Site icon Vistara News

SA vs NED: ಪಂದ್ಯಕ್ಕೆ ಮಳೆ ಅಡ್ಡಿ; ರದ್ದುಗೊಂಡರೆ ಯಾವ ತಂಡಕ್ಕೆ ಲಾಭ?

A dark, grey afternoon greeted the teams in Dharamsala

ಧರ್ಮಶಾಲ: ಇಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ಮತ್ತು ನೆದರ್ಲೆಂಡ್ಸ್​​ ವಿರುದ್ಧದ ವಿಶ್ವಕಪ್​ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದೆ. ಟಾಸ್​ ಆದರೂ ಪಂದ್ಯ ಸಂಪೂರ್ಣವಾಗಿ ನಡೆಯುವುದೇ ಅನುಮಾನ ಎನ್ನುವಂತಿದೆ. ಒಂದೊಮ್ಮೆ ಮಳೆಯಿಂದ ಪಂದ್ಯ ರದ್ದುಗೊಂಡರೆ ಭಾರತ ತಂಡಕ್ಕೆ ಹೆಚ್ಚಿನ ಲಾಭವಾಗಲಿದೆ. ಸದ್ಯ ದಕ್ಷಿಣ ಆಫ್ರಿಕಾ ಟಾಸ್​ ಗೆದ್ದು ಬೌಲಿಂಗ್​ ಆಯ್ಕೆ ಮಾಡಿದೆ.

ಈ ಪಂದ್ಯ ರದ್ದುಗೊಂಡರೆ ಯಾವುದೇ ಮೀಸಲು ದಿನ ಇಲ್ಲ. ಉಭಯ ತಂಡಗಳಿಗೂ ತಲಾ ಒಂದು ಅಂಕ ನೀಡಲಾಗುತ್ತದೆ. ಇದರಿಂದ ಟೀಮ್​ ಇಂಡಿಯಾಕ್ಕೆ ಹೆಚ್ಚಿನ ಲಾಭವಿದೆ. ಒಂದೊಮ್ಮೆ ಪಂದ್ಯ ನಡೆದು ದಕ್ಷಿಣ ಆಫ್ರಿಕಾ ಗೆದ್ದರೆ ಅಂಕಪಟ್ಟಿಯಲ್ಲಿರುವ ಭಾರತ ದ್ವಿತೀಯ ಸ್ಥಾನಕ್ಕೆಎ ಕುಸಿಯಲಿದೆ. ದಕ್ಷಿಣ ಆಫ್ರಿಕಾ 2 ಪಂದ್ಯ ಗೆದ್ದು 4 ಅಂಕ ಪಡೆದಿದೆ. ಪಂದ್ಯ ಗೆದ್ದರೆ ಭಾರತದಷ್ಟೇ 4 ಅಂಕ ಪಡೆಯಲಿದೆ. ಆದರೆ ರನ್​ ರೇಟ್​ ಆಧಾರದಲ್ಲಿ ದಕ್ಷಿಣ ಆಫ್ರಿಕಾ ನಂ.1 ಸ್ಥಾನಕ್ಕೇರಲಿದೆ. ಸದ್ಯ ದಕ್ಷಿಣ ಆಫ್ರಿಕಾ +2.360 ರನ್​ ರೇಟ್​ ಹೊಂದಿದೆ.

ಮಳೆಯಿಂದ ಒಂದು ಬಾರಿ ದಕ್ಷಿಣ ಆಫ್ರಿಕಾದ ವಿಶ್ವಕಪ್ ಕನಸು ನುಚ್ಚುನೂರಾಗಿತ್ತು. ಅದು 1992ರ ವಿಶ್ವಕಪ್‌ ಪಂದ್ಯಾವಳಿಯ 2ನೇ ಸೆಮಿಫೈನಲ್‌. ಸಿಡ್ನಿಯಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ ದಕ್ಷಿಣ ಆಫ್ರಿಕಾ ಆಡಲಿಳಿದಿತ್ತು. ಮೊದಲು ಬ್ಯಾಟಿಂಗ್‌ ನಡೆಸಿದ ಇಂಗ್ಲೆಂಡ್‌ 45 ಓವರ್‌ಗಳಲ್ಲಿ 6 ವಿಕೆಟಿಗೆ 256 ರನ್‌ ಮಾಡಿತ್ತು. ಅಮೋಘ ಚೇಸಿಂಗ್‌ ನಡೆಸಿದ ದಕ್ಷಿಣ ಆಫ್ರಿಕಾ ಗೆಲುವಿನ ಅಂಚಿಗೆ ಬಂದಿತ್ತು. 4 ವಿಕೆಟ್‌ ನೆರವಿನಿಂದ ಕೊನೆಯ 13 ಎಸೆತಗಳಲ್ಲಿ 22 ತೆಗೆಯುವ ಸುಲಭ ಟಾರ್ಗೆಟ್‌ ಎದುರಿತ್ತು.

