Site icon Vistara News

Chess Tournament : ಪ್ರಜ್ಞಾನಂದ ಸಾಧನೆಗೆ ತಾಯಿ ಪ್ರೀತಿಯೇ ಶಕ್ತಿ ಎಂದ ರಷ್ಯನ್ ಗ್ರ್ಯಾಂಡ್​ ಮಾಸ್ಟರ್​​

Praggnanandhaa’

ಬೆಂಗಳೂರು: ಚೆಸ್ ವಿಶ್ವಕಪ್​​ನಲ್ಲಿ ಗ್ರ್ಯಾಂಡ್ ಮಾಸ್ಟರ್ ಆರ್ ಪ್ರಜ್ಞಾನಂದ ಅವರ ಅದ್ಭುತ ಓಟವು ದಂತಕಥೆ ಗ್ಯಾರಿ ಕಾಸ್ಪರೋವ್ ಅವರಿಗೆ ತಮ್ಮ ಸಾಧನೆಯ ದಿನಗಳನ್ನು ನೆನಪಿಸಿದೆ. ಸೋಮವಾರ ವಿಶ್ವದ ನಂ.3 ಆಟಗಾರ ಫ್ಯಾಬಿಯಾನೊ ಕರುವಾನಾ ವಿರುದ್ಧ ಪ್ರಜ್ಞಾನಂದ ಗೆಲುವಿನಿಂದ ಪ್ರಭಾವಿತರಾದ ಮಾಜಿ ವಿಶ್ವ ಚಾಂಪಿಯನ್ ಕಾಸ್ಪರೋವ್ ಟ್ವಿಟರ್​ ಮೂಲಕ 18 ವರ್ಷದ ಆಟಗಾರನ ಸಾಹಸವನ್ನು ಕೊಂಡಾಡಿದ್ದಾರೆ. ಈ ವೇಳೆ ಅವರು ಪ್ರಜ್ಞಾನಂದ ಅವರ ತಾಯಿಯ ಪ್ರಯತ್ನಗಳನ್ನೂ ಶ್ಲಾಘಿಸಿದ್ದಾರೆ.

ಪ್ರಜ್ಞಾನಂದ ಮತ್ತು ಅವರ ತಾಯಿಗೆ ಅಭಿನಂದನೆಗಳು. ಪ್ರತಿ ಕಾರ್ಯಕ್ರಮಕ್ಕೂ ಹೆಮ್ಮೆಯ ತಾಯಿ ಅವರೊಂದಿಗೆ ಇರುತ್ತಾರೆ. ಅದುವೇ ಅವರಿಗೆವಿಶೇಷ ರೀತಿಯ ಬೆಂಬಲವಾಗಿದೆ. ಚೆನ್ನೈ ಮೂಲಕದ ಅವರು ನ್ಯೂಯಾರ್ಕ್​​ನ ಇಬ್ಬರನ್ನು ಸೋಲಿಸಿದ್ದಾರೆ. ಅವರು ಆಟದಲ್ಲಿ ತುಂಬಾ ದೃಢವಾಗಿದ್ದಾರೆ ಎಂದು ಕಾಸ್ಪರೋವ್ ಪೋಸ್ಟ್ ಮಾಡಿದ್ದಾರೆ.

ತಮ್ಮ ಕನಸಿನ ಓಟವನ್ನು ಮುಂದುವರಿಸಿದ ಪ್ರಜ್ಞಾನಂದ ಸೋಮವಾರ ನಡೆದ ಸೆಮಿಫೈನಲ್​ನಲ್ಲಿ ಕರುವಾನಾ ಅವರನ್ನು 3.5-2.5 ಅಂತರದಿಂದ ಸೋಲಿಸಿದ್ದಾರೆ. ಫೈನಲ್​ನಲ್ಲಿ ಅವರು ವಿಶ್ವದ ನಂ.1 ಮತ್ತು ಐದು ಬಾರಿಯ ವಿಶ್ವ ಚಾಂಪಿಯನ್ ನಾರ್ವೆಯ ಮ್ಯಾಗ್ನಸ್ ಕಾರ್ಲ್ಸನ್ ವಿರುದ್ಧ ಫೈನಲ್ ಪಂದ್ಯವನ್ನು ಸ್ಥಾಪಿಸಿದರು. ನಾಲ್ಕು ರ್ಯಾಪಿಡ್ ಟೈಬ್ರೇಕ್ ಗೇಮ್ ನಂತರ ಪ್ರಜ್ಞಾನಂದ ಅವರು ಕರುವಾನಾ ಅವರನ್ನು ಸೋಲಿಸಿದರು.

