ದುಬೈ: ಕ್ರಿಕೆಟ್ ದೇವರು ಎಂದು ಕರೆಯಲ್ಪಡುವ ಸಚಿನ್ ತೆಂಡೂಲ್ಕರ್(Sachin Tendulkar Birthday) ಅವರಿಗೆ ಇಂದು 51ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಈ ವಿಶೇಷ ದಿನದಂದು ಐಸಿಸಿ(ICC), ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ (Artificial Intelligence) ಮೂಲಕ ಸಚಿನ್ ಅವರ ವಿಶೇಷ ವಿಡಿಯೊವೊಂದನ್ನು ಬಿಡುಗಡೆ ಮಾಡಿದೆ. ಈ ವಿಡಿಯೊ ಕಂಡ ಸಚಿನ್ ಅಭಿಮಾನಿಗಳು ಸಂತಸಗೊಂಡಿದ್ದಾರೆ.
ಈಗಿನ ಬೌಲರ್ಗಳಾದ ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್, ದಕ್ಷಿಣ ಆಫ್ರಿಕಾದ ಕಗಿಸೊ ರಬಾಡ, ಇಂಗ್ಲೆಂಡ್ನ ಜೋಫ್ರಾ ಆರ್ಚರ್, ಬಾಂಗ್ಲಾದೇಶದ ಮುಸ್ತಫಿಜುರ್ ರೆಹಮಾನ್ ಅವರ ವಿಶ್ವಕಪ್ ಟೂರ್ನಿಯ ಬೌಲಿಂಗ್ ಎಸೆತಗಳಿಗೆ ಸಚಿನ್ ಅವರು ಬೌಂಡರಿ ಬಾರಿಸುವಂತೆ ಐಸಿಸಿ ಎಐ ತಂತ್ರಜ್ಞಾನದ ಮೂಲಕ ವಿಡಿಯೊ ಮಾಡಿದೆ. ಸಚಿನ್ ಬ್ಯಾಟಿಂಗ್ ಕಂಡು ಅಭಿಮಾನಿಗಳು ಕಿರುಚುತ್ತಿರುವ ದೃಶ್ಯಗಳು ಕೂಡ ಈ ವಿಡಿಯೊದಲ್ಲಿ ಕಾಣಬಹುದಾಗಿದೆ. ಆಟಕ್ಕೆ ಹೊಂದಿಕೆಯಾಗುವ ಕಾಮೆಂಟರಿ ಕೂಡ ಮೂಡಿಬಂದಿದೆ.
We've all seen those trademark @sachin_rt shots – but we've not seen them like this.
— ICC (@ICC) April 24, 2021
Presenting Sachin Tendulkar, taking on Kagiso Rabada, Jofra Archer, Pat Cummins et al 😲 📺#HappyBirthdaySachin pic.twitter.com/USLwieRU98
51ನೇ ವರ್ಷದ ಹುಟ್ಟು ಹಬ್ಬವನ್ನು ತೆಂಡೂಲ್ಕರ್, ‘ಸಚಿನ್ ತೆಂಡೂಲ್ಕರ್ ಫೌಂಡೇಶನ್’ನ(sachin tendulkar foundation) ಮಕ್ಕಳೊಂದಿಗೆ ಆಚರಿಸಿದ್ದರು. ಇದರ ವಿಡಿಯೊವನ್ನು ಸಚಿನ್(Sachin Tendulkar) ತಮ್ಮ ಇನ್ಸ್ಟಾಗ್ರಾಮ್ ಮತ್ತು ಟ್ವಿಟರ್ ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ. ಸಚಿನ್ ಅವರು ತಮ್ಮ ಹುಟ್ಟು ಹಬ್ಬವನ್ನು ಈ ಫೌಂಡೇಶನ್ನ ಮಕ್ಕಳೊಂದಿದೆ ಕೆಲ ಕಾಲ ಫುಟ್ಬಾಲ್ ಆಡಿ, ಊಟ ಮಾಡುವ ಜತೆಗೆ ಕೇಕ್ ಕತ್ತರಿಸಿ ಆಚರಿಸಿದ್ದಾರೆ. ಬಳಿಕ ಮಕ್ಕಳಿಗೆ ವಿಶೇಷವಾಗಿ ಹಾರೈಸಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳುವಂತೆ ಕಿವಿ ಮಾತು ಹೇಳಿದ್ದಾರೆ.