ಇನ್ನೇನು ದಕ್ಷಿಣ ಆಫ್ರಿಕಾ ಗೆದ್ದು ಫೈನಲ್​ ಪ್ರವೇಶಿಸಲಿದೆ ಎನ್ನುವಷ್ಟರಲ್ಲಿ ಇದೇ ಹೊತ್ತಿಗೆ ಸರಿಯಾಗಿ ಮಳೆ ಸುರಿಯಿತು. ಪಂದ್ಯ ಸ್ಥಗಿತಗೊಂಡಿತು. ಆಗ ಯಾರಿಗೂ ಮಳೆ ನಿಯಮದ ತಿಳಿವಳಿಕೆ ಇರಲಿಲ್ಲ. ದಕ್ಷಿಣ ಆಫ್ರಿಕಾ ಇಲ್ಲಿಂದಲೇ ಆಟ ಮುಂದುವರಿಸಿ ಗೆದ್ದು ಬರುತ್ತದೆಂದೇ ಎಲ್ಲರೂ ಭಾವಿಸಿದ್ದರು. ಆದರೆ ಅಲ್ಲಿ ಸಂಭವಿಸಿದ್ದೇ ಬೇರೆ. ಸಿಡ್ನಿ ಅಂಗಳದ ಸ್ಕೋರ್‌ಬೋರ್ಡ್​ನಲ್ಲಿ “ಒಂದು ಎಸೆತದಿಂದ 22 ರನ್‌’ ಎಂಬ ಮರು ನಿಗದಿತ ಗುರಿಯನ್ನು ಬಿತ್ತರಿಸಿದಾಗ ಎಲ್ಲರಿಗೂ ಅಚ್ಚರಿ ಕಾದಿತ್ತು.

ಇದನ್ನೂ ಓದಿ SA vs NED: ಹ್ಯಾಟ್ರಿಕ್​ ಗೆಲುವಿನ ನಿರೀಕ್ಷೆಯಲ್ಲಿ ಹರಿಣಗಳ ಪಡೆ; ಡಚ್ಚರು ಎದುರಾಳಿ

ಬ್ಯಾಟಿಂಗ್​ ಕಾಯ್ದುಕೊಂಡಿದ್ದ ಬ್ರಿಯಾನ್‌ ಮೆಕ್‌ಮಿಲನ್‌ (21) ಮತ್ತು ಡೇವಿಡ್‌ ರಿಚರ್ಡ್‌ಸನ್‌ (13) ಕಣ್ಣೀರು ಸುರಿಸುತ್ತಾ ತೀವ್ರ ಹತಾಶೆಯಿಂದ ವಾಪಸ್‌ ಕ್ರೀಸಿಗೆ ಬಂದರು. ಈ ದೃಶ್ಯಾವಳಿ ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ. ಇದೀಗ ಮತ್ತೆ ದಕ್ಷಿಣ ಆಫ್ರಿಕಾಕ್ಕೆ ಮಳೆಯ ಕಂಟಕ ಎದುರಾಗಿದೆ. ಒಂದು ಅಂಕ ಸಿಕ್ಕರೂ ಅಂತಿಮ ಹಂತಕ್ಕೇರುವಾಗ ಇದೇ ಅಂಕ ಮುಳುವಾಗಲೂಬಹುದು.

ಉಭಯ ತಂಣಗಳ ಆಡುವ ಬಳಗ

ನೆದರ್ಲೆಂರ್ಡ್ಸ್​: ವಿಕ್ರಮಜಿತ್ ಸಿಂಗ್, ಮ್ಯಾಕ್ಸ್ ಓಡೌಡ್, ಕಾಲಿನ್ ಅಕರ್ಮನ್, ಬಾಸ್ ಡಿ ಲೀಡೆ, ತೇಜ ನಿಡಮನೂರು, ಸ್ಕಾಟ್ ಎಡ್ವರ್ಡ್ಸ್, ಸೈಬ್ರಾಂಡ್ ಎಂಗಲ್‌ಬ್ರೆಕ್ಟ್, ಲೋಗನ್ ವ್ಯಾನ್ ಬೀಕ್, ರೋಲೋಫ್ ವ್ಯಾನ್ ಡೆರ್ ಮೆರ್ವೆ, ಆರ್ಯನ್ ದತ್, ಪಾಲ್ ವ್ಯಾನ್ ಮೀಕೆರೆನ್.

ದಕ್ಷಿಣ ಆಫ್ರಿಕಾ: ಕ್ವಿಂಟನ್ ಡಿ ಕಾಕ್, ಟೆಂಬಾ ಬವುಮಾ, ರಸ್ಸಿ ವಾನ್​ ಡರ್​ ಡಸ್ಸೆನ್, ಐಡೆನ್ ಮಾರ್ಕ್ರಮ್, ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಮಾರ್ಕೊ ಜಾನ್ಸೆನ್, ಕಗಿಸೊ ರಬಾಡ, ಕೇಶವ್ ಮಹಾರಾಜ್, ಲುಂಗಿ ಎನ್‌ಗಿಡಿ, ಜೆರಾಲ್ಡ್ ಕೊಯೆಟ್ಜಿ.

Exit mobile version