Site icon Vistara News

Ruturaj Gaikwad : ಚೀನಾಗೆ ಹೊರಡುವ ಮೊದಲು ಪುಣೆಯ ಗಣೇಶ ಮಂದಿರಕ್ಕೆ ಭೇಟಿ ನೀಡಿದ ಋತುರಾಜ್​

Ruturaj Gaikwad

ಪುಣೆ: ಮಹಾರಾಷ್ಟ್ರ ಮೂಲದ ಬ್ಯಾಟರ್​ ಋತುರಾಜ್​ ಗಾಯಕ್ವಾಡ್​ (Ruturaj Gaikwad) ಏಷ್ಯನ್​ ಗೇಮ್ಸ್​ನಲ್ಲಿ ಭಾರತ ಕ್ರಿಕೆಟ್​ ತಂಡದ ನೇತೃತ್ವ ವಹಿಸಿದ್ದಾರೆ. ಆದರೆ, ವಿವಿಎಸ್​ ಲಕ್ಷ್ಮಣ್​ ನೇತೃತ್ವದ ಕೋಚಿಂಗ್​ ಸಿಬ್ಬಂದಿ ಜತೆಗೆ ಆಟಗಾರರೆಲ್ಲರೂ ಚೀನಾ ತಲುಪಿದ್ದಾರೆ. ಆದರೆ, ಋತುರಾಜ್​ ತಡವಾಗಿ ಹೊರಟಿದ್ದಾರೆ. ಮಂಗಳವಾರ ಅವರು ಚೀನಾದ ಫ್ಲೈಟ್ ಹತ್ತಿದ್ದಾರೆ. ಪ್ರವಾಸ ಆರಂಭಿಸುವ ಮೊದಲು ಅವರು ಪುಣೆಯ ವಿಶ್ವಪ್ರಸಿದ್ಧ ಶ್ರೀಮಂತ ದಗಡೂಶೇಠ್​ ಹಲ್ವಾಯಿ ಗಣಪತಿ ಮಂದಿರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ದಗಡೂಶೇಟ್​ ಗಣಪತಿ ಮಂದಿರ ಪುಣೆ ನಗರದ ಮಧ್ಯದಲ್ಲಿದ್ದು ವರ್ಷಕ್ಕೆ ಲಕ್ಷಾಂತರ ಮಂದಿ ಇಲ್ಲಿಗೆ ಭೇಟಿ ನೀಡುತ್ತಾರೆ. ವಿಘ್ನ ನಿವಾರಕನಾದ ಗಣಪ ಇಲ್ಲಿಗೆ ಬರುವ ಭಕ್ತರ ಅಭಿಲಾಷೆಗಳನ್ನು ಈಡೇರಿಸುತ್ತಾನೆ ಎಂಬ ನಂಬಿಕೆ ಎಲ್ಲರದು. ಅಂತೆಯೇ ಏಷ್ಯನ್​ ಗೇಮ್ಸ್​ಗೆ ಹೊರಟಿರುವ ಋತುರಾಜ್​ ಗಾಯಕ್ವಾಡ್​ ತಮ್ಮ ಪ್ರಾರ್ಥನೆ ಸಲ್ಲಿಸಲು ಗಣಪತಿ ದೇವಳಕ್ಕೆ ಹೋಗಿದ್ದಾರೆ.

ಋತುರಾಜ್​ ಗಾಯಕ್ವಾಡ್ ಅವರೊಂದಿಗೆ ಪತ್ನಿ ಉತ್ಕರ್ಷ ಪವಾರ್​ ಕೂಡ ಇದ್ದರು. ಋತುರಾಜ್ ಮತ್ತು ಉತ್ಕರ್ಷ ಅವರು ಐಪಿಎಲ್ ಮುಕ್ತಾಯಗೊಂಡ ತಕ್ಷಣ ವಿವಾಹವಾಗಿದ್ದರು. ಅವರಿಬ್ಬರ ವಿವಾಹ ಆಯೋಜನೆಗೊಂಡಿದ್ದ ಕಾರಣ ವಿಶ್ವ ಟೆಸ್ಟ್​ ಚಾಂಪಿಯನ್​ಷಿನ್​ನ ಫೈನಲ್​ ಪಂದ್ಯದಲ್ಲಿ ಬ್ಯಾಕ್​ ಅಪ್​ ಆಟಗಾರನಾಗಿ ಆಯ್ಕೆಗೊಂಡಿದ್ದ ಋತುರಾಜ್​ ಇಂಗ್ಲೆಂಡ್​ಗೆ ಪ್ರವಾಸ ಮಾಡಿರಲಿಲ್ಲ.

ಋತುರಾಜ್ ಗಾಯಕ್ವಾಡ್​ಗೆ ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಆಡುವ ಅವಕಾಶ ಸಿಕ್ಕಿತ್ತು. ಮೊದಲ ಪಂದ್ಯದಲ್ಲಿ ಅವರು ಅರ್ಧ ಶತಕ ಬಾರಿಸುವ ಮೂಲಕ ಮಿಂಚಿದ್ದರು. ಅಲ್ಲದೆ, ಏಷ್ಯಾ ಕಪ್​ಗೆ ಮೊದಲು ಅವರಿಗೆ ಫುಲ್ ಅಭ್ಯಾಸ ದೊರಕಿದಂತಾಗಿದೆ.

