ವೆಲ್ಲಿಂಗ್ಟನ್: ಪ್ರವಾಸಿ ಶ್ರೀಲಂಕಾ ತಂಡದ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ನ್ಯೂಜಿಲ್ಯಾಂಡ್ ತಂಡದ ಕೇನ್ ವಿಲಿಯಮ್ಸನ್ ಅಬ್ಬರದ ಪ್ರದರ್ಶನ ನೀಡುತ್ತಿದ್ದಾರೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಅಮೋಘ ಶತಕ ಬಾರಿಸುವ ಜತೆಗೆ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟಿರುವ ಅವರು ಎರಡನೇ ಪಂದ್ಯದಲ್ಲಿ ಡಬಲ್ ಸೆಂಚುರಿ ಬಾರಿಸಿದ್ದಾರೆ. ಇದು ಟೆಸ್ಟ್ ಕ್ರಿಕೆಟ್ನಲ್ಲಿ ಅವರದ್ದು ಆರನೇ ಡಬಲ್ ಸೆಂಚುರಿ. ಈ ಮೂಲಕ ಅವರು ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಹಾಗೂ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರ ಸಾಧನೆಯನ್ನು ಸರಿಗಟ್ಟಿದ್ದಾರೆ. ಈ ಹಿರಿಯ ಆಟಗಾರರು ಟೆಸ್ಟ್ ಮಾದರಿಯಲ್ಲಿ ತಲಾ ಆರು ದ್ವಿ ಶತಕಗಳನ್ನು ಬಾರಿಸಿದ್ದಾರೆ.
ಸರಣಿಯ ಮೊದಲನೇ ಪಂದ್ಯದಲ್ಲಿ ಟೆಸ್ಟ್ ಪಂದ್ಯದಲ್ಲಿ ಎರಡನೇ ಇನಿಂಗ್ಸ್‌ನಲ್ಲಿ ಕೇನ್ ವಿಲಿಯಮ್ಸನ್ ನಿರ್ಣಾಯಕ ಶತಕ ಸಿಡಿಸಿದ್ದರು ಹ್ಯಾಗ್ಲೀ ಓವಲ್‌ನಲ್ಲಿ ನಡೆದಿದ್ದ ಮೊದಲ ಟೆಸ್ಟ್ ದ್ವಿತೀಯ ಇನಿಂಗ್ಸ್‌ನಲ್ಲಿ ವಿಲಿಯಮ್ಸನ್ ಅಜೇಯ 121 ರನ್ ಬಾರಿಸಿದ್ದರು. ಪಂದ್ಯ ಗೆಲ್ಲಲ್ಲು ಕೊನೇ ಎಸೆತಕ್ಕೆ ಬೇಕಾಗಿದ್ದ ಒಂದು ರನ್ಗೆ ಓಡಿ ವಿಜಯ ತಂದಿದ್ದರು. ನ್ಯೂಜಿಲ್ಯಾಂಡ್ ತಂಡದ ಗೆಲುವಿನಿಂದಾಗಿ ಭಾರತ ತಂಡ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನ ಫೈನಲ್ಗೆ ಅವಕಾಶ ಪಡೆದುಕೊಂಡಿತ್ತು.