ಅಪ್ರತಿಮ ಪ್ರತಿಭೆ

ಭಾರತೀಯ ಗ್ರ್ಯಾಂಡ್ ಮಾಸ್ಟರ್ ಆರ್. ಪ್ರಜ್ಞಾನಂದ(R Praggnanandhaa) ಚೆಸ್ ವಿಶ್ವಕಪ್(Chess World Cup)​ನಲ್ಲಿ ಫೈನಲ್​ ಪ್ರವೇಶಿಸಿ ಇತಿಹಾಸ ನಿರ್ಮಿಸಿದ್ದರು. ಸೋಮವಾರ ನಡೆದ ಸೆಮಿಫೈನಲ್‌ ಟೈ ಬ್ರೇಕರ್‌ ಪಂದ್ಯದಲ್ಲಿ ಅಮೆರಿಕದ ಫ್ಯಾಬಿಯಾನೋ ಕರುವಾನಾ(Fabiano Caruana) ಅವರ ವಿರುದ್ಧದ ಗೆದ್ದು ಫೈನಲ್​ಗೆ ಲಗ್ಗೆಯಿಟ್ಟಿದ್ದಾರೆ. ಈ ಮೂಲಕ 2 ದಶಕಗಳ ಬಳಿಕ ಚೆಸ್‌ ವಿಶ್ವಕಪ್‌ನ ಫೈನಲ್‌ ಪ್ರವೇಶಿಸಿದ ಭಾರತೀಯ ಎನ್ನುವ ದಾಖಲೆ ಬರೆದರು. ಫೈನಲ್​ನಲ್ಲಿ ವಿಶ್ವ ನಂ.1 ನಾರ್ವೆಯ ಮ್ಯಾಗ್ನಸ್‌ ಕಾರ್ಲ್‌ಸನ್‌(Magnus Carlsen) ವಿರುದ್ಧ ಆಡಲಿದ್ದಾರೆ.

ಟೂರ್ನಿಯುದ್ದಕ್ಕೂ ಅದ್ಭುತ ಆಟ

ಶನಿವಾರ ನಡೆದಿದ್ದ ಮೊದಲ ಸುತ್ತು ಡ್ರಾಗೊಂಡ ಬಳಿಕ ಭಾನುವಾರದ 2ನೇ ಸುತ್ತು ಫಲಿತಾಂಶ ನೀಡುವ ನಿರೀಕ್ಷೆಯಲ್ಲಿತ್ತು. ಆದರೆ ತೀವ್ರ ಪೈಪೋಟಿಗೆ ಸಾಕ್ಷಿಯಾದ 2ನೇ ಸುತ್ತು, 47 ನಡೆಗಳ ಬಳಿಕ ಡ್ರಾಗೊಂಡಿತು.
ಭಾನುವಾರ ಬಿಳಿ ಕಾಯಿಗಳೊಂದಿಗೆ ಆಡಿದ ಪ್ರಜ್ಞಾನಂದ, ಆತ್ಮವಿಶ್ವಾಸದಿಂದ ಆಡಿದರೂ ಒಂದು ಹಂತದಲ್ಲಿ ಸಮಯದ ಅಭಾವ ಎದುರಿಸಬೇಕಾಯಿತು. 15ನೇ ನಡೆಗೆ ಬರೋಬ್ಬರಿ 25 ನಿಮಿಷಗಳನ್ನು ತೆಗೆದುಕೊಂಡರೂ, ಪಂದ್ಯ ಸಂಪೂರ್ಣವಾಗಿ ವಿಶ್ವ ನಂ.2 ಫ್ಯಾಬಿಯಾನೋ ಹಿಡಿತಕ್ಕೆ ಸಿಗದಂತೆ ಎಚ್ಚರ ವಹಿಸಿ ಡ್ರಾ ಸಾಧಿಸಿದ್ದರು. ಹೀಗಾಗಿ ಫಲಿತಾಂಶ ನಿರ್ಧಾರಕ್ಕಾಗಿ ಟೈಬ್ರೇಕರ್ ಮೊರೆ ಹೋಗಬೇಕಾಯಿತು.