ಎರಡನೇ ಹಂತದ ಹಂತ

ಅಕ್ಟೊಬರ್ 5ರಂದು ಭಾರತದ ಆತಿಥ್ಯದಲ್ಲಿ ವಿಶ್ವ ಕಪ್ ಆರಂಭವಾಗಲಿದೆ. ಹೀಗಾಗಿ ಏಷ್ಯನ್ ಗೇಮ್ಸ್​ಗೆ ಎರಡನೇ ಹಂತದ ತಂಡವನ್ನು ಕಳುಹಿಸಲಾಗಿದೆ. ಆರಂಭಿಕ ತಂಡವನ್ನು ಜುಲೈನಲ್ಲಿ ಹೆಸರಿಸಲಾಯಿತು. ಬಳಿಕ ಒಂದು ಬದಲಾವಣೆ ಮಾಡಲಾಯಿತು ಆರಂಭಿಕ ತಂಡದಲ್ಲಿದ್ದ ಶಿವಂ ಮಾವಿ ಬದಲಿಗೆ ಆಕಾಶ್ ದೀಪ್ ಅವರನ್ನು ಏಷ್ಯನ್ ಗೇಮ್ಸ್ 2023 ಗಾಗಿ ಭಾರತೀಯ ಪುರುಷರ ಕ್ರಿಕೆಟ್ ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ. ಮಾವಿ ಬೆನ್ನುನೋವಿನಿಂದ ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ಹ್ಯಾಂಗ್ಝೌಗೆ ಪ್ರಯಾಣಿಸುವುದಿಲ್ಲ.

ಇದನ್ನೂ ಓದಿ : Asia Cup 2023 : ಏಷ್ಯಾಕಪ್ ಗೆದ್ದ ರೋಹಿತ್ ಶರ್ಮಾ ಬಳಗಕ್ಕೆ ಪ್ರಧಾನಿ ಮೋದಿ ಅಭಿನಂದನೆ, ಏನಂದ್ರು ಅವರು?

ಸೆಪ್ಟೆಂಬರ್ 28 ರಿಂದ ಅಕ್ಟೋಬರ್ 8 ರವರೆಗೆ ನಡೆಯಲಿರುವ ಏಷ್ಯನ್ ಗೇಮ್ಸ್ 2023 ರ ಪುರುಷರ ಕ್ರಿಕೆಟ್ ಈವೆಂಟ್ ಸೆಪ್ಟೆಂಬರ್ 28ರಿಂದ ಅಕ್ಟೋಬರ್ 8 ರವರೆಗೆ ನಡೆಯಲಿದೆ. ಎಲ್ಲಾ ಪಂದ್ಯಗಳು ಪಿಂಗ್ಫೆಂಗ್ ಕ್ರಿಕೆಟ್ ಫೀಲ್ಡ್ಸ್​​ನ ಝೆಜಿಯಾಂಗ್ ಯುನಿವರ್ಸಿಟಿ ಆಫ್ ಟೆಕ್ನಾಲಜಿಯಲ್ಲಿ ನಡೆಯಲಿವೆ.

ಅಕ್ಟೋಬರ್ 5 ರಿಂದ ಭಾರತದಲ್ಲಿ ಐಸಿಸಿ ಪುರುಷರ ಏಕದಿನ ವಿಶ್ವಕಪ್ ಪ್ರಾರಂಭವಾಗಲಿದ್ದು, ಭಾರತವು ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಇತರರಂತಹ ಮೊದಲ ತಂಡದ ನಿಯಮಿತ ಆಟಗಾರರಿಲ್ಲದೆ ಹ್ಯಾಂಗ್ಝೌ ಕ್ರೀಡಾಕೂಟದಲ್ಲಿ ಹೆಚ್ಚಾಗಿ ಎರಡನೇ ಸ್ಟ್ರಿಂಗ್ ತಂಡವನ್ನು ಕಣಕ್ಕಿಳಿಸಲಿದೆ.

ಏಷ್ಯನ್​ ಗೇಮ್ಸ್​ಗೆ ಭಾರತ ತಂಡ

ಋತುರಾಜ್ ಗಾಯಕ್ವಾಡ್ (ನಾಯಕ), ಯಶಸ್ವಿ ಜೈಸ್ವಾಲ್, ರಾಹುಲ್ ತ್ರಿಪಾಠಿ, ತಿಲಕ್ ವರ್ಮಾ, ರಿಂಕು ಸಿಂಗ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಶಹಬಾಜ್ ಅಹ್ಮದ್, ರವಿ ಬಿಷ್ಣೋಯ್, ಅವೇಶ್ ಖಾನ್, ಅರ್ಷ್ದೀಪ್ ಸಿಂಗ್, ಮುಖೇಶ್ ಕುಮಾರ್, ಶಿವಂ ದುಬೆ, ಪ್ರಭ್ಸಿಮ್ರನ್ ಸಿಂಗ್ (ವಿಕೆಟ್ ಕೀಪರ್), ಆಕಾಶ್ ದೀಪ್.

ಮೀಸಲು ಆಟಗಾರರು: ಯಶ್ ಠಾಕೂರ್, ಸಾಯಿ ಕಿಶೋರ್, ವೆಂಕಟೇಶ್ ಅಯ್ಯರ್, ದೀಪಕ್ ಹೂಡಾ, ಸಾಯಿ ಸುದರ್ಶನ್

Exit mobile version