Site icon Vistara News

RR vs MI: ಅಗ್ರಸ್ಥಾನಿ ರಾಜಸ್ಥಾನ್​ಗೆ ಸವಾಲೊಡ್ಡೀತೇ ಮುಂಬೈ?

RR vs MI

ಜೈಪುರ: ಪ್ಲೇ ಆಫ್​ ಸನಿಹಕ್ಕೆ ಬಂದು ನಿಂತಿರುವ ರಾಜಸ್ಥಾನ್​ ರಾಯಲ್ಸ್(RR vs MI)​ ಮತ್ತು ಪ್ಲೇ ಆಫ್​ ರೇಸ್​ನಲ್ಲಿ ಉಳಿಯುವ ನಿಟ್ಟಿನಲ್ಲಿ ಹೋರಾಟ ನಡೆಸುತ್ತಿರುವ ಮುಂಬೈ ಇಂಡಿಯನ್ಸ್​ ಸೋಮವಾರದ ಐಪಿಎಲ್(IPL 2024)​ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಸಂಜು ಸ್ಯಾಮ್ಸನ್​ ಗೆದ್ದರೆ 14 ಅಂಕದೊಂದಿಗೆ ಬಹುತೇಕ ಪ್ಲೇ ಆಫ್ ಪ್ರವೇಶ ಖಚಿತಗೊಳ್ಳಲಿದೆ. ಇತ್ತಂಡಗಳ ಈ ಸೆಣಸಾಟಕ್ಕೆ ಸವಾಯ್​ ಮಾನ್ ಸಿಂಗ್​ ಸ್ಟೇಡಿಯಂ ಅಣಿಯಾಗಿದೆ.

ಮುಂಬೈ ತಂಡ ಆಡಿದ 7 ಪಂದ್ಯಗಳಲ್ಲಿ ಕೇವಲ ಮೂರು ಪಂದ್ಯ ಗೆದ್ದು, 4ರಲ್ಲಿ ಸೋಲು ಕಂಡು ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಮುಂದಿನ ಹಂತಕ್ಕೇರಬೇಕಾದರೆ ಗೆಲುವು ಅತ್ಯಗತ್ಯ. ಹೀಗಾಗಿ ಈ ಪಂದ್ಯ ತೀವ್ರ ಪೈಪೋಟಿಯಿಂದ ಕೂಡಿರುವ ಸಾಧ್ಯತೆ ಇದೆ.

ಬಲಾಬಲದ ಲೆಕ್ಕಾಚಾರ ನೋಡುವಾಗ ರಾಜಸ್ಥಾನ್ ತಂಡ ಮುಂಬೈಯಿಂದ ಬಲಿಷ್ಠವಾಗಿದೆ. ಮುಂಬೈ ಇದುವರೆಗೆ ಗೆದ್ದ ಎಲ್ಲ ಪಂದ್ಯಗಳನ್ನು ಕೂಡ ಪರದಾಡಿ ಗೆದ್ದಿತ್ತು. ದುರ್ಬಲ ತಂಡ ಕೂಡ ಮುಂಬೈಗೆ ಸೋಲಿನ ಭಯ ಹುಟ್ಟಿಸಿತ್ತು. ಇದು ಮಾತ್ರವಲ್ಲದೆ ರಾಜಸ್ಥಾನ್​ಗೆ ಇದು ತವರಿನ ಪಂದ್ಯ. ಹೀಗಾಗಿ ರಾಜಸ್ಥಾನ್​ಗೆ ಗೆಲುವಿನ ಅವಕಾಶ ಹೆಚ್ಚು. ಉಭಯ ತಂಡಗಳು ಇದುವರೆಗಿನ ಐಪಿಎಲ್​ನಲ್ಲಿ ಒಟ್ಟು 29 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ಪೈಕಿ ಮುಂಬೈ 15, ರಾಜಸ್ಥಾನ್ 13 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಒಂದು ಪಂದ್ಯ ಫಲಿತಾಂಶ ಕಂಡಿಲ್ಲ.

ಪಿಚ್​ ರಿಪೋರ್ಟ್


ಜೈಪುರ ಪಿಚ್ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡಕ್ಕೂ ಉತ್ತಮವಾಗಿದೆ. ಈ ಋತುವಿನಲ್ಲಿ ಸವಾಯಿ ಮನ್ ಸಿಂಗ್ ಸ್ಟೇಡಿಯಂನಲ್ಲಿ ಆಡಿದ ಎಲ್ಲಾ 4 ಪಂದ್ಯಗಳಲ್ಲಿ ತಂಡಗಳು 180 ಕ್ಕೂ ಹೆಚ್ಚು ರನ್ ಗಳಿಸಿವೆ. ಹೀಗಾಗಿ ಈ ಪಂದ್ಯದಲ್ಲಿಯೂ ಹೈ ಸ್ಕೋರಿಂಗ್​ ನಿರೀಕ್ಷೆ ಮಾಡಬಹುದು. ರಾಯಲ್ಸ್ ಎರಡು ಪಂದ್ಯಗಳಲ್ಲಿ 185 ಮತ್ತು 193 ಸ್ಕೋರ್‌ಗಳನ್ನು ಯಶಸ್ವಿಯಾಗಿ ರಕ್ಷಿಸಿತ್ತು. ಆದರೆ ಗುಜರಾತ್ ವಿರುದ್ಧ 196 ರನ್‌ಗಳನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 183 ರನ್‌ಗಳನ್ನು ಯಶಸ್ವಿಯಾಗಿ ಬೆನ್ನಟ್ಟಿತು. ಸಂಜೆ, ಜೈಪುರದಲ್ಲಿ ತಾಪಮಾನವು ಸುಮಾರು 28 ಡಿಗ್ರಿ ಇರಲಿದ್ದು ಮಳೆಯ ಸಾಧ್ಯತೆ ಇಲ್ಲ.

ಇದನ್ನೂ ಓದಿ IPL 2024: ಬ್ಯಾಟ್​ ಮುರಿದ ರಿಂಕುಗೆ ಬೈದ ವಿರಾಟ್​ ಕೊಹ್ಲಿ; ವಿಡಿಯೊ ವೈರಲ್

ಸಂಭಾವ್ಯ ತಂಡಗಳು


ಮುಂಬೈ ಇಂಡಿಯನ್ಸ್​:
ರೋಹಿತ್ ಶರ್ಮಾ, ಇಶಾನ್ ಕಿಶನ್ (ವಿಕಿ), ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಮೊಹಮ್ಮದ್ ನಬಿ, ಜೆರಾಲ್ಡ್ ಕೋಟ್ಜಿ, ಶ್ರೇಯಸ್ ಗೋಪಾಲ್, ಜಸ್​ಪ್ರೀತ್​ ಬುಮ್ರಾ.

ರಾಜಸ್ಥಾನ್​ ರಾಯಲ್ಸ್​: ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ನಾಯಕ), ರಿಯಾನ್ ಪರಾಗ್, ಧ್ರುವ ಜುರೆಲ್, ಶಿಮ್ರಾನ್ ಹೆಟ್ಮೆಯರ್, ರೋವ್ಮನ್ ಪೊವೆಲ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಅವೇಶ್ ಖಾನ್, ಕುಲದೀಪ್ ಸೇನ್, ಯುಜ್ವೇಂದ್ರ ಚಹಾಲ್.

Exit mobile version