Site icon Vistara News

Sachin Tendulkar | ಗ್ರಿಪ್‌ಗಾಗಿ ಸಚಿನ್‌ ಕ್ರಿಕೆಟ್ ಬ್ಯಾಟ್‌ ಕ್ಲೀನ್‌ ಮಾಡಿದ್ದು ಟ್ರೋಲ್‌ ಆಗಿದ್ದೇಕೆ?

Tendulkar

ಕಾನ್ಪುರ: ಕ್ರಿಕೆಟ್‌ ದೇವರು ಸಚಿನ್‌ ತೆಂಡೂಲ್ಕರ್‌ (Sachin Tendulkar) ಅವರು ರೋಡ್‌ ಸೇಫ್ಟಿ ವರ್ಲ್ಡ್‌ ಸಿರೀಸ್‌ (Road Safety World Series 2022)ನಲ್ಲಿ ಇಂಡಿಯಾ ಲೆಜೆಂಡ್ಸ್‌ (India Legends) ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಅಲ್ಲದೆ, ಬುಧವಾರ ಸಂಜೆ ನಡೆಯುವ ಪಂದ್ಯಕ್ಕೂ ಮುನ್ನ ಅವರು ಬ್ಯಾಟ್‌ ಹಿಡಿಕೆಯ ಗ್ರಿಪ್‌ಅನ್ನು ಹೇಗೆ ಹೆಚ್ಚಿಸಬಹುದು ಎಂಬುದರ ಕುರಿತು ವಿಡಿಯೊ ಮೂಲಕ ಸಲಹೆ ನೀಡಿದ್ದಾರೆ.

ಸಂಗೀತ ಆಲಿಸುತ್ತ, ಬ್ಯಾಟ್‌ನ ಹಿಡಿಕೆ ತೊಳೆಯುವ ವಿಡಿಯೊವನ್ನು ಸಚಿನ್‌ ತೆಂಡೂಲ್ಕರ್‌ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. “ಜೀವನದಲ್ಲಿ ಎಲ್ಲವೂ ನನಗೆ ಬ್ಯಾಟ್‌ನಿಂದಲೇ ದೊರೆತಿದೆ. ಹಾಗಾಗಿ ನಾನು ಇದರ ಕುರಿತು ಹೆಚ್ಚಿನ ಕಾಳಜಿ ವಹಿಸುತ್ತೇನೆ. ಸಾಬೂನಿನಿಂದ ಬ್ಯಾಟ್‌ನ ಹಿಡಿಕೆ ತೊಳೆದರೆ, ಅದರ ಗ್ರಿಪ್‌ ಹೆಚ್ಚುತ್ತದೆ” ಎಂದು ಸಚಿನ್‌ ಹೇಳಿದ್ದಾರೆ. ಆದರೆ, ಸಚಿನ್‌ ಅವರು ಬ್ಯಾಟ್‌ ತೊಳೆಯುವಾಗ ಟ್ಯಾಪ್‌ನಿಂದ ಹೆಚ್ಚು ನೀರು ಹರಿದ ಕಾರಣ ಒಂದಷ್ಟು ಜನ ಕುಹಕವಾಡಿದ್ದಾರೆ. ಟ್ರೋಲ್‌ ಸಹ ಮಾಡಿದ್ದಾರೆ.

“ಬ್ಯಾಟ್‌ನ ಹಿಡಿಕೆಗೆ ಸಾಬೂನು ಹಚ್ಚಿ ತೊಳೆಯುವುದನ್ನು ನನಗೆ ಯಾರೂ ಹೇಳಿಕೊಟ್ಟಿಲ್ಲ. ಹೀಗೆ ಮಾಡಿದರೆ ಗ್ರಿಪ್‌ ಹೆಚ್ಚುತ್ತದೆ ಎಂಬುದು ನನ್ನ ದೃಢ ನಂಬಿಕೆಯಾಗಿದೆ” ಎಂದು ಸಚಿನ್‌ ತಿಳಿಸಿದ್ದಾರೆ. ಸಚಿನ್‌ ನಾಯಕತ್ವದ ಇಂಡಿಯಾ ಲೆಜೆಂಡ್ಸ್‌ ತಂಡವು ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿದೆ.

ಇದನ್ನೂ ಓದಿ | Road Safety World Series | ಸಚಿನ್‌ ನೇತೃತ್ವದ ಭಾರತ ತಂಡಕ್ಕೆ ದ. ಆಫ್ರಿಕಾ ವಿರುದ್ಧ 61 ರನ್‌ ಜಯ

Exit mobile version