Site icon Vistara News

WTC 2023 : ಭಾರತ ವಿಶ್ವ ಟೆಸ್ಟ್​ ಚಾಂಪಿಯನ್​​ಷಿಪ್​ ಟ್ರೋಫಿ ಗೆಲ್ಲುತ್ತದೆ ಎಂದು ಭವಿಷ್ಯ ನುಡಿದ ಸಚಿನ್​ ತೆಂಡೂಲ್ಕರ್​

Sachin Tendulkar on India's odds of winning WTC 2023 final

#image_title

ಮುಂಬಯಿ: ಜೂನ್​ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ನ ಫೈನಲ್​ ಪಂದ್ಯದಲ್ಲಿ ಭಾರತ ತಂಡಕ್ಕೆ ಗೆಲ್ಲುವ ಅವಕಾಶ ಹೆಚ್ಚಿದೆ ಎಂದು ಭಾರತದ ಕ್ರಿಕೆಟ್ ದಿಗ್ಗಜ ಸಚಿನ್​ ತೆಂಡೂಲ್ಕರ್​ ಅವರು ಹೇಳಿದ್ದಾರೆ. ಇಂಡಿಯಾ ಟುಡೆ ಕಾನ್​ಕ್ಲೇವ್​​ನಲ್ಲಿ ಮಾತನಾಡಿದ ಅವರು, ಭಾರತ ತಂಡ ಸಮತೋಲಿತವಾಗಿದೆ. ಹೀಗಾಗಿ ಗೆಲುವಿನ ಅವಕಾಶಗಳು ಹೆಚ್ಚಿವೆ ಎಂದು ಹೇಳಿದರು.

ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಭಾರತ ತಂಡ 2-1 ಅಂತರದಿಂದ ಮುನ್ನಡೆ ಗಳಿಸಿತ್ತು. ಈ ಮೂಲಕ ತಂಡದ ಡಬ್ಲ್ಟುಟಿಸಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆಯುವ ಮೂಲಕ ಫೈನಲ್​ಗೆ ಏರಿತ್ತು. ಫೈನಲ್ ಪಂದ್ಯ ಕೆನಿಂಗ್ಟನ್​ ಓವಲ್​ನಲ್ಲಿ ಜೂನ್​ 7ರಿಂದ 11ರವರೆಗೆ ನಿಗದಿಯಾಗಲಿದೆ. ತಟಸ್ಥ ತಾಣದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಭಾರತ ಗೆದ್ದರೆ ಕಳೆದ ಆವೃತ್ತಿಯಲ್ಲಿ ನ್ಯೂಜಿಲ್ಯಾಂಡ್​ ವಿರುದ್ದದ ಸರಣಿಯಲ್ಲಿನ ಸೋಲಿನ ಕಹಿಯನ್ನು ಮರೆಯಲು ಸಾಧ್ಯವಿದೆ.

ಈ ಕುರಿತು ