Site icon Vistara News

Sachin Tendulkar: ಟೀಮ್​ ಇಂಡಿಯಾಕ್ಕೆ ‘RRR’ ಆಸರೆ; ಸಚಿನ್​ ತೆಂಡೂಲ್ಕರ್​ ಹೀಗೆ ಟ್ವೀಟ್​ ಮಾಡಲು ಕಾರಣವೇನು?

Sachin Tendulkar

#image_title

ಮುಂಬಯಿ: ಆಸ್ಟ್ರೇಲಿಯಾ(IND VS AUS) ವಿರುದ್ಧ ನಾಗ್ಪುರದಲ್ಲಿ ಸಾಗುತ್ತಿರುವ ಮೊದಲ ಟೆಸ್ಟ್​ ಪಂದ್ಯದಲ್ಲಿ ಭಾರತ ತಂಡ ಉತ್ತಮ ಪ್ರದರ್ಶನ ತೋರುವ ಮೂಲಕ ಗೆಲುವಿನತ್ತ ಮುಖಮಾಡಿದೆ. ಟೀಮ್ ಇಂಡಿಯಾದ ಆಟಗಾರರ ಈ ಪ್ರದರ್ಶನ ಕಂಡ ಮಾಜಿ ಕ್ರಿಕೆಟ್​ ದಿಗ್ಗಜ ಸಚಿನ್ ತೆಂಡೂಲ್ಕರ್(Sachin Tendulkar)​ ಟ್ವೀಟ್​ ಒಂದನ್ನು ಮಾಡಿದ್ದಾರೆ. ಈ ಟ್ವೀಟ್​ ಇದೀಗ ವೈರಲ್​ ಆಗಿದೆ.

ಮೊದಲ ಇನಿಂಗ್ಸ್​ನಲ್ಲಿ ಉತ್ತಮ ಪದರ್ಶನ ತೋರಿದ ರವೀಂದ್ರ ಜಡೇಜಾ, ರೋಹಿತ್ ಶರ್ಮಾ ಮತ್ತು ರವಿಚಂದ್ರನ್ ಅಶ್ವಿನ್ ಅವರನ್ನು ಸಚಿನ್​ ಅವರು ರಾಜಮೌಳಿ ನಿರ್ದೇಶನದ ಆರ್​ಆರ್​ಆರ್ ಸಿನೆಮಾದ ಹೆಸರಿನಿಂದ ಶ್ಲಾಘಿಸಿದ್ದಾರೆ. ಸಚಿನ್​ ಅವರು ಈ ರೀತಿ ಹೆಸರಿಸಲು ಕಾರಣವೆಂದರೆ ಮೂರು ಆಟಗಾರ ಹೆಸರಿನ ಮೊದಲ ಹೆಸರು ಆರ್​ನಿಂದ ಪ್ರಾರಂಭವಾಗುತ್ತದೆ ಇದೇ ಕಾರಣಕ್ಕೆ ಸಚಿನ್​ ತ್ರಿಮೂರ್ತಿಗಳ ಪ್ರದರ್ಶನಕ್ಕೆ ಈ ಟೈಟಲ್​ ನೀಡಿದ್ದಾರೆ.

ಇದನ್ನೂ ಓದಿ IND VS AUS: ಅಕ್ಷರ್​,ಶಮಿ ಮಿಂಚಿನ ಬ್ಯಾಟಿಂಗ್​; 400 ರನ್​ಗಳಿಗೆ ಮೊದಲ ಇನಿಂಗ್ಸ್​ ಮುಗಿಸಿದ ಭಾರತ

ರವೀಂದ್ರ ಜಡೇಜಾ ಬೌಲಿಂಗ್​ ಮತ್ತು ಬ್ಯಾಟಿಂಗ್​ನಲ್ಲಿಯೂ ಉತ್ತಮ ಪ್ರದರ್ಶನ ತೋರುವ ಮೂಲಕ ತಂಡಕ್ಕೆ ಆಸರೆಯಾದರು. 5 ವಿಕೆಟ್​ ಕಬಳಿಸುವ ಜತೆಗೆ ಬ್ಯಾಟಿಂಗ್​ನಲ್ಲಿ 70 ರನ್​ ಬಾರಿಸಿದರು. ನಾಯಕ ರೋಹಿತ್​ ಶರ್ಮಾ 120 ಮತ್ತು ಅಕ್ಷರ್​ ಪಟೇಲ್​ 84 ರನ್​ ಪೇರಿಸಿ ಮಿಂಚಿದರು. ಸದ್ಯ ಇನಿಂಗ್ಸ್​ ದ್ವಿತೀಯ ಇನಿಂಗ್ಸ್​ನಲ್ಲಿ ಬ್ಯಾಟಿಂಗ್​ ನಡೆಸುತ್ತಿರುವ ಆಸ್ಟ್ರೇಲಿಯಾ 3 ವಿಕೆಟ್​ ಕಳೆದುಕೊಂಡು ಸೋಲಿನತ್ತ ಮುಖಮಾಡಿದೆ.

Exit mobile version