ಕೇನ್ ವಿಲಿಮ್ಸನ್ ದ್ವಿಶತಕದ ಸಂಭ್ರಮದ ವಿಡಿಯೊ ಇಲ್ಲಿದೆ
ವೆಲ್ಲಿಂಗ್ಟನ್ನಲ್ಲಿ ನಡೆದ ಎರಡನೇ ಟೆಸ್ಟ್ನಲ್ಲಿ ಅತಿ ವೇಗದಲ್ಲಿ ದ್ವಿ ಶತಕ ಬಾರಿಸಿದ್ದಾರೆ. 296 ಎಸೆತಗಳನ್ನು ಎದುರಿಸಿದ ಅವರು, ಎರಡು ಭರ್ಜರಿ ಸಿಕ್ಸರ್ ಹಾಗೂ 23 ಮನಮೋಹಕ ಬೌಂಡರಿಗಳೊಂದಿಗೆ 215 ರನ್ ಗಳಿಸಿದ್ದಾರೆ. ಇದೇ ವೇಳೆ ಅವರು ನ್ಯೂಜಿಲೆಂಡ್ ಪರ ಎಂಟು ಸಾವಿರ ರನ್ ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಕೇನ್ ವಿಲಿಯಮ್ಸನ್ ಅವರು 94 ಟೆಸ್ಟ್‌ನ 164 ಇನಿಂಗ್ಸ್‌ಗಳಿಂದ 8124 ರನ್ ಗಳಿಸಿದ್ದಾರೆ. 54.89ರ ಸರಾಸರಿಯಲ್ಲಿ ರನ್ ಬಾರಿಸಿದ್ದು ಸಚಿನ್ ತೆಂಡೂಲ್ಕರ್ ಹಾಗೂ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ.
28 ಶತಕಗಳು
ವಿರಾಟ್ ಕೊಹ್ಲಿ ಬಾರ್ಡರ್ ಗವಾಸ್ಕರ್ ಟ್ರೋಫಿ ನಾಲ್ಕನೇ ಹಾಗೂ ಕೊನೇ ಪಂದ್ಯದಲ್ಲಿ 186 ರನ್ ಬಾರಿಸುವ ಮೂಲಕ ಟೆಸ್ಟ್ ಕ್ರಿಕೆಟ್ನ 28ನೇ ಶತಕ ಬಾರಿಸಿದ್ದರು. ಈ ದಾಖಲೆಯನ್ನು ಕೇನ್ ವಿಲಿಯಮ್ಸನ್ ಸರಿಗಟ್ಟಿದ್ದಾರೆ. ಅವರು ಶ್ರೀಲಂಕಾ ವಿರುದ್ಧ ದ್ವಿಶತಕ ಬಾರಿಸುವ ಮೂದಲು 28ನೇ ಟೆಸ್ಟ್ ಶತಕದ ಸಾಧನೆ ಮಾಡಿದ್ದಾರೆ.
ದ್ವಿಶತಕ ದಾಖಲೆ ಸರಿಗಟ್ಟಿದ ಕೇನ್
ವೃತ್ತಿ ಕ್ರಿಕೆಟ್ನ ಆರನೇ ಟೆಸ್ಟ್ ದ್ವಿಶತಕ ಬಾರಿಸಿದ ಕೇನ್ ವಿಲಿಯಮ್ಸನ್ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ರಿಕಿ ಪಾಂಟಿಂಗ್ ರವರ ದಾಖಲೆ ಸರಿಗಟ್ಟಿದರು. ಆಸ್ಟ್ರೇಲಿಯಾದ ರ್ ಬ್ರಾಡ್ಮನ್ 12 ದ್ವಿಶತಕ ಗಳಿಸಿ ಅಗ್ರ ಸ್ಥಾನದಲ್ಲಿದ್ದಾರೆ. ಶ್ರೀಲಂಕಾದ ಮಾಜಿ ನಾಯಕ ಕುಮಾರ ಸಂಗಾಕ್ಕರ (11), ವೆಸ್ಟ್ ಇಂಡೀಸ್ ಬ್ಯಾಟಿಂಗ್ ದಿಗ್ಗಜ ಬ್ರಿಯಾನ್ ಲಾರಾ (9), ಇಂಗ್ಲೆಂಡ್ ವಾಲಿ ಹ್ಯಾಮೆಂಡ್, ಭಾರತದ ವಿರಾಟ್ ಕೊಹ್ಲಿ, ಶ್ರೀಲಂಕಾದ ಮಹೇಲಾ ಜಯವರ್ಧನೆ ತಲಾ 7 ದ್ವಿ ಶತಕ ಗಳಿಸಿದ್ದಾರೆ.