾರದ ವಿಡಿಯೊಗಳಲ್ಲಿ ದಾಖಲಾಗಿದೆ. ಅಲ್ಲದೆ, ಕ್ರಿಕೆಟ್‌ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ನಾನಾ ಬಗೆಯ ಪ್ರತಿಕ್ರಿಯೆಗಳನ್ನು ಕೊಟ್ಟಿದ್ದಾರೆ. “ರೋಹಿತ್‌ ಮೈದಾನದಲ್ಲೇ ಫಿಸಿಯೊಥೆರಪಿʼ ಮಾಡಿಕೊಳ್ಳುತ್ತಿದ್ದಾರೆ ಎಂದು ಬರೆದುಕೊಂಡರೆ,

ಕ್ರೀಡಾಪುಟುಗಳಿಗೆ ಮೂಳೆಗಳು ಕಳಚಿಕೊಳ್ಳುವುದು ಸಾಮಾನ್ಯ. ಸಣ್ಣ ಪ್ರಮಾಣದ ಮೂಳೆ ಕಳಚಿಕೊಳ್ಳುವಿಕೆಯನ್ನು ತಕ್ಷಣದಲ್ಲೇ ಸರಿಪಡಿಕೊಳ್ಳುವ ತರಬೇತಿಯನ್ನು ಕ್ರೀಡಾಪಟುಗಳಿಗೆ ನೀಡಲಾಗಿರುತ್ತದೆ. ಆದರೆ, ಗಂಭೀರ ಸ್ವರೂಪದ್ದು ಆದರೆ ಸರ್ಜರಿಯ ಅಗತ್ಯ ಬೀಳುತ್ತದೆ. ಅಂತೆಯೇ ರೋಹಿತ್‌ ಶರ್ಮ ಅವರಿಗೆ ಸಣ್ಣ ಪ್ರಮಾಣದ ಸಮಸ್ಯೆ ಆಗಿದ್ದ ಕಾರಣ ಕಳಚಿದ ಕೈಮೂಳೆಯನ್ನು ತಾವೇ ಜೋಡಿಸಿಕೊಂಡಿದ್ದಾರೆ.

ಜಿಮ್ನಾಸ್ಟಿಕ್‌, ಬಾಸ್ಕೆಟ್‌ ಬಾಲ್‌, ರಗ್ಬಿ, ಫುಟ್ಬಾಲ್‌ನಂಥ ಕ್ರೀಡೆಗಳಲ್ಲಿ ಮೂಳೆ ಕಳಚಿಕೊಳ್ಳುವ ಸಾಧ್ಯತೆಗಳು ಹೆಚ್ಚಿರುತ್ತವೆ. ಇಂಥ ಸಂದರ್ಭದಲ್ಲಿ ಆಟಗಾರರೇ ತಾವೇ ರಿಪೇರಿ ಮಾಡಿಕೊಳ್ಳುತ್ತಾರೆ. ಕೆಲವೊಂದು ಬಾರಿ ತಂಡದ ಫಿಸಿಯೊಗಳು ತಕ್ಷಣದ ಪರಿಹಾರ ನೀಡುತ್ತಾರೆ.

ಇದನ್ನೂ ಓದಿ: INDvsENG ODI : ಅಫ್ರಿದಿ ದಾಖಲೆಯನ್ನೂ ಪುಡಿಗಟ್ಟಿದ ರೋಹಿತ್‌ ಶರ್ಮ

Exit mobile version