ಗುವಾಹಟಿ: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟಿ20 ಸರಣಿಯ ಮೂರನೇ ಹಣಾಹಣಿಯಲ್ಲಿ ಭಾರತದ ಆರಂಭಿಕ ಬ್ಯಾಟರ್ ಋತುರಾಜ್ ಗಾಯಕ್ವಾಡ್ ಅಜೇಯ ಶತಕ ಬಾರಿಸಿದ್ದಾರೆ. ಇದು ಟಿ20 ಮಾದರಿಯಲ್ಲಿ ಅವರ ಮೊಟ್ಟ ಮೊದಲ ಶತಕವಾಗಿದೆ. ಗಾಯಕ್ವಾಡ್ ಕೇವಲ 57 ಎಸೆತಗಳಲ್ಲಿ 13 ಬೌಂಡರಿ ಮತ್ತು 7 ಸಿಕ್ಸರ್ ಸೇರಿದಂತೆ 123 ರನ್ ಗಳಿಸಿದರು. ಬಲಗೈ ಬ್ಯಾಟರ್ 215.8 ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದರು. ಅವರ ಅಬ್ಬರದ ಬ್ಯಾಟಿಂಗ್ನಿಂದಾಗಿ ಮೆನ್ ಇನ್ ಬ್ಲೂ ನಿಗದಿತ 20 ಓವರ್ಗಳಲ್ಲಿ 222 ರನ್ ಗಳಿಸಿತು. ಮೊದಲ 21 ಎಸೆತಗಳಿಗೆ 21 ರನ್ ಬಾರಿಸಿದ್ದ ಋತುರಾಜ್ ಬಳಿಕ 36 ಎಸೆತಗಳಿಗೆ 102 ರನ್ ಬಾರಿಸಿ ಅಜೇಯರಾಗಿ ಉಳಿದರು.
'𝑨𝒍𝒆𝒙𝒂, 𝒑𝒍𝒂𝒚 𝒆𝒇𝒇𝒐𝒓𝒕𝒍𝒆𝒔𝒔' 🤌
— JioCinema (@JioCinema) November 28, 2023
Catch the 🇮🇳 assault LIVE on #Sports18, #JioCinema, and #ColorsCineplex#IDFCBankT20ITrophy #INDvAUS #JioCinemaSports pic.twitter.com/CXYQdcvgKf
ಭಾರತ ತಂಡದ ಪಾಲಿಗೆ ಇದು ನೆನಪಿಡಬೇಕಾದ ಇನ್ನಿಂಗ್ಸ್ ಆಗಿದೆ. ಟಿ20ಐನಲ್ಲಿ ಭಾರತ ಮೂರನೇ ಬಾರಿ 200+ ರನ್ ಗಳಿಸಿದ ಸಾಧನೆಯನ್ನೂ ಮಾಡಿದೆ. ಇದು ಭಾರತ ತಂಡ ಪಾಲಿಗೆ ವಿಶೇಷ ಸಾಧನೆಯಾಗಿದೆ.
ಇಲ್ಲಿನ ಬರ್ಸಪಾರ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತ ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನ ಪಡೆಯಿತು. ಆದರೆ, 14 ರನ್ಗಳಿಗೆ ಮೊದಲ ವಿಕೆಟ್ ಕಳೆದುಕೊಂಡಿತು. ಹಿಂದಿನ ಪಂದ್ಯದಲ್ಲಿ ಅರ್ಧ ಶತಕ ಬಾರಿಸಿದ್ದ ಯಶಸ್ವಿ ಜೈಸ್ವಾಲ್ 6 ರನ್ಗೆ ಔಟಾದರು. ಆದರೆ, ಮತ್ತೊಂದು ಬದಿಯಲ್ಲಿ ಗಟ್ಟಿಯಾಗಿ ನಿಂತಿದ್ದ ಋತುರಾಜ್ ಇನಿಂಗ್ಸ್ ಕಟ್ಟಲು ಮುಂದುವರಿಸಿದರು.
Ruturaj in first 21 balls – 21* runs.
