ಮುಂಬಯಿ: ವಿಶ್ವ ಕ್ರಿಕೆಟ್ ಜಗತ್ತು ಕಂಡ ಪ್ರಮುಖ ಕ್ರಿಕೆಟ್ ದಿಗ್ಗಜರಲ್ಲಿ ಸಚಿನ್ ತೆಂಡುಲ್ಕರ್(Sachin Tendulkar) ಕೂಡ ಒಬ್ಬರು. 24 ವರ್ಷ ಕ್ರಿಕೆಟ್ ಜಗತ್ತನ್ನು ಆಳಿದ ಸಚಿನ್ ಮೊದಲ ಬಾರಿ ಅಂತಾರಾಷ್ಟ್ರೀಯ ಕ್ರಿಕೆಟ್ ಪದಾರ್ಪಣೆ ಮಾಡಿದ್ದು ಮತ್ತು ಕ್ರಿಕೆಟ್ಗೆ ವಿದಾಯ ಹೇಳಿದ್ದು ಇದೇ ದಿನ(ನವೆಂಬರ್ 15) ಎಂಬುವುದು ವಿಶೇಷ.
16 ವಯಸ್ಸಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಸಚಿನ್ ಎಲ್ಲ ಕ್ರಿಕೆಟ್ ವೇಗಿ ದಿಗ್ಗಜರಿಗೂ ಕಾಡಿದ್ದಾರೆ. 5 ಅಡಿ ಎತ್ತರದ ಸಚಿನ್ ಬ್ಯಾಟ್ ಹಿಡಿದು ಮೈದಾನಕ್ಕೆ ಬಂದರೆ ಎದುರಾಳಿ ತಂಡಗಳಿಗೆ ನಡುಕ ಗ್ಯಾರಂಟಿ ಎಂಬಂತಿತ್ತು ಅವರ ಬ್ಯಾಟಿಂಗ್ ಶೈಲಿ. ಕ್ರಿಕೆಟ್ ಜಗತ್ತಿಗೆ ಸ್ಟೈಲೀಶ್ ಬ್ಯಾಟಿಂಗ್ ತೋರಿಸಿಕೊಟ್ಟ ಆಟಗಾರನೆಂದರೆ ಅದು ಸಚಿನ್. ಅವರು ಬಾರಿಸುತ್ತಿದ್ದ ಕವರ್ಡ್ರೈವ್ ಇಂದಿಗೂ ಯಾವ ಕ್ರಿಕೆಟಿಗನಿಂದಲೂ ಬಾರಿಸಲು ಅಸಾಧ್ಯ ಎಂದರೂ ತಪ್ಪಾಗಲಾರದು.
ಸಚಿನ್ ತೆಂಡುಲ್ಕರ್ 1989ರಲ್ಲಿ ಕ್ರಿಕೆಟ್ ಪದಾರ್ಪಣೆ ಮಾಡಿದರು. ವಿಶೇಷವೆಂದರೆ ಭಾರತದ ಬದ್ಧ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಸಚಿನ್ ಮೊದಲ ಪಂದ್ಯವನ್ನಾಡಿದರು. ಅದು ಕೂಟ ಪಾಕ್ ನೆಲದ ಕರಾಚಿಯಲ್ಲಿ. ಇಲ್ಲಿಂದ ಆರಂಭವಾದ ಸಚಿನ್ ಕ್ರಿಕೆಟ್ ಜರ್ನಿ 2013ರಲ್ಲಿ ಕೊನೆಗೊಂಡಿತು.
ಭಾರತ ಕ್ರಿಕೆಟ್ ತಂಡದ ದಿಗ್ಗಜ ಸಚಿನ್ ತೆಂಡುಲ್ಕರ್ ಅವರ ಕೆಲ ಪ್ರಮುಖ ಸಾಧನೆ ಈ ಕೆಳಗಿನಂತಿವೆ
1. ಏಕ ದಿನ ಕ್ರಿಕೆಟ್ನಲ್ಲಿ ಮೊದಲ ದ್ವಿಶತಕ ಸಿಡಿದ ಕ್ರಿಕೆಟಿಗ (ಅಜೇಯ 200)
2. ಕ್ರೀಡಾ ಕ್ಷೇತ್ರದಲ್ಲಿ ದೇಶದ ಅತ್ಯುನ್ನತ ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಆಟಗಾರ
3. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಒಟ್ಟು 100 ಶತಕ ಸಿಡಿಸಿದ ವಿಶ್ವದ ಏಕೈಕ ಕ್ರಿಕೆಟಿಗ (ಏಕ ದಿನ 49, ಟೆಸ್ಟ್ 51)
4. ಇಂಗ್ಲೆಂಡ್ ವಿರುದ್ಧ ಅಜೇಯ 119 ರನ್ ಗಳಿಸಿ ಮೊದಲ ಶತಕ ಬಾರಿಸಿದರು.
5. ಸಚಿನ್ ಭಾರತ ಪರ ಏಕೈಕ ಟಿ20 ಪಂದ್ಯ ಆಡಿದ್ದಾರೆ.
6. ಭಾರತ ಪರ 463 ಏಕ ದಿನ, 200 ಟೆಸ್ಟ್ ಪಂದ್ಯಗಳನ್ನಾಡಿದ ಸಾಧನೆ ಮಾಡುವ ಮೂಲಕ ತಂಡವನ್ನು ಅತಿ ಹೆಚ್ಚು ಬಾರಿ ಪ್ರತಿನಿಧಿಸಿದ ಏಕೈಕ ಆಟಗಾರ ಎಂಬ ಹಿರಿಮೆಯೂ ಅವರದ್ದಾಗಿದೆ.
ಹೀಗೆ ಹಲವಾರು ಸಾಧನೆ ಮೂಲಕ ಕ್ರಿಕೆಟ್ ಜಗತ್ತನ್ನು ಆಳಿದ ಸಚಿನ್ ತೆಂಡುಲ್ಕರ್ ಕ್ರೀಡಾ ಲೋಕದ ಅಜಾತು ಶತ್ರು ಎಂಬ ಖ್ಯಾತಿಯನ್ನು ಪಡೆದಿದ್ದಾರೆ.
ಇದನ್ನೂ ಓದಿ | IND VS NZ | ಭಾರತ ವಿರುದ್ಧದ ತವರಿನ ಟಿ20, ಏಕದಿನ ಸರಣಿಗೆ ನ್ಯೂಜಿಲೆಂಡ್ ತಂಡ ಪ್ರಕಟ