ಮುಂಬಯಿ : ಭಾರತ ತಂಡ (Team India) ನ್ಯೂಜಿಲ್ಯಾಂಡ್ ವಿರುದ್ಧದ ಏಕ ದಿನ ಸರಣಿಯಲ್ಲಿ ಬ್ಯುಸಿಯಾಗಿದೆ. ಮೂರನೇ ಹಾಗೂ ಅಂತಿಮ ಪಂದ್ಯ ಬುಧವಾರ ಕ್ರೈಸ್ಟ್‌ಚರ್ಚ್‌ನಲ್ಲಿ ನಡೆಯಲಿದೆ. ಏತನ್ಮಧ್ಯೆ, ಟೀಮ್ ಇಂಡಿಯಾದಲ್ಲಿ ಬೌಲರ್‌ಗಳ ಕೊರತೆಯ ಕುರಿತ ಚರ್ಚೆಗಳು ಮುಂದುವರಿದಿದ್ದು, ಆರು ಅಥವಾ ಏಳು ಬೌಲರ್‌ಗಳ ಆಯ್ಕೆಯ ಕಷ್ಟವನ್ನು ವಿಶ್ಲೇಷಿಸಲಾಗುತ್ತಿದೆ. ಏತನ್ಮಧ್ಯೆ, ಭಾರತ ತಂಡದ ಮಾಜಿ ಆಟಗಾರ ಆಕಾಶ್ ಚೋಪ್ರಾ ಮೂಲ ಸಮಸ್ಯೆಯನ್ನು ಹುಡುಕಿದ್ದು ಅದಕ್ಕೊಂದು ಪರಿಹಾರ ಹೇಳಿದ್ದಾರೆ.
ಚೋಪ್ರಾ ಅವರ ಪ್ರಕಾರ ಭಾರತದ ಬ್ಯಾಟರ್‌ಗಳು ನೆಟ್‌ನಲ್ಲಿ ಬೌಲಿಂಗ್ ಮಾಡುವುದನ್ನೇ ಮರೆತಿದ್ದಾರೆ. ಹೀಗಾಗಿ ಅಗತ್ಯ ಸಂದರ್ಭದಲ್ಲಿ ಪ್ರಮುಖ ಬೌಲರ್‌ಗಳಿಗೆ ನೆರವಾಗಲು ಅವರಿಗೆ ಸಾಧ್ಯವಾಗುತ್ತಿಲ್ಲ. ಹಿಂದೆ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್ ಹಾಗೂ ಯುವರಾಜ್ ಸಿಂಗ್ ಅಗತ್ಯ ಸಂದರ್ಭಗಳಲ್ಲಿ ಬೌಲಿಂಗ್ ಮಾಡುತ್ತಿದ್ದರು. ಇದರಿಂದ ಬೌಲರ್‌ಗಳ ಆಯ್ಕೆ ಸಮಸ್ಯೆ ಎದುರಾಗುತ್ತಿರಲಿಲ್ಲ. ಆದರೀಗ ಅರಂಭಿಕ ಬ್ಯಾಟರ್‌ಗಳು ಯಾರೂ ಬೌಲಿಂಗ್ ಮಾಡಲು ಮುಂದಾಗುವುದಿಲ್ಲ. ಇದರಿಂದ ಆರನೇ ಬೌಲರ್ ಆಯ್ಕೆ ಸಮಸ್ಯೆಯಾಗುತ್ತಿದೆ ಎಂದು ತಮ್ಮ ಯೂಟ್ಯೂಚ್ ಚಾನೆಲ್‌ನಲ್ಲಿ ವಿವರಿಸಿದ್ದಾರೆ.
“ನಮ್ಮ ಬ್ಯಾಟರ್‌ಗಳು ಏಕೆ ಬೌಲ್ ಮಾಡುವುದಿಲ್ಲ? ಯುವರಾಜ್ ಸಿಂಗ್, ವೀರೇಂದ್ರ ಸೆಹ್ವಾಗ್ ಮತ್ತು ಸಚಿನ್ ತೆಂಡೂಲ್ಕರ್ ಬೌಲಿಂಗ್ ಮಾಡುತ್ತಿದ್ದರು ಆದರೆ ಈಗ ಯಾರೂ ಬೌಲಿಂಗ್ ಮಾಡುವುದಿಲ್ಲ. ಬ್ಯಾಟರ್‌ಗಳು ನೆಟ್ಸ್‌ನಲ್ಲಿ ಬೌಲಿಂಗ್ ಮಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸಿದ್ದಾರೆ, ಅವರು ಬ್ಯಾಟಿಂಗ್ ಅಥವಾ ಫೀಲ್ಡಿಂಗ್ ಮಾಡಿ ನಂತರ ಹೊರಡುತ್ತಾರೆ. ಆದ್ದರಿಂದ, ಇದು ದೊಡ್ಡ ಸಮಸ್ಯೆಯಾಗುತ್ತಿದೆ,” ಎಂದಿದ್ದಾರೆ ಚೋಪ್ರಾ.
ಭಾರತ ತಂಡವು ನಾಲ್ವರು ನೆಟ್ ಬೌಲರ್‌ಗಳನ್ನು ಎಲ್ಲಿಗೆ ಹೋದರೂ ಕರೆದುಕೊಂಡು ಹೋಗುತ್ತದೆ. ಅಲ್ಲದೆ, ಇಬ್ಬರು ನಂತರ ಇಬ್ಬರು ಸೈಡ್- ಆರ್ಮ್‌ನಿಂದ ಚೆಂಡೆಸೆಯುತ್ತಾರೆ.. ಹೀಗಾಗಿ ಬೌಲರ್‌ಗಳ ಬ್ಯಾಟಿಂಗ್ ಸುಧಾರಿಸುತ್ತಿದೆ. ಆದರೆ ಬ್ಯಾಟರ್‌ಗಳು ಬೌಲಿಂಗ್ ಮಾಡುವುದನ್ನು ಮರೆಯುತ್ತಾರೆ. ತಮ್ಮ ತಮ್ಮ ಕೆಲಸ ಮುಗಿಸಿ ಹೋಗುತ್ತಾರೆ. ಹೀಗಾಗಿ ಬ್ಯಾಟರ್‌ಗಳೂ ಬೌಲಿಂಗ್ ಮಾಡುವುದನ್ನು ಕಲಿಯಬೇಕು,” ಎಂಬುದಾಗಿ ಚೋಪ್ರಾ ಹೇಳಿದ್ದಾರೆ.
ಇದನ್ನೂ ಓದಿ | IND vs AUS | ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಸುಧಾರಣೆ, ಆರನೇ ಬೌಲರ್ ಆಯ್ಕೆ ಭಾರತದ ಸವಾಲು