Site icon Vistara News

RR vs DC: ಸೋತವರ ಮತ್ತು ಗೆದ್ದವರ ನಡುವೆ ಕಾದಾಟ

IPL 2024

ಜೈಪುರ: ಲಕ್ನೋ ವಿರುದ್ಧದ ಮೊದಲ ಪಂದ್ಯದಲ್ಲಿಯೇ ಭರ್ಜರಿ ಗೆಲುವು ಸಾಧಿಸಿದ ರಾಜಸ್ಥಾನ್​ ರಾಯಲ್ಸ್(RR vs DC)​ ಮತ್ತು ಪಂಜಾಬ್​ ವಿರುದ್ಧ ಸೋಲಿಗೆ ತುತ್ತಾದ ಡೆಲ್ಲಿ ಕ್ಯಾಪಿಲ್ಸ್​ ಗುರುವಾರದ ಐಪಿಎಲ್​(IPL 2024) ಪಂದ್ಯದಲ್ಲಿ ಸೆಣಸಾಟ ನಡೆಸಲಿವೆ. ರಿಷಭ್​ ಪಂತ್​ ಸಾರಥ್ಯದ ಡೆಲ್ಲಿ ಗೆಲುವಿನ ಹಳಿ ಏರುವ ವಿಶ್ವಾಸದಲ್ಲಿದ್ದರೆ, ರಾಜಸ್ಥಾನ ಸತತ 2ನೇ ಗೆಲುವಿನ ಯೋಜನೆ ಹಾಕಿಕೊಂಡಿದೆ. ಹೀಗಾಗಿ ಉಭಯ ತಂಡಗಳ ಈ ಹಣಾಹಣಿ ಹೈವೋಲ್ಟೇಜ್​ ಎಂದು ನಿರೀಕ್ಷೆ ಮಾಡಬಹುದು.

ಡೆಲ್ಲಿಗೆ ಬೌಲಿಂಗ್​ನದ್ದೇ ಚಿಂತೆ​


ಡೆಲ್ಲಿ ತಂಡದಲ್ಲಿರುವ ದೊಡ್ಡ ಸಮಸ್ಯೆಯೆಂದರೆ ಬೌಲಿಂಗ್​. ಅನುಭವಿ ವೇಗಿಗಳು ಈ ತಂಡದಲಿಲ್ಲ. ಇಶಾಂತ್​ ಶರ್ಮ ಅವರು ಮೊದಲ ಪಂದ್ಯದಲ್ಲೇ ಪಾದದ ಗಾಯದಿಂದಾಗಿ ಅರ್ಧಕ್ಕೆ ಪಂದ್ಯ ನಿಲ್ಲಿಸಿ ಹೊರಬಿದ್ದಿದ್ದರು. ರಾಜಸ್ಥಾನ್​ ವಿರುದ್ಧದ ಪಂದ್ಯದಲ್ಲಿ ಅವರು ಆಡುವ ಕುರಿತು ಇನ್ನೂ ಖಚಿತತೆ ಇಲ್ಲ. ಜತೆಗೆ ಅನ್ರಿಚ್​ ನೋರ್ಜೆ ಕೂಟ ಫಿಟ್​ ಆಗಿಲ್ಲ. ಖಲೀಲ್​ ಅಹ್ಮದ್​ ತಂಡದಲ್ಲಿದ್ದರೂ ಅವರು ದುಬಾರಿಯಾಗುತ್ತಿದ್ದಾರೆ. ಇದಕ್ಕೆ ಕಳೆದ ಪಂದ್ಯವೇ ಉತ್ತಮ ನಿದರ್ಶನ. ಸ್ಪಿನ್​ ವಿಭಾಗದಲ್ಲಿ ಅಕ್ಷರ್​ ಪಟೇಲ್​ ಮತ್ತು ಕುಲ್​ದೀಪ್​ ಯಾದವ್​ ಇದ್ದರೂ ಕೂಡ ಇವರಿಂದ ನಿರೀಕ್ಷಿತ ಪ್ರದರ್ಶನ ಬಂದಿಲ್ಲ.

