ಮುಂಬಯಿ: ಅಂತಾರಾಷ್ಟ್ರೀಯ ಕ್ರಿಕೆಟಿಗರು ಬಳಸುವ ಬಹುತೇಕ ತಂತ್ರಗಳನ್ನು ದೇಸಿ ಕ್ರಿಕೆಟ್ ಆಟಗಾರರು ಬಳಸಿಕೊಳ್ಳುತ್ತಿದ್ದಾರೆ. ನಾನಾ ಆ್ಯಂಗಲ್ನಲ್ಲಿ ಬ್ಯಾಟಿಂಗ್ ಮಾಡುವುದನ್ನು ಬ್ಯಾಟರ್ಗಳು ಕಲಿತುಕೊಂಡಿದ್ದರೆ, ಫೀಲ್ಡಿಂಗ್ನಲ್ಲೂ ನಾನಾ ಆವಿಷ್ಕಾರಗಳನ್ನು ಮಾಡುತ್ತಿದ್ದಾರೆ. ಅದೇ ರೀತಿಯ ದೇಶಿಯ ಕ್ರಿಕೆಟ್ ಪಂದ್ಯವೊಂದರಲ್ಲಿ ಫೀಲ್ಡರ್ ಒಬ್ಬರು ಆಕ್ರೊಬಾಟಿಕ್ ರೀತಿಯಲ್ಲಿ ಚೆಂಡನ್ನು ಕಾಲಲ್ಲಿ ಒದ್ದು ಕ್ಯಾಚ್ ಹಿಡಿದ್ದು, ಅದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಅದನ್ನು ಗಮನಿಸಿದ ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ (Sachin Tendulkar) ಕೂಡ ಫೀಲ್ಡರ್ನ ಸಾಮರ್ಥ್ಯಕ್ಕೆ ಮೆಚ್ಚಿದ್ದಾರೆ.
ಬೌಂಡರಲಿ ಲೈನ್ನಲ್ಲಿದ್ದ ಪೀಲ್ಡರ್ ಒಬ್ಬ ಸಿಕ್ಸರ್ ಲೈನ್ ಕಡೆಗೆ ಹೋಗುತ್ತಿದ್ದ ಚೆಂಡನ್ನು ಜಿಗಿದು ಹಿಡಿಯುತ್ತಾರೆ. ಆದರೆ ನಿಯಂತ್ರಣ ಕಳೆದುಕೊಂಡ ಆತ ಬೌಂಡರಿ ಲೈನ್ ಕಡೆಗೆ ವಾಲುತ್ತಾನೆ. ತಕ್ಷಣ ಆತ ಚೆಂಡನ್ನು ಮೇಲಕ್ಕೆ ಎಸೆಯುತ್ತಾನೆ. ಆದರೂ ಚೆಂಡು ಬೌಂಡರಿ ಲೈನ್ ಹೊರಗೆ ಹೋಗುತ್ತದೆ. ತಕ್ಷಣ ಹೊರಗೆ ಹೋದ ಆತ ಫುಟ್ಬಾಲ್ ಶೈಲಿಯಲ್ಲಿ ಚೆಂಡನ್ನು ಕಾಲಿನಿಂದ ಬೌಂಡರಿ ಲೈನ್ನ ಒಳಗೆ ಒದಿಯುತ್ತಾನೆ. ಒಳಗಿದ್ದ ಮತ್ತೊಬ್ಬ ಫೀಲ್ಡರ್ ಚೆಂಡನ್ನು ಹಿಡಿಯುತ್ತಾನೆ. ಈ ಮೂಲಕ ಬ್ಯಾಟ್ಸ್ಮನ್ ಔಟ್ ಆಗುತ್ತಾನೆ.
ಫುಟ್ಬಾಲ್ ಗೊತ್ತಿರುವ ಆಟಗಾರನೊಬ್ಬ ಕ್ರಿಕೆಟ್ ಆಡುವಾಗ ಇಂಥದ್ದೆಲ್ಲ ನಡೆಯುತ್ತದೆ ಎಂಬುದಾಗಿ ಸಚಿನ್ ತೆಂಡೂಲ್ಕರ್ ಟ್ವೀಟ್ ಮಾಡುತ್ತಾರೆ. ಸಚಿನ್ ಅವರು ಈ ಹೇಳಿಕೆ ದೊಡ್ಡ ಮಟ್ಟದಲ್ಲಿ ವೈರಲ್ ಆಗುತ್ತದೆ.
ಇದನ್ನೂ ಓದಿ : Anand Mahindra: ನಟ ರಾಮ್ ಚರಣ್ ಜತೆ ‘ನಾಟು ನಾಟು’ ಹಾಡಿಗೆ ಹೆಜ್ಜೆ ಹಾಕಿದ ಆನಂದ್ ಮಹೀಂದ್ರಾ, ವಿಡಿಯೊ ವೈರಲ್
ಸಚಿನ್ ಅವರ ವಾದವನ್ನು ಎಲ್ಲರೂ ಒಪ್ಪುವುದಿಲ್ಲ. ಕೆಲವರು ಕ್ರಿಕೆಟ್ನಲ್ಲಿ ಬೌಂಡರಿ ಲೈನ್ಗಿಂತ ಹೊರಗೆ ಹೋಗಿ ಚೆಂಡನ್ನು ಮುಟ್ಟುವುದನ್ನು ತಪ್ಪಿಸಬೇಕು ಎಂದು ಅಭಿಪ್ರಾಯಪಡುತ್ತಾರೆ. ಒಂದು ಬಾರಿ ಬೌಂಡರಿ ಲೈನ್ಗಿಂತ ಹೊರಗೆ ಚೆಂಡು ಹೋಯಿತೆಂದರೆ ಅದನ್ನು ಸಿಕ್ಸರ್ ಎಂದೇ ಪರಿಗಣಿಸಬೇಕು ಎಂದು ಹಲವರು ಅಭಿಪ್ರಾಯಪಡುತ್ತಾರೆ.