Site icon Vistara News

Mohammed Siraj: ಬಿಸಿಸಿಐನ ವಿಶೇಷ ಅವಾರ್ಡ್ ಪಡೆದ ಮೊಹಮ್ಮದ್​ ಸಿರಾಜ್; ಏನದು?

Mohammed Siraj wins Impact fielder

ಜೊಹಾನ್ಸ್​ಬರ್ಗ್​: ಈ ಬಾರಿಯ ಏಕದಿನ ವಿಶ್ವಕಪ್(ODI World Cup)​ ಟೂರ್ನಿಯಲ್ಲಿ ಬಿಸಿಸಿಐ ನೂತನ ಪ್ರಯೋಗವೊಂದನ್ನು ಜಾರಿಗೆ ತರುವ ಮೂಲಕ ಎಲ್ಲೆಡೆ ಗಮನಸೆಳೆದಿತ್ತು. ಪಂದ್ಯದಲ್ಲಿ ಅತ್ಯತ್ತಮ ಫಿಲ್ಡಿಂಗ್​ ನಡೆಸಿದ ಆಟಗಾರನಿಗೆ ಪಂದ್ಯ ಮುಕ್ತಾಯದ ಬಳಿಕ ಚಿನ್ನದ ಪದಕ ನೀಡಿ ಗೌರವಿಸಲಾಗುತ್ತಿತ್ತು. ಈ ಮೂಲಕ ಆಟಗಾರರನ್ನು ಉತ್ತೇಜಿಸುವ ಕಾರ್ಯವನ್ನು ಟೀಮ್​ ಮ್ಯಾನೇಜ್ಮೆಂಟ್ ಮಾಡಿತ್ತು. ವಿಶ್ವಕಪ್​ ಟೂರ್ನಿ ಮುಗಿದರೂ ಈ ಅವಾರ್ಡ್ ನೀಡುವ​ ಪದ್ಧತಿ ಮತ್ತೆ ಮುಂದುವರಿದೆ. ಆದರೆ ಇದರಲ್ಲಿ ಸಣ್ಣದೊಂದು ಬದಲಾವಣೆ ಮಾಡಲಾಗಿದೆ.

ವಿಶ್ವಕಪ್​​ನಲ್ಲಿ ಪ್ರತಿ ಪಂದ್ಯದಲ್ಲಿ ಉತ್ತಮ ಫೀಲ್ಡಿಂಗ್​ ಮಾಡಿದಾಗ ಪ್ರಶಸ್ತಿ ನೀಡಲಾಗುತ್ತಿತ್ತು. ಆದರೆ ಈಗ ಇದನ್ನು ಸರಣಿ ಮುಕ್ತಾಯದ ಬಳಿಕ ಎಲ್ಲ ಪಂದ್ಯಗಳ ಪ್ರದರ್ಶನವನ್ನು ಪರಿಗಣಿಸಿ ಸರಣಿಯ “ಇಂಪ್ಯಾಕ್ಟ್ ಫೀಲ್ಡರ್”(Impact fielder) ಎಂದು ಪ್ರಶಸ್ತಿ ನೀಡಲಾಗುತ್ತದೆ. ಮೊಹಮ್ಮದ್​ ಸಿರಾಜ್(Mohammed Siraj)​ ಅವರು ಈ ಪ್ರಶಸ್ತಿಗೆ ಭಾಜನರಾದ ಮೊದಲ ಆಟಗಾರನಾಗಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ ಗುರುವಾರ ನಡೆದಿದ್ದ ಅಂತಿಮ ಟಿ20 ಪಂದ್ಯದಲ್ಲಿ ವೇಗಿ ಮೊಹಮ್ಮದ್​ ಸಿರಾಜ್​ ಅವರಿಗೆ ಸರಣಿಯ ಇಂಪ್ಯಾಕ್ಟ್ ಫೀಲ್ಡರ್​ ಪ್ರಶಸ್ತಿ ನೀಡಿ ಗೌರವಿಸಲಾಯಿತು. ತಂಡದ ಫೀಲ್ಡಿಂಗ್​ ಕೋಚ್​ ಟಿ.ದಿಲೀಪ್​ ಅವರು ಈ ಪ್ರಶಸ್ತಿ ಘೋಷಣೆ ಮಾಡಿದರು. ಸಿರಾಜ್​ ಅವರು ಪ್ರಶಸ್ತಿ ಪಡೆದ ಫೋಟೊವನ್ನು ಬಿಸಿಸಿಐ ತನ್ನ ಅಧಿಕೃತ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದೆ.

ಇದನ್ನೂ ಓದಿ MS Dhoni Jersey: ಧೋನಿ 7ನೇ ಸಂಖ್ಯೆ ಜೆರ್ಸಿಗೆ ವಿದಾಯ!

ಈ ಬಾರಿಯ ವಿಶ್ವಕಪ್​ ಜರ್ನಿಯಲ್ಲಿ ವಿರಾಟ್ ಕೊಹ್ಲಿ, ಕೆಎಲ್ ರಾಹುಲ್,ಶಾರ್ದೂಲ್​ ಠಾಕೂರ್, ಶ್ರೇಯಸ್ ಅಯ್ಯರ್, ರೋಹಿತ್ ಶರ್ಮಾ, ರವೀಂದ್ರ ಜಡೇಜಾ ಮತ್ತು ಸೂರ್ಯಕುಮಾರ್ ಯಾದವ್ ಉತ್ತಮ ಫೀಲ್ಡರ್​ ಪ್ರಶಸ್ತಿ ಗೆದ್ದ ಸಾಧಕರಾಗಿದ್ದರು.

ದಾಖಲೆಯ ಮೊತ್ತದಿಂದ ಗೆದ್ದ ಭಾರತ

ದಿ ವಾಂಡರರ್ಸ್​​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಗುರುವಾರದ ಈ ಪಂದ್ಯದಲ್ಲಿ ಟಾಸ್ ಗೆದ್ದು ಸೋತು ಮೊದಲು ಬ್ಯಾಟ್ ಮಾಡಿದ ಭಾರತ ತಂಡ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 201 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡ 13.5 ಓವರ್​ಗಳಲ್ಲಿ 95 ರನ್​ಗಳಿಗೆ ಆಲ್​ಔಟ್​ ಆಯಿತು. ಭಾರತದ ಬೌಲರ್​ಗಳ ಮುಂದೆ ತಣ್ಣಗಾದ ದಕ್ಷಿಣ ಆಫ್ರಿಕಾ ತಂಡದ ಬ್ಯಾಟರ್​ಗಳು ಸತತವಾಗಿ ವಿಕೆಟ್​ ಒಪ್ಪಿಸಿದರು. ನಾಯಕ ಏಡೆನ್​ ಮಾರ್ಕ್ರಮ್​​ 14 ಎಸೆತಕ್ಕೆ 25 ರನ್ ಬಾರಿಸಿದರೆ, ಡೇವಿಡ್​ ಮಿಲ್ಲರ್ 25 ಎಸೆತಕ್ಕೆ 35 ರನ್​ ಬಾರಿಸಿದ್ದು ಹರಿಣಗಳ ಪಡೆಯ ಪಾಲಿಗೆ ಗರಿಷ್ಠ ರನ್ ಎನಿಸಿಕೊಂಡಿತು. ಡೆನ್ವೊನ್​ ಪೆರೆರಾ 12 ರನ್​ ಬಾರಿಸಿದರೆ ಉಳಿದವರೆಲ್ಲರೂ ಒಂದಂಕಿ ಮೊತ್ತಕ್ಕೆ ಸೀಮಿತಗೊಂಡರು.

Exit mobile version