Site icon Vistara News

SA vs BAN: ಬಲಿಷ್ಠ ಹರಿಣಗಳ ಸವಾಲು ಗೆದ್ದೀತೇ ಬಾಂಗ್ಲಾ ಹುಲಿಗಳು?

Marco Jansen gestures after his setup to dismiss Joe Root worked

ಮುಂಬೈ: ಹಾಲಿ ಚಾಂಪಿಯನ್​ ಇಂಗ್ಲೆಂಡ್​ ವಿರುದ್ಧ ದಾಖಲೆ ಮೊತ್ತದ ಗೆಲುವು ಕಂಡಿರುವ ದಕ್ಷಿಣ ಆಫ್ರಿಕಾ ಮತ್ತೊಂದು ಪಂದ್ಯವನ್ನಾಡಲು ಸಜ್ಜಾಗಿ ನಿಂತಿದೆ. ಮಂಗಳವಾರ ನಡೆಯುವ ವಿಶ್ವಕಪ್​ನ 23ನೇ ಪಂದ್ಯದಲ್ಲಿ ಬಾಂಗ್ಲಾದೇಶದ ಸವಾಲು ಎದುರಿಸಲಿದೆ. ಮೇಲ್ನೋಟಕ್ಕೆ ಹರಿಣಗಳ ಪಡೆಯೇ ಗೆಲ್ಲುವ ನೆಚ್ಚಿನ ತಂಡವಾಗಿದೆ.

ದಕ್ಷಿಣ ಆಫ್ರಿಕಾ ತಂಡ ಇಂಗ್ಲೆಂಡ್​ ವಿರುದ್ಧ ವಾಂಖೆಡೆ ಕ್ರೀಡಾಂಗಣದಲ್ಲೇ 399 ರನ್​ ಪೇರಿಸಿ 229 ರನ್​ಗಳ ಗೆಲುವು ಸಾಧಿಸಿದ್ದು. ಹೀಗಾಗಿ ಬಾಂಗ್ಲಾವನ್ನು ಮಣಿಸುವುದು ಅಷ್ಟು ಕಷ್ಟವಲ್ಲ. ಮಧ್ಯಮ ಕ್ರಮಾಂಕದಲ್ಲಿ ಆಡುವ ಬೌಲರ್​ ಮಾರ್ಕೊ ಜಾನ್ಸನ್​ ಕೂಡ ತಂಡಕ್ಕೆ ನರೆವಾಗಬಲ್ಲರು. ಕ್ಲಾಸೆನ್​ ಅವರಂತೂ ಪ್ರಚಂಡ ಬ್ಯಾಟಿಂಗ್​ ಫಾರ್ಮ್​ನಲ್ಲಿದ್ದಾರೆ. ಇಂಗ್ಲೆಂಡ್​ ವಿರುದ್ಧ ಕೇವಲ 61 ಎಸೆತಗಳಲ್ಲಿ ಶತಕ ಪೂರ್ಣಗೊಳಿಸಿದ್ದರು. 

ಸಿಡಿಯಬೇಕಿದೆ ಡಿ ಕಾಕ್​

ಆರಂಭಿಕ ಎರಡು ಪಂದ್ಯಗಳಲ್ಲಿ ಸತತ ಶತಕ ಬಾರಿಸಿ ಮಿಂಚಿದ್ದ ಡಿ ಕಾಕ್​ ಬ್ಯಾಟ್​ ಸದ್ದು ಮಾಡುತ್ತಿಲ್ಲ. ಆ ಬಳಿಕ ಆಡಿದ 2 ಪಂದ್ಯಗಳಲ್ಲೂ ಸಿಂಗಲ್​ ಡಿಜಿಟ್​ಗೆ ವಿಕೆಟ್​ ಕೈಚೆಲ್ಲಿದ್ದಾರೆ. ಅವರು ಕೂಡ ಈ ಪಂದ್ಯದಲ್ಲಿ ಮೊದಲಿನಂತೆ ಸಿಡಿದು ನಿಂತರೆ ತಂಡದ ಮೊತ್ತ 400 ಆಗುವ ಸಾಧ್ಯತೆ ಇದೆ. ಟೆಂಬ ಬವುಮಾ ಅವರ ಜಾಗದಲ್ಲಿ ಆಡಲಿಳಿದ ರೀಜಾ ಹೆಂಡ್ರಿಕ್ಸ್ ಕೂಡ ಕಳೆದ ಪಂದ್ಯದಲ್ಲಿ 85 ರನ್​ ಬಾರಿಸಿ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದರು. ಹೀಗಾಗಿ ಬಾಂಗ್ಲಾ ವಿರುದ್ಧವೂ ಅವರು ಆಡುವ ಸಾಧ್ಯತೆ ಇದೆ. ರಸ್ಸಿ ವಾನ್​ ಡರ್​ ಡುಸ್ಸೆನ್​ ಹಂಗಾಮಿ ನಾಯಕ ಐಡೆನ್​ ಮಾರ್ಕ್​ರಮ್​, ಡೇವಿಡ್​ ಮಿಲ್ಲರ್​ ಇವರೆಲ್ಲ ತಂಡ ಬ್ಯಾಟಿಂಗ್​ ಬಲವಾಗಿದ್ದಾರೆ.

