Site icon Vistara News

Asian Games 2023 : ಧವನ್​ಗೆ ಸಿಗದ ಚಾನ್ಸ್​; ಏಷ್ಯನ್​ ಗೇಮ್ಸ್​ ಭಾರತ ತಂಡಕ್ಕೆ ಹೊಸ ನಾಯಕ!

Team India

ಮುಂಬಯಿ : 2023ರ ಏಷ್ಯನ್ ಗೇಮ್ಸ್​ನಲ್ಲಿ ಭಾರತದ ಯುವ ತಂಡವನ್ನು ಋತುರಾಜ್ ಗಾಯಕ್ವಾಡ್ ಮುನ್ನಡೆಸಲಿದ್ದಾರೆ. ಐಪಿಎಲ್ 2023ರ ಸ್ಟಾರ್ ಆಟಗಾರರಾದ ರಿಂಕು ಸಿಂಗ್, ಪ್ರಭ್​ಸಿಮ್ರಾನ್​ ಸಿಂಗ್​ ಅವರಿಗೂ ತಂಡದಲ್ಲಿ ಅವಕಾಶ ನೀಡಲಾಗಿದೆ. ಏತನ್ಮಧ್ಯೆ, ಹಿರಿಯ ಆಟಗಾರ ಶಿಖರ್​ ಧವನ್ ಅವರನ್ನು ಟೂರ್ನಮೆಂಟ್ ನಿಂದ ಕೈಬಿಡಲಾಯಿತು. ಪ್ರಮುಖ ಆಟಗಾರರು ಇಲ್ಲದ ಭಾರತ ತಂಡಕ್ಕೆ ಶಿಖರ್ ಧವನ್​ ಅವರನ್ನು ನಾಯಕರಾಗಿ ಆಯ್ಕೆ ಮಾಡಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ಎಲ್ಲರ ನಿರೀಕ್ಷೆಗಳು ಉಲ್ಟಾ ಆಗುವಂತೆ ಅವರನ್ನೇ ತಂಡದಿಂದ ಕೈಬಿಡಲಾಗಿದೆ.

2023 ರ ಸೆಪ್ಟೆಂಬರ್ 19 ರಿಂದ ಅಕ್ಟೋಬರ್ 8 ರವರೆಗೆ ಝೆಜಿಯಾಂಗ್ ಯುನಿವರ್ಸಿಟಿ ಆಫ್ ಟೆಕ್ನಾಲಜಿ ಪಿಂಗ್ಫೆಂಗ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ 19 ನೇ ಏಷ್ಯನ್ ಗೇಮ್ಸ್​ಗೆ ಪುರುಷರ ಆಯ್ಕೆ ಸಮಿತಿಯು ಭಾರತ ತಂಡವನ್ನು ಆಯ್ಕೆ ಮಾಡಿದೆ. ಪುರುಷರ ಕ್ರಿಕೆಟ್ ಪಂದ್ಯಾವಳಿ ಸೆಪ್ಟೆಂಬರ್ 28 ರಿಂದ ಅಕ್ಟೋಬರ್ 8 ರವರೆಗೆ ಟಿ 20 ಮಾದರಿಯಲ್ಲಿ ನಡೆಯಲಿದೆ.

ತಂಡ : ಋತುರಾಜ್ ಗಾಯಕ್ವಾಡ್ (ನಾಯಕ), ಯಶಸ್ವಿ ಜೈಸ್ವಾಲ್, ರಾಹುಲ್ ತ್ರಿಪಾಠಿ, ತಿಲಕ್ ವರ್ಮಾ, ರಿಂಕು ಸಿಂಗ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಶಹಬಾಜ್ ಅಹ್ಮದ್, ರವಿ ಬಿಷ್ಣೋಯ್, ಅವೇಶ್ ಖಾನ್, ಅರ್ಷ್​ದೀಪ್​ ಸಿಂಗ್​, ಮುಖೇಶ್ ಕುಮಾರ್, ಶಿವಂ ಮಾವಿ, ಶಿವಂ ದುಬೆ, ಪ್ರಭ್​ಸಿಮ್ರಾನ್​ ಸಿಂಗ್ (ವಿಕೆಟ್ ಕೀಪರ್).

ಮೀಸಲು ಆಟಗಾರರು : ಯಶ್ ಠಾಕೂರ್, ಸಾಯಿ ಕಿಶೋರ್, ವೆಂಕಟೇಶ್ ಅಯ್ಯರ್, ದೀಪಕ್ ಹೂಡಾ, ಸಾಯಿ ಸುದರ್ಶನ್.

ಮಹಿಳೆಯರ ತಂಡವೂ ಪ್ರಕಟ

2023 ರ ಸೆಪ್ಟೆಂಬರ್ 19 ರಿಂದ ಅಕ್ಟೋಬರ್ 8 ರವರೆಗೆ ಝೆಜಿಯಾಂಗ್ ಯುನಿವರ್ಸಿಟಿ ಆಫ್ ಟೆಕ್ನಾಲಜಿ ಪಿಂಗ್ಫೆಂಗ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ 19 ನೇ ಏಷ್ಯನ್ ಗೇಮ್ಸ್​ಗೆ ಮಹಿಳೆಯರ ಆಯ್ಕೆ ಸಮಿತಿಯು ಭಾರತ ತಂಡವನ್ನು ಆಯ್ಕೆ ಮಾಡಿದೆ. ಮಹಿಳಾ ಕ್ರಿಕೆಟ್ ಪಂದ್ಯಾವಳಿಯು 2023 ರ ಸೆಪ್ಟೆಂಬರ್ 19 ರಿಂದ 28 ರವರೆಗೆ ಟಿ 20 ಮಾದರಿಯಲ್ಲಿ ನಡೆಯಲಿದೆ.

ಇದನ್ನೂ ಓದಿ : Team India : ಡಿ.10ರಿಂದ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಬಿಸಿಸಿಐ ಸಂಪೂರ್ಣ ವೇಳಾಪಟ್ಟಿ ಬಿಡುಗಡೆ

ತಂಡ: ಹರ್ಮನ್​ಪ್ರೀತ್ ಕೌರ್​ (ನಾಯಕಿ), ಸ್ಮೃತಿ ಮಂಧಾನಾ (ಉಪನಾಯಕಿ), ಶಫಾಲಿ ವರ್ಮಾ, ಜೆಮಿಮಾ ರೋಡ್ರಿಗಸ್, ದೀಪ್ತಿ ಶರ್ಮಾ, ರಿಚಾ ಘೋಷ್ (ವಿಕೆಟ್ ಕೀಪರ್), ಅಮನ್ಜೋತ್ ಕೌರ್, ದೇವಿಕಾ ವೈದ್ಯ, ಅಂಜಲಿ ಸರ್ವಾನಿ, ಟಿಟಾಸ್ ಸಧು, ರಾಜೇಶ್ವರಿ ಗಾಯಕ್ವಾಡ್, ಮಿನ್ನು ಮಣಿ, ಕನಿಕಾ ಅಹುಜಾ, ಉಮಾ ಚೆಟ್ರಿ (ವಿಕೆಟ್ ಕೀಪರ್), ಅನುಷಾ ಬಾರೆಡ್ಡಿ.

ಮೀಸಲು ಆಟಗಾರರು: ಹರ್ಲೀನ್ ಡಿಯೋಲ್, ಕಾಶ್ವೀ ಗೌತಮ್, ಸ್ನೇಹ್ ರಾಣಾ, ಸೈಕಾ ಇಶಾಕ್, ಪೂಜಾ ವಸ್ತ್ರಾಕರ್

Exit mobile version