Site icon Vistara News

Chess Player : ಪ್ರತಿಸ್ಪರ್ಧಿಗೆ ವಿಷ ಹಾಕಿ ಕೊಲ್ಲಲು ಯತ್ನಿಸಿದ ರಷ್ಯಾದ ಚೆಸ್ ಆಟಗಾರ್ತಿ; ಇಲ್ಲಿದೆ ವಿಡಿಯೊ

chess player

ಬೆಂಗಳೂರು: ಆಟಗಳಲ್ಲಿ ಎದುರಾಳಿಗಳನ್ನು ಸೋಲಿಸಿ ಸಂಭ್ರಮಿಸಬೇಕು. ಅವರನ್ನು ದೈಹಿಕವಾಗಿ ಹಾನಿ ಮಾಡುವ ಮೂಲಕ ಅಲ್ಲ. ಆದರೆ ಕೆಲವೊಬ್ಬರು ಸಾಮರ್ಥ್ಯ ಇದ್ದ ಹೊರತಾಗಿಯೂ ಎದುರಾಳಿಗೆ ಹಾನಿ ಮಾಡಿ ಗೆಲ್ಲುವುದಕ್ಕೆ ಯತ್ನಿಸುತ್ತಾರೆ. ಅಂಥದ್ದೇ ಒಂದು ಘಟನೆ ರಷ್ಯಾದಲ್ಲಿ ನಡೆದಿದೆ. ರಷ್ಯಾದ ದಗೆಸ್ತಾನ್ ಗಣರಾಜ್ಯದ 40 ವರ್ಷದ ಚೆಸ್ ಆಟಗಾರ್ತಿ ಅಮೀನಾ ಅಬಕರೋವಾ ಪ್ರತಿಸ್ಪರ್ಧಿಗೆ ವಿಷ ಹಾಕಲು ಯತ್ನಿಸಿ ಸಿಕ್ಕಿಬಿದ್ದಿದ್ದಾರೆ. ಅಬಕರೋವಾಗೆ ರಷ್ಯಾದ ಚೆಸ್ ಫೆಡರೇಶನ್ ಅಮಾನತು ಶಿಕ್ಷೆ ವಿಧಿಸಿದೆ. ಆಗಸ್ಟ್ 2ರಂದು ದಗೆಸ್ತಾನ್ ಚೆಸ್ ಚಾಂಪಿಯನ್ಶಿಪ್ ಸಮಯದಲ್ಲಿ ತನ್ನ ಪ್ರತಿಸ್ಪರ್ಧಿ ಉಮೈಗನಾಟ್ ಉಸ್ಮಾನೋವಾಗೆ ಪಾದರಸದ ವಿಷ ಹಾಕಿದ್ದರು. ಆರೋಪಿಗೆ ಮೂರು ವರ್ಷಗಳ ಜೈಲು ಶಿಕ್ಷೆಯನ್ನು ಎದುರಿಸುತ್ತಿದ್ದಾರೆ.

ಪಂದ್ಯಕ್ಕೆ 20 ನಿಮಿಷಗಳ ಮೊದಲು ಆಟದ ಹಾಲ್​ಗೆ ಹೋಗಿದ್ದ ಅಬಕರೋವಾ. ಉಸ್ಮಾನೋವಾ ಅವರ ಬೋರ್ಡ್ ಬಳಿಗೆ ನಡೆದು, ಥರ್ಮಾಮೀಟರ್​ನಿಂದ ಮಾರಕ ಪಾದರಸವನ್ನು ಬೋರ್ಡ್ ಮತ್ತು ಉಸ್ಮಾನೋವಾ ಅವರ ಕೆಲವು ಕಾಯಿನ್​ಗಳೀಗೆ ಲೇಪಿಸುತ್ತಿರುವುದನ್ನು ಭದ್ರತಾ ಕ್ಯಾಮೆರಾಗಳಲ್ಲಿ ದಾಖಲಾಗಿದ್ದವು. ಆಟ ಪ್ರಾರಂಭವಾದ ಸ್ವಲ್ಪ ಸಮಯದ ನಂತರ ಉಸ್ಮಾನೋವಾ ಅನಾರೋಗ್ಯಕ್ಕೆ ಒಳಗಾಗಿದ್ದರು. ವಾಕರಿಕೆ ಮತ್ತು ತಲೆತಿರುಗುವಿಕೆಯ ಬಗ್ಗೆ ದೂರು ನೀಡಿದ್ದರು. ತಕ್ಷಣ ವೈದ್ಯಕೀಯ ತಂಡ ನೆರವಿಗೆ ಬಂದಿದ್ದು ವಿಷಪ್ರಾಶನವೇ ಇದಕ್ಕೆ ಕಾರಣ ಎಂದು ವೈದ್ಯರು ಹೇಳಿದ್ದರು.

