Site icon Vistara News

RR vs GT: ರಾಜಸ್ಥಾನ್​ ಬೇಟೆಗೆ ಸಿದ್ಧವಾದ ಗುಜರಾತ್​ ಟೈಟಾನ್ಸ್​

RR vs GT

ಜೈಪುರ: ಆಡಿದ 4 ಪಂದ್ಯಗಳಲ್ಲಿಯೂ ಗೆಲುವು ಸಾಧಿಸಿ ಕೂಡ ಅಜೇಯ ತಂಡ ಎನಿಸಿಕೊಂಡಿರುವ ರಾಜಸ್ಥಾನ್​ ರಾಯಲ್ಸ್​(RR vs GT) ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿ ಪಂದ್ಯವನ್ನಾಡಲು ಸಜ್ಜಾಗಿದೆ. ಬುಧವಾರ ನಡೆಯುವ ಐಪಿಎಲ್​ ಪಂದ್ಯದಲ್ಲಿ ಗುಜರಾತ್​ ಟೈಟಾನ್ಸ್​(Gujarat Titans) ತಂಡದ ಸವಾಲು ಎದುರಿಸಲಿದೆ. ಈ ಪಂದ್ಯಕ್ಕೆ ಸವಾಯಿ ಮಾನ್ ಸಿಂಗ್ ಸ್ಟೇಡಿಯಂ ಅಣಿಯಾಗಿದೆ.

ಬಟ್ಲರ್​ ಭರ್ಜರಿ ಬ್ಯಾಟಿಂಗ್​ ಫಾರ್ಮ್​


ಕಳೆದೊಂದು ವರ್ಷದಿಂದ ಬ್ಯಾಟಿಂಗ್​ ಬರಗಾಲ ಕಂಡಿದ್ದ ಜಾಸ್​ ಬಟ್ಲರ್​ ಅವರು ಕಳೆದ ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ವಿಸ್ಫೋಟಕ ಬ್ಯಾಟಿಂಗ್​ ನಡೆಸಿ ತಮ್ಮ ಹಳೆಯ ಫಾರ್ಮ್​ಗೆ ಮರಳಿದ್ದು ರಾಜಸ್ಥಾನ್​ ತಂಡಕ್ಕೆ ಆನೆ ಬಲ ಬಂದಂತಾಗಿದೆ. ಜೈಸ್ವಾಲ್​ ಕೂಡ ಫಾರ್ಮ್ ಕಂಡುಕೊಂಡರೆ ತಂಡದ ಎಲ್ಲ ಚಿಂತೆ ದೂರವಾಗಲಿದೆ. ಬೌಲಿಂಗ್​ ವಿಭಾಗದಲ್ಲಿ ಯಾವುದೇ ಕೊರತೆ ಇಲ್ಲ. ಚಹಲ್​, ಅಶ್ವಿನ್​, ಬರ್ಗರ್​, ಅವೇಶ್​ ಖಾನ್​ ಮತ್ತು ಟ್ರೆಂಟ್​ ಬೌಲ್ಟ್​ ತಮ್ಮ ಆಯ್ಕೆಗೆ ತಕ್ಕ ಪ್ರದರ್ಶನ ನೀಡುತ್ತಿದ್ದಾರೆ. ನಾಯಕ ಸಂಜು ಕೂಡ ಉತ್ತಮ ಫಾಮ್​ನಲ್ಲಿದ್ದಾರೆ. ಹೀಗಾಗಿ ತಂಡ ಎಲ್ಲ ವಿಭಾಗದಲ್ಲಿಯೂ ಬಲಿಷ್ಠವಾಗಿದೆ.