ಸಚಿನ್ ಅವರು ‘ಸಚಿನ್ ತೆಂಡೂಲ್ಕರ್ ಫೌಂಡೇಶನ್’ ಎನ್ನುವ ಹೆಸರಿನ ಪ್ರತಿಷ್ಠಾನದ ಮೂಲಕ ಬಡ ಮಕ್ಕಳಿಗೆ ಶಿಕ್ಷಣ, ಕ್ರಿಡೆ ಮತ್ತು ವೈದ್ಯಕೀಯ ನೆರವನ್ನು ನೀಡುತ್ತಿದ್ದಾರೆ. ಸಮಾಜಮುಖಿ ಕಾರ್ಯವನ್ನು ಮಾಡುವ ಮೂಲಕ ಅನೇಕ ಬಡ ಮಕ್ಕಳ ಕನಸನ್ನು ನನಸು ಮಾಡುವ ಕಾರ್ಯ ಮಾಡುತ್ತಿದ್ದಾರೆ. ಈ ಪ್ರತಿಷ್ಠಾನವು ಮಕ್ಕಳಿಗೆ ಸಮಾನ ಅವಕಾಶವನ್ನು ನೀಡಲು ಮತ್ತು ಉತ್ತಮ ಜಗತ್ತನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ.
What a way to kick off my birthday week! I had so much fun playing football, sharing stories and cutting my birthday cake with these incredible girls who are supported by the Sachin Tendulkar Foundation. They were the first ones to wish me and it made my week truly special!… pic.twitter.com/G8Wlqy4XPf
— Sachin Tendulkar (@sachin_rt) April 24, 2024
ಕಳೆದ ವರ್ಷ ಸಚಿನ್ ಅವರು ತಮ್ಮ 50ನೇ ವರ್ಷದ ಜನ್ಮ ದಿನಾಚರಣೆಯನ್ನು ತಮ್ಮ ಕುಟುಂಬದೊಂದಿಗೆ ಗೋವಾದಲ್ಲಿ ಆಚರಿಸಿದ್ದರು. ಐಷಾರಾಮಿ ಜೀವನಶೈಲಿಗೆ ಹೆಸರುವಾಸಿಯಾದ ಸಚಿನ್ ಅವರು ತಮ್ಮ ಹುಟ್ಟು ಹಬ್ಬವನ್ನು ಮಾತ್ರ ಹಳ್ಳಿ ಸೊಗಡಿನಲ್ಲಿ ಆಚರಿಸಿದ್ದರು. ಪತ್ನಿ ಅಂಜಲಿ ಮತ್ತು ಮಗಳು ಸಾರಾ ತೆಂಡೂಲ್ಕರ್ ಅವರೊಂದಿಗೆ ಒಲೆಯ ಪಕ್ಕದಲ್ಲಿ ಕುಳಿತು ಸಚಿನ್ ಒಲೆ ಊದುತ್ತಿರುವ ಫೋಟೊವನ್ನು ಹಂಚಿಕೊಂಚಿಕೊಂಡಿದ್ದರು.
24 ವರ್ಷಗಳ ಕ್ರಿಕೆಟ್ ಬಾಳ್ವೆಯಲ್ಲಿ 664 ಪಂದ್ಯ, 34,357 ರನ್, 201 ವಿಕೆಟ್, 100 ಅಂತಾರಾಷ್ಟ್ರೀಯ ಶತಕ, 164 ಅರ್ಧ ಶತಕ, ಲೆಕ್ಕವಿಲ್ಲದಷ್ಟು ದಾಖಲೆಗಳ ಸರದಾರ, ದೇಶದ ಶ್ರೇಷ್ಠ ಗೌರವ ಭಾರತ ರತ್ನ, ಪದ್ಮ ಪ್ರಶಸ್ತಿಗಳ ಒಡೆಯ, ರಾಜೀವ್ ಗಾಂಧಿ ಖೇಲ್‌ರತ್ನ ಪ್ರಶಸ್ತಿಗಳಿಂದೆಲ್ಲ ಪುರಸ್ಕೃತರಾಗಿರುವ ಸಚಿನ್ ಸಾಧನೆ ನಿಜಕ್ಕೂ ಒಂದು ಅದ್ಭುತವೇ ಸರಿ. ಕ್ರಿಕೆಟ್ ಬಾಳ್ವೆಯ ಆರಂಭದಿಂದ ಹಿಡಿದು ಕಡೇಯ ದಿನದವರೆಗೂ ಯಾವುದೇ ವಿವಾದವಿಲ್ಲದೆ ಸವ್ಯಸಾಚಿಯಾಗಿದ್ದ ಸಚಿನ್ ಎಲ್ಲ ಕ್ರಿಕೆಟ್ ಆಟಗಾರರಿಗೂ ಸ್ಫೂರ್ತಿಯಾಗಿದ್ದಾರೆ.