ಇದನ್ನೂ ಓದಿ Virat Kohli: ಎಷ್ಟು ಬಾರಿ ವಿರಾಟ್​ ಕೊಹ್ಲಿ ‘ನರ್ವಸ್ 90’ಗೆ ವಿಕೆಟ್​ ಒಪ್ಪಿಸಿದ್ದಾರೆ?​

ಬಾಂಗ್ಲಾಗೆ ಕೈ ಹಿಡಿಯದ ಅದೃಷ್ಟ

ಬಾಂಗ್ಲಾದೇಶ ತಂಡಕ್ಕೆ ನಾಯಕ ಶಕೀಬ್​ ಅಲ್​ ಹಸನ್​ ಅವರ ಗಾಯದ ಚಿಂತೆ ಒಂದೆಡೆ ಹಿನ್ನಡೆಯಾಗಿದ್ದರೆ. ಮತ್ತೊಂದು ಕಡೆ ಅದೃಷ್ಟ ಕೈ ಹಿಡಿಯುತ್ತಿಲ್ಲ. ಬಾಂಗ್ಲಾ ಆಡಿದ ಎಲ್ಲ ಪಂದ್ಯಗಳಲ್ಲಿಯೂ ಉತ್ತಮ ನಿರ್ವಹಣೆ ತೋರಿದೆ. ಆದರೆ ಅಂತಿಮ ಹಂತದಲ್ಲಿ ಎಡವಿ ಸೋಲು ಕಾಣುತ್ತಿದೆ. ಅಜೇಯ ಭಾರತ ತಂಡಕ್ಕೂ ಬಾಂಗ್ಲಾ ತೀವ್ರ ಪೈಪೋಟಿ ನೀಡಿತ್ತು. ಈ ಪಂದ್ಯದಲ್ಲಾದರೂ ಅದೃಷ್ಟ ಕೈ ಹಿಡಿಯಲಿದೆಯಾ ಎಂದು ಕಾದು ನೋಡಬೇಕಿದೆ.

ಪಿಚ್​ ರಿಪೋರ್ಟ್

ಮುಂಬೈಯ ವಾಂಖೆಡೆ ಸ್ಟೇಡಿಯಂನ ಪಿಚ್​ ಬ್ಯಾಟಿಂಗ್ ಸ್ನೇಹಿ ಆಗಿದೆ. ಹೀಗಾಗಿ ಈ ಪಂದ್ಯದಲ್ಲಿ ದೊಡ್ಡ ಮೊತ್ತ ದಾಖಲಾಗುವ ಸಾಧ್ಯತೆ ಅಧಿಕ. ಇಲ್ಲಿ ನಡೆದ ಬಹುತೇಕ ಏಕದಿನ ಪಂದ್ಯಗಳು ಹೈಸ್ಕೋರಿಂಗ್ ಆಗಿದೆ. ಈ ಸ್ಟೇಡಿಯಂನಲ್ಲಿ ಅತಿ ಹೆಚ್ಚು ರನ್​ ಗಳಿಸಿದ ದಾಖಲೆಯೂ ದಕ್ಷಿಣ ಆಫ್ರಿಕಾ ತಂಡದ ಹೆಸರಿನಲ್ಲಿದೆ. 2015ರಲ್ಲಿ ನಡೆದ ಭಾರತ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 4 ವಿಕೆಟ್​ಗೆ 438 ಬಾರಿಸಿತ್ತು. ಇದಾದ ಬಳಿಕ ಕಳೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಇಂಗ್ಲೆಂಡ್ ವಿರುದ್ಧ 399 ರನ್​ ಬಾರಿಸಿತ್ತು. ಒಟ್ಟಾರೆ ಇದು ಬ್ಯಾಟಿಂಗ್​ ಸ್ನೇಹಿಯಾಗಿದೆ.

ಸಂಭಾವ್ಯ ತಂಡ

ದಕ್ಷಿಣ ಆಫ್ರಿಕಾ: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ರೀಜಾ ಹೆಂಡ್ರಿಕ್ಸ್, ರಸ್ಸಿ ವಾನ್ ಡರ್​ ಡುಸೆನ್, ಐಡೆನ್ ಮಾರ್ಕ್ರಮ್(ನಾಯಕ), ಹೆನ್ರಿಕ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಕಗಿಸೊ ರಬಾಡಾ, ಲುಂಗಿ ಎನ್​ಗಿಡಿ, ಜೆರಾಲ್ಡ್ ಕೋಟ್ಜಿ.

ಬಾಂಗ್ಲಾದೇಶ: ಲಿಟ್ಟನ್ ದಾಸ್, ತಂಝಿದ್ ಹಸನ್, ನಜ್ಮುಲ್ ಹೊಸೈನ್ ಶಾಂಟೊ, ಮೆಹಿದಿ ಹಸನ್ ಮಿರಾಜ್, ಶಕೀಬ್ ಅಲ್ ಹಸನ್ (ನಾಯಕ), ಮುಶ್ಫಿಕರ್ ರಹೀಮ್, ತೌಹಿದ್ ಹೃದಯೋಯ್, ಮಹಮ್ಮದುಲ್ಲಾ, ತಸ್ಕಿನ್ ಅಹ್ಮದ್, ಶೋರಿಫುಲ್ ಇಸ್ಲಾಂ, ಮುಸ್ತಫಿಜುರ್ ರೆಹಮಾನ್.

Exit mobile version