ವಿಚಾರಣೆಯ ಬಳಿಕ ಒಸ್ಮಾನೋವಾ ಬಗ್ಗೆ ವೈಯಕ್ತಿಕ ಹಗೆತನದಿಂದಾಗಿ ವಿಷ ಹಾಕಿದ್ದೇನೆ ಎಂದು ಅಬಕರೋವಾ ಒಪ್ಪಿಕೊಂಡಿದ್ದಾರೆ. ತನ್ನ ಉದ್ದೇಶ ಉಸ್ಮಾನೋವಾ ಕೊಲೆ ಮಾಡುವುದು ಮಾಡುವುದು ಅಲ್ಲ ಆಕೆಯನ್ನು ಹೆದರಿಸುವುದು ಎಂದು ಅವಳು ಹೇಳಿಕೊಂಡಿದ್ದಾಳೆ.

ಬೆಚ್ಚಿ ಬೀಳಿಸಿದ ಘಟನೆ

ಘಟನೆಯು ಚೆಸ್ ಸಮುದಾಯವನ್ನು ಬೆಚ್ಚಿಬೀಳಿಸಿದೆ. ರಷ್ಯಾದ ಚೆಸ್ ಫೆಡರೇಶನ್ ಅಧ್ಯಕ್ಷ ಆಂಡ್ರೆ ಫಿಲಾಟೊವ್, ತನಿಖೆ ಬಾಕಿ ಇರುವವರೆಗೆ ಅಬಕರೋವಾ ಅವರನ್ನು ರಷ್ಯಾದ ಚೆಸ್ ಸ್ಪರ್ಧೆಗಳಿಂದ ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ ಎಂದು ದೃಢಪಡಿಸಿದ್ದಾರೆ. ಅವರು ಆಜೀವ ನಿಷೇಧಕ್ಕೆ ಒಳಗಾಗಬಹುದು.

ಇದನ್ನೂ ಓದಿ: Paris Olympics 2024 : ಕಂಚಿನ ಪದಕ ಗೆದ್ದ ಹಾಕಿ ತಂಡದ ಆಟಗಾರರಿಗೆ ಕರೆ ಮಾಡಿ ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ

ಅಬಕರೋವಾ ಅವರ ಕ್ರಮಗಳ ಬಗ್ಗೆ ದಗೆಸ್ತಾನದ ಕ್ರೀಡಾ ಸಚಿವ ಸಾಜಿದಾ ಸಾಜಿಡೋವಾ ಆಘಾತ ವ್ಯಕ್ತಪಡಿಸಿದರು. ಅದು ಹಾಜರಿದ್ದ ಎಲ್ಲರ ಜೀವಕ್ಕೆ ಅಪಾಯವನ್ನುಂಟುಮಾಡುವ ಯೋಜನೆ ಎಂದು ಹೇಳಿದ್ದಾರೆ.

ಅನಾರೋಗ್ಯದ ಹೊರತಾಗಿಯೂ, ಉಸ್ಮಾನೋವಾ ಸಂಪೂರ್ಣವಾಗಿ ಚೇತರಿಸಿಕೊಂಡು ಆಟ ಮುಂದುವರಿಸಿದ್ದಾರೆ. ಅವರು ಸ್ಪರ್ಧೆಯಲ್ಲಿ ಎರಡನೇ ಸ್ಥಾನವನ್ನು ಪಡೆದಿದ್ದಾರೆ. ನಾಲ್ಕನೇ ಸುತ್ತಿನ ನಂತರ ಅಬಕರೋವಾ ಅವರನ್ನು ಹೊರಹಾಕಲಾಗಿತ್ತು.

Exit mobile version