ಇದನ್ನೂ ಓದಿ IPL 2024: ಐಪಿಎಲ್​ನಲ್ಲಿ ಮತ್ತೊಂದು ಹೊಸ ಪ್ರಯೋಗ ನಡೆಸಲು ಮುಂದಾದ ಬಿಸಿಸಿಐ

ಬ್ಯಾಟಿಂಗ್​ ವಿಭಾಗದಲ್ಲಿ ಡೆಲ್ಲಿ ಓಕೆ. ಆಸ್ಟ್ರೇಲಿಯಾದ ಡೇವಿಡ್​ ವಾರ್ನರ್​ ಮತ್ತು ಮಿಚೆಲ್​ ಮಾರ್ಷ್​ ಉತ್ತಮ ಆರಂಭ ನೀಡಿದರೆ ಮಧ್ಯಮ ಕ್ರಮಾಂಕದಲ್ಲಿ ವಿಂಡೀಸ್​ನ ಶೈ ಹೋಪ್‌ ಮತ್ತು ಇಂಪ್ಯಾಕ್ಟ್​ ಆಟಗಾರನಾಗಿ ಕಣಕ್ಕಿಳಿಯುವ ಅಭಿಷೇಕ್​ ಪೋರೆಲ್​ ಬ್ಯಾಟಿಂಗ್​ ಬಲವಾಗಿದ್ದಾರೆ. ರಿಷಭ್​ ಪಂತ್(Rishabh Pant)​ ಕಳೆದ ಪಂದ್ಯದಲ್ಲಿ ವಿಫಲರಾದರೂ ಕೂಡ ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರುವ ಆತ್ಮವಿಶ್ವಾದಲ್ಲಿದ್ದಾರೆ. ಬುಧವಾರ ನಡೆದ ನೆಟ್​ ಪ್ರ್ಯಾಕ್ಟೀಸ್​ನಲ್ಲಿ ಹಲವು ಗಂಟೆಗಳ ಕಾಲ ಬ್ಯಾಟಿಂಗ್​ ಕೂಡ ನಡೆಸಿದ್ದಾರೆ. ಈ ವಿಡಿಯೊ ಕೂಡ ವೈರಲ್​ ಆಗಿದೆ.​


ರಾಜಸ್ಥಾನ್​ ತಂಡ ಬಲಿಷ್ಠವಾಗಿದ್ದರೂ ಕೂಡ ಕಳೆದ ಪಂದ್ಯದಲ್ಲಿ ಆಡಿದ್ದು ನಾಯಕ ಸಂಜು ಸ್ಯಾಮ್ಸನ್(sanju samson)​ ಮತ್ತು ರಿಯಾನ್​ ಪರಾಗ್​ ಮಾತ್ರ. ಬೌಲಿಂಗ್​ನಲ್ಲಿ ಸಂದೀಪ್​ ಶರ್ಮ ಉತ್ತಮ ಪ್ರದರ್ಶನ ತೋರಿದ್ದರು. ಯಶಸ್ವಿ ಜೈಸ್ವಾಲ್​, ಜಾಸ್​ ಬಟ್ಲರ್​, ಶಿಮ್ರಾನ್​ ಹೆಟ್​ಮೇರ್​ ವಿಫಲರಾಗಿದ್ದರು. ಹೀಗಾಗಿ ಈ ಪಂದ್ಯದಲ್ಲಿ ಇವರೆಲ್ಲ ಸಿಡಿಯುವ ಅನಿವಾರ್ಯತೆ ಇದೆ.

ಮುಖಾಮುಖಿ


ರಾಜಸ್ಥಾನ್​ ಮತ್ತು ಡೆಲ್ಲಿ ತಂಡಗಳು ಇದುವರೆಗೆ 27 ಪಂದ್ಯಗಳಲ್ಲಿ ಸೆಣಸಾಟ ನಡೆಸಿದೆ. ರಾಜಸ್ಥಾನ್​ 14 ಪಂದ್ಯ ಗೆದ್ದ ಗೆದ್ದರೆ, ಡೆಲ್ಲಿ 13 ಪಂದ್ಯ ಗೆದ್ದಿದೆ. ಕಳೆದ ಬಾರಿಯ ಮುಖಾಮುಖಿಯಲ್ಲಿ ರಾಜಸ್ಥಾನ್​ 57 ರನ್​ಗಳ ಗೆಲುವು ಸಾಧಿಸಿತ್ತು. ಈ ಸೋಲಿಗೆ ಈ ಬಾರಿ ಡೆಲ್ಲಿ ಸೇಡು ತೀರಿಸಿಕೊಳ್ಳಬಹುದೇ ಎಂದು ಕಾದು ನೋಡೆಬೇಕಿದೆ.

ಸಂಭಾವ್ಯ ತಂಡಗಳು


ಡೆಲ್ಲಿ ಕ್ಯಾಪಿಟಲ್ಸ್​:
ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಶಾಯ್ ಹೋಪ್, ರಿಷಭ್ ಪಂತ್ (ನಾಯಕ), ರಿಕಿ ಭುಯಿ, ಟ್ರಿಸ್ಟಾನ್ ಸ್ಟಬ್ಸ್, ಅಕ್ಷರ್ ಪಟೇಲ್, ಸುಮಿತ್ ಕುಮಾರ್, ಕುಲ್​ದೀಪ್ ಯಾದವ್, ಖಲೀಲ್ ಅಹ್ಮದ್, ರಾಸಿಖ್ ದಾರ್ ಸಲಾಂ.

ರಾಜಸ್ಥಾನ್​ ರಾಯಲ್ಸ್​: ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ (ನಾಯಕ), ರಿಯಾನ್ ಪರಾಗ್, ಶಿಮ್ರಾನ್ ಹೆಟ್ಮೆಯರ್, ಧ್ರುವ್ ಜುರೆಲ್, ರವಿಚಂದ್ರನ್ ಅಶ್ವಿನ್, ಸಂದೀಪ್ ಶರ್ಮಾ, ಅವೇಶ್ ಖಾನ್, ಟ್ರೆಂಟ್ ಬೌಲ್ಟ್, ಯುಜ್ವೇಂದ್ರ ಚಹಾಲ್

Exit mobile version