— Johns. (@CricCrazyJohns) November 28, 2023
Ruturaj in next 36 balls – 102* runs. pic.twitter.com/clvq35xZII
ಕಳೆದ ಪಂದ್ಯದಲ್ಲಿ ಸ್ಫೋಟಕ ಅರ್ಧ ಶತಕ ಬಾರಿಸಿ ಮಿಂಚಿದ್ದ ಇಶಾನ್ ಕಿಶನ್ ಈ ಪಂದ್ಯದಲ್ಲಿ ಚಾಪು ಮೂಡಿಸಲು ವಿಫಲರಾದರು. ಅವರು ಶೂನ್ಯಕ್ಕೆ ಔಟಾಗುವ ಮೂಲಕ ಭಾರತಕ್ಕೆ ಆಘಾತ ಎದುರಾಯಿತು. 24 ರನ್ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಬಿತ್ತು. ಆ ಬಲಿಕ ಕ್ರೀಸ್ಗೆ ಬಂದ ನಾಯಕ ಸೂರ್ಯಕುಮಾರ್ ಯಾದವ್ ಜವಾಬ್ದಾರಿಯುತವಾಗಿ ಆಡಿದರು. ಅವರು 29 ಎಸೆತಗಳಲ್ಲಿ 39 ರನ್ ಬಾರಿಸಿದರು. ಆದರೆ, 11ನೇ ಓವರ್ನಲ್ಲಿ ಅವರು ವಿಕೆಟ್ ಒಪ್ಪಿಸಿದಾಗ ತಂಡದ ಮೊತ್ತ 81 ಆಗಿತ್ತು. ಬಳಿಕ ಜತೆಯಾದ ತಿಲಕ್ ವರ್ಮಾ ಹಾಗೂ ಋತುರಾಜ್ ಶತಕದ ಜತೆಯಾಟವಾಡಿದರು/
ಮುಂದಿನ ನಾಯಕ
ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 3ನೇ ಟಿ20 ಪಂದ್ಯದಲ್ಲಿ ಶತಕ ಬಾರಿಸಿದ ಋತುರಾಜ್ ಗಾಯಕ್ವಾಡ್ ಅವರನ್ನು ಮುಂದಿನ ನಾಯಕನನ್ನಾಗಿ ಆಯ್ಕೆ ಮಾಡಬೇಕು ಎಂದು ಅಭಿಮಾನಿಗಳು ಹೇಳಿದ್ದಾರೆ. ಆರಂಭಿಕ ಆಟಗಾರ ಎರಡನೇ ಪಂದ್ಯದಲ್ಲಿ ಅರ್ಧಶತಕವನ್ನು ಗಳಿಸಿದ್ದರು ಮತ್ತು ಈಗ ದೊಡ್ಡ ಇನಿಂಗ್ಸ್ ಮೂಲಕ ಮೂರನೇ ಪಂದ್ಯದಲ್ಲಿ ಭಾರತವನ್ನು 200 ರನ್ ಗಡಿ ದಾಟುವಂತೆ ಮಾಡಿದ್ದಾರೆ.
ಬಲಗೈ ಆರಂಭಿಕ ಬ್ಯಾಟ್ಸ್ಮನ್ 57 ಎಸೆತಗಳಲ್ಲಿ 123 ರನ್ ಗಳಿಸುವ ಮೂಲಕ ಭಾರತವನ್ನು 10.2 ಓವರ್ಗಳಲ್ಲಿ 3 ವಿಕೆಟ್ಗೆ 81 ರನ್ ಗಳಿಸಿದ್ದ ಭಾರತ ತಂಡವನ್ನು 20 ಓವರ್ಗಳಲ್ಲಿ 3 ವಿಕೆಟ್ಗೆ 222 ರನ್ನತ್ತ ಕೊಂಡೊಯ್ದಿದ್ದರು. ಐದನೇ ವಿಕೆಟ್ ಜೊತೆಯಾಟದಲ್ಲಿ ತಿಲಕ್ ವರ್ಮಾ ಕೇವಲ 31 ರನ್ ಗಳಿಸಿದರು. ಈ ವೇಳೆ ಋತುರಾಜ್ ಪಂದ್ಯದ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿದರು. ಆರಂಭಿಕ ಆಟಗಾರ ತಂಡದ 55% ರನ್ ಗಳಿಸಿದರು. ಉಳಿದವರು ಇತರ ಸೇರಿದಂತೆ 63 ಎಸೆತಗಳಲ್ಲಿ ಕೇವಲ 99 ರನ್ ಗಳಿಸಿದರು.