ಗುಜರಾತ್​​ ತಂಡ ತವರಿನ ಪಂದ್ಯ ಬಿಟ್ಟು ಹೊರಗಡೆ ಆಡಿದ ಎಲ್ಲ ಪಂದ್ಯಗಳಲ್ಲಿಯೂ ಸೋಲು ಕಂಡಿದೆ. ಹೀಗಾಗಿ ಈ ಪಂದ್ಯದಲ್ಲಿಯೂ ತಂಡದ ಮೇಲೆ ಹೆಚ್ಚಿನ ನಿರೀಕ್ಷೆ ಮಾಡುವಂತಿಲ್ಲ. ಬೌಲಿಂಗ್​ ಮತ್ತು ಬ್ಯಾಟಿಂಗ್​ ಸಾಧಾರಣ ಮಟ್ಟದಲ್ಲಿದೆ. ಅನುಭವಿ ಕೇನ್​ ವಿಲಿಯಮ್ಸನ್​ ಆಡಿದ 2 ಪಂದ್ಯಗಳಲ್ಲಿಯೂ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಈ ಪಂದ್ಯದಲ್ಲಿ ಅವರನ್ನು ಕೈ ಬಿಟ್ಟು ಆಸ್ಟ್ರೇಲಿಯಾದ ಮ್ಯಾಥ್ಯೂ ವೇಡ್​ ಅವಕಾಶ ಪಡೆಯಬಹುದು. ಬೌಲಿಂಗ್​ ಕೂಡ ಚೆತರಿಕೆ ಕಾಣದ ಹೊರತು ಗೆಲುವು ದೂರದ ಬೆಟ್ಟವಾಗಿ ಉಳಿಯಲಿದೆ.

ಮುಖಾಮುಖಿ


ಇತ್ತಂಡಗಳ ಮುಖಾಮುಖಿ ನೋಡುವುದಾದರೆ ಈವರೆಗೆ 5 ಪಂದ್ಯಗಳನ್ನಾಡಿವೆ. ಈ ಪೈಕಿ ಗುಜರಾತ್​ ಗರಿಷ್ಠ 4 ಪಂದ್ಯ ಗೆದ್ದು ಬೀಗಿದೆ. ರಾಜಸ್ಥಾನ್​ ಕೇವಲ ಒಂದು ಪಂದ್ಯ ಮಾತ್ರ ಗೆದ್ದಿದೆ. ಈ ಲೆಕ್ಕಾಚಾರದಲ್ಲಿ ಗುಜರಾತ್​ ಮುಂದಿದ್ದರೂ ಕೂಡ ಅಂದಿನ ತಂಡಕ್ಕೂ ಈಗ ಇರುವ ತಂಡಕ್ಕೂ ಭಾರೀ ವ್ಯತ್ಯಾಸವಿದೆ. ಈಗ ರಾಜಸ್ಥಾನ್​ ಬಲಿಷ್ಠವಾಗಿದೆ.

ಇದನ್ನೂ ಓದಿ IPL 2024: ರಿಂಕು ಸಿಂಗ್​​ ಸಿಕ್ಸರ್‌ ಸುರಿಮಳೆಗೆ 1ನೇ ವರ್ಷದ ಸಂಭ್ರಮ; ಹೇಗಿತ್ತು ಅಂದಿನ ಸಿಕ್ಸರ್​?

ಉಭಯ ತಂಡಗಳು


ರಾಜಸ್ಥಾನ್​ ರಾಯಲ್ಸ್​: ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ (ನಾಯಕ), ರಿಯಾನ್ ಪರಾಗ್, ಧ್ರುವ್ ಜುರೆಲ್, ಶಿಮ್ರಾನ್ ಹೆಟ್ಮೆಯರ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಅವೇಶ್ ಖಾನ್, ನಾಂದ್ರೆ ಬರ್ಗರ್, ಯುಜ್ವೇಂದ್ರ ಚಹಾಲ್.

ಗುಜರಾತ್​ ಟೈಟಾನ್ಸ್​: ಶುಭಮನ್ ಗಿಲ್ (ನಾಯಕ), ಶರತ್ ಬಿಆರ್ (ವಿಕೆಟ್​ ಕೀಪರ್​), ಸಾಯಿ ಸುದರ್ಶನ್, ವಿಜಯ್ ಶಂಕರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ನೂರ್ ಅಹ್ಮದ್, ಉಮೇಶ್ ಯಾದವ್, ಸ್ಪೆನ್ಸರ್ ಜಾನ್ಸನ್, ದರ್ಶನ್ ನಲ್ಕಂಡೆ, ಮೋಹಿತ್ ಶರ್ಮಾ.

Exit mobile version