ಇದನ್ನೂ ಓದಿ : ರಜನಿಕಾಂತ್‌ ಭೇಟಿಯಾದ Grandmaster ಪ್ರಜ್ಞಾನಂದ; ರಾಘವೇಂದ್ರ ಸ್ವಾಮಿ ಫೋಟೊ ಗಿಫ್ಟ್‌

ಸೋಮವಾರ ನಡೆದ ಟೈಬ್ರೇಕರ್​ ಗೇಮ್​ನಲ್ಲಿ ಪ್ರಜ್ಞಾನಂದ ಮೇಲೆ ಆರಂಭಿಕ ಹಂತದಲ್ಲಿ ಒತ್ತಡ ಹಾಕುವಲ್ಲಿ ವಿಶ್ವದ 2ನೇ ಶ್ರೇಯಾಂಕಿತ ಚೆಸ್ ಪಟು ಫ್ಯಾಬಿಯಾನೊ ಕರುವಾನಾ ಯಶಸ್ವಿಯಾಗಿದ್ದರು. ಆದರೆ ನಿರ್ಣಾಯಕ ನಡೆಗಳ ಹಂತದಲ್ಲಿ ಮೇಲುಗೈ ಸಾಧಿಸಿದ 18ರ ಪೋರ ಪ್ರಜ್ಞಾನಂದ ಆಕರ್ಷಕ ನಡೆಗಳ ಮೂಲಕ ಎದುರಾಳಿಗೆ ಹಾಗೂ ನೋಡುಗರಿಗೆ ಅಚ್ಚರಿ ಮೂಡಿಸಿ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟರು.

ಕಾರ್ಲ್‌ಸನ್‌ಗೂ ನೀರು ಕುಡಿಸಿದ್ದ ಪ್ರಜ್ಞಾನಂದ
ಚೆನ್ನೈ ಮೂಲದವರಾದ ಪ್ರಜ್ಞಾನಂದ ಅವರಿಗೆ ಕೇವಲ 18 ವರ್ಷ. ಅವರು 2013ರಲ್ಲಿ ವಿಶ್ವ ಯೂತ್ ಚೆಸ್ ಚಾಂಪಿಯನ್‌ಶಿಪ್ ಅಂಡರ್-8ನಲ್ಲಿ ಪ್ರಶಸ್ತಿಯನ್ನು ಗೆದ್ದಿದ್ದರು. 7ನೇ ವಯಸ್ಸಿನಲ್ಲಿ FIDE ಮಾಸ್ಟರ್ ಮತ್ತು 2015ರಲ್ಲಿ 10 ವರ್ಷದೊಳಗಿನ ಪ್ರಶಸ್ತಿಯನ್ನು ಗೆದ್ದ ಸಾಧನೆ ಮಾಡಿದ್ದಾರೆ. ಬಳಿಕ ಅಂತಾರಾಷ್ಟ್ರೀಯ ಮಾಸ್ಟರ್ ಪ್ರಶಸ್ತಿಯನ್ನು ಗಳಿಸಿದ್ದಾರೆ. ಇವರು ಆನ್‌ಲೈನ್ ಏರ್‌ಥಿಂಗ್ಸ್ ಮಾಸ್ಟರ್ಸ್ ರ್ಯಾಪಿಡ್ ಟೂರ್ನಮೆಂಟ್‌ನಲ್ಲಿ ವಿಶ್ವ ಚಾಂಪಿಯನ್ ಕಾರ್ಲ್‌ಸನ್‌ಗೂ ಸೋಲಿನ ರುಚು ತೋರಿಸಿದ್ದರು. ಕಾರ್ಲ್‌ಸನ್‌ ವಿರುದ್ಧ ಗೆದ್ದ ಮೂರನೇ ಭಾರತೀಯ ಆಟಗಾರರು ಆಗಿರುವ ಅವರು ಇದೀಗ ಫೈನಲ್​ನಲ್ಲಿಯೂ ಗೆಲ್ಲಲಿ ಎನ್ನುವುದು ಭಾರತೀಯರ ಆಶಯವಾಗಿದೆ.

Exit mobile version