ಮುಂಬಯಿ: ಬಾಲಿವುಡ್ ನಟಿ ಊರ್ವಶಿ ರೌಟೇಲಾಗೆ (Urvashi Rautela) ರಿಷಭ್ ಪಂತ್ ಹೆಸರೆತ್ತುತ್ತಾ ಜನರ ಗಮನ ಸೆಳೆಯುವುದು ಅಭ್ಯಾಸವಾಗಿಬಿಟ್ಟಿದೆ. ಅಂತೆಯೇ ಇದೀಗ ತಮ್ಮ ಹಾಗೂ ರಿಷಭ್ ಪಂತ್ ನಡುವಿನ ಟಾಕ್ ವಾರ್‌ಗೆ ಹೊಸ ಟ್ವಿಸ್ಟ್ ಕೊಟ್ಟಿದ್ದು, ತಾವು ಆರ್‌ಪಿ ಎಂದಿರುವುದು ರಿಷಭ್ ಪಂತ್ ಕುರಿತಾಗಿ ಅಲ್ಲ, ಸಹ ನಟನ ಬಗ್ಗೆ ಎಂಬುದಾಗಿ ನುಡಿದಿದ್ದಾರೆ.
ಆರ್‌ಪಿ ಎಂಬುವರು ತಮಗಾಗಿ ಹೋಟೆಲ್ ರೂಮ್‌ನಲ್ಲಿ ಗಂಟೆಗಟ್ಟಲೆ ಕಾಯುತ್ತಿದ್ದರು. ನಾನು ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದರೂ ನಿರಂತರವಾಗಿ ಕರೆ ಮಾಡುತ್ತಿದ್ದರು. ವಾಪಸ್ ಬರುವಾಗ ೧೦ ಮಿಸ್ಡ್ ಕಾಲ್‌ಗಳು ಇರುತ್ತಿದ್ದವು ಎಂದು ಹೇಳಿಕೆ ಕೊಟ್ಟಿದ್ದು ವಿವಾದಕ್ಕೆ ಕಾರಣವಾಗಿತ್ತು. ತಕ್ಷಣ ಸಾಮಾಜಿಕ ಜಾಲತಾಣಗಳ ಮೂಲಕ ಪ್ರತಿಕ್ರಿಯೆ ಕೊಟ್ಟಿದ್ದ ರಿಷಭ್ ಪಂತ್, ಪ್ರಚಾರಕ್ಕೆ ನನ್ನ ಹೆಸರನ್ನು ಬಳಸಬೇಡ ಎಂಬ ಎಚ್ಚರಿಕೆ ಕೊಟ್ಟಿದ್ದರು. ಬಳಿಕ ಅದನ್ನು ಡಿಲೀಟ್ ಕೂಡ ಮಾಡಿದ್ದರು. ಇದನ್ನೇ ದೊಡ್ಡ ಸುದ್ದಿಯನ್ನಾಗಿ ಮಾಡಿದ ಊರ್ವಶಿ ಪದೇ ಪದೆ ಅದೇ ವಿಷಯವನ್ನು ಕೆದಕಿ, ರಿಷಭ್ ಪಂತ್ ಟ್ರೋಲ್‌ಗೆ ಗುರಿಯಾಗುವಂತೆ ಮಾಡಿದ್ದರು.
ಇದೀಗ ವರಸೆ ಬದಲಿರುವ ಊರ್ವಶಿ ರೌಟೇಲಾ “ನಾನು ಆರ್‌ಪಿ ಎಂದು ಹೇಳಿರುವುದು ರಿಷಭ್ ಪಂತ್ ಕುರಿತಾಗಿ ಅಲ್ಲ. ಆರ್‌ಪಿ ಎಂದರೆ ನನ್ನ ಸಹ ನಟ ರಾಮ್ ಪೋತನೇನಿ,” ಎಂಬುದಾಗಿ ನುಡಿದಿದ್ದಾರೆ.
ಸುದ್ದಿಗೋಷ್ಠಿಯಲ್ಲಿದ್ದ ಕೆಲವರು ಹಾಗಾದರೆ ಕ್ರಿಕೆಟಿಗರ ಹೆಸರನ್ನು ಯಾಕೆ ಎತ್ತುತ್ತೀರಿ ಎಂಬುದಾಗಿ ಪ್ರಶ್ನಿಸಿದ್ದಾರೆ. ಅದಕ್ಕೆ , ನಮ್ಮ ದೇಶದಲ್ಲಿ ಕ್ರಿಕೆಟಿಗರಿಗೆ ಹೆಚ್ಚು ಜನಪ್ರಿಯತೆ ದೊರೆಯುತ್ತದೆ. ನಟರಿಗೆ ಅಷ್ಟೊಂದು ಪ್ರಚಾರ ಸಿಗುವುದಿಲ್ಲ. ಕ್ರಿಕೆಟಿಗರಂತೆ ನಟರೂ ದೇಶಕ್ಕಾಗಿ ಕೆಲಸ ಮಾಡುತ್ತಾರೆ. ಹೀಗಾಗಿ ನಮಗೂ ಪ್ರಚಾರ ಸಿಗಲಿ,” ಎಂಬುದಾಗಿ ಹೇಳಿದ್ದಾರೆ.
ಇದನ್ನೂ ಓದಿ | Urvashi Rautela | ಹಿಜಾಬ್ ವಿರುದ್ಧ ಇರಾನ್ ಮಹಿಳೆಯರ ಪ್ರತಿಭಟನೆ: ನಟಿ ಊರ್ವಶಿ ರೌಟೇಲಾ ಕೂದಲಿಗೆ ಬಿತ್ತು ಕತ್ತರಿ!