Site icon Vistara News

Sachin Tendulkar: ಬಿಲ್ ಗೇಟ್ಸ್ ಭೇಟಿಯಾದ ಸಚಿನ್ ತೆಂಡೂಲ್ಕರ್

Sachin Tendulkar: Bill Gates met Sachin Tendulkar

Sachin Tendulkar: Bill Gates met Sachin Tendulkar

ಮುಂಬಯಿ: ಮೈಕ್ರೋಸಾಫ್ಟ್ ಸಂಸ್ಥಾಪಕ ಹಾಗೂ ವಿಶ್ವದ ಶ್ರೀಮಂತ ಉದ್ಯಮಿ ಬಿಲ್ ಗೇಟ್ಸ್(Bill Gates) ಅವರನ್ನು ಟೀಮ್​ ಇಂಡಿಯಾದ ಮಾಜಿ ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡೂಲ್ಕರ್(Sachin Tendulkar)​ ಭೇಟಿ ಮಾಡಿದ್ದಾರೆ. ಭಾರತ ಪ್ರವಾಸದಲ್ಲಿರುವ ಬಿಲ್ ಗೇಟ್ಸ್ ಅವರನ್ನು ಸಚಿನ್​ ಮುಂಬೈಯಲ್ಲಿ ಭೇಟಿಯಾಗಿದ್ದಾರೆ. ಈ ಫೋಟೊವನ್ನು ಸಚಿನ್​ ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಸಚಿನ್ ತೆಂಡೂಲ್ಕರ್ ಮತ್ತು ಅವರ ಪತ್ನಿ ಅಂಜಲಿ ಅವರು ಬಿಲ್ ಗೇಟ್ಸ್ ಅವರನ್ನು ಭೇಟಿ ಮಾಡಿ ಕೆಲ ಕಾಲ ಉಭಯ ಕುಶಲೋಪರಿ ನಡೆಸಿದರು. ಬಿಲ್ ಗೇಟ್ಸ್ ಅವರನ್ನು ಸಚಿನ್ ಭೇಟಿ ಮಾಡಿದ್ದರ ಉದ್ದೇಶವೆಂದರೆ, ಮಕ್ಕಳ ಆರೋಗ್ಯ ರಕ್ಷಣೆಗೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಗಳ ಬಗ್ಗೆ ಚರ್ಚೆ ಮಾಹಿತಿ ಪಡೆಯಲು ಎಂದು ತಿಳಿದುಬಂದಿದೆ.

ಇದನ್ನೂ ಓದಿ Sachin Tendulkar: ವಾಂಖೆಡೆ ಸ್ಟೇಡಿಯಂನಲ್ಲಿ ನಿರ್ಮಾಣವಾಗಲಿದೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಪ್ರತಿಮೆ!

“ನಾವೆಲ್ಲರೂ ಜೀವನಪೂರ್ತಿ ವಿದ್ಯಾರ್ಥಿಗಳು. ನಮ್ಮ ಫೌಂಡೇಶನ್ ಕೆಲಸ ಮಾಡುವ ಮಕ್ಕಳ ಆರೋಗ್ಯ ರಕ್ಷಣೆ ಸೇರಿದಂತೆ ಸಾಮಾಜಿಕ ಕಾರ್ಯದ ದೃಷ್ಟಿಕೋನಗಳನ್ನು ತಿಳಿದುಕೊಳ್ಳಲು ಅದ್ಭುತವಾದ ಕಲಿಕೆಯ ಅವಕಾಶವಾಗಿದೆ. ನಿಮ್ಮೊಂದಿಗಿನ ಭೇಟಿ ಮತ್ತು ಚರ್ಚೆ ಸಂತಸ ತಂದಿದೆ. ಧನ್ಯವಾದಗಳು ಬಿಲ್ ಗೇಟ್ಸ್,” ಎಂದು ಸಚಿನ್​ಬರೆದುಕೊಂಡಿದ್ದಾರೆ.

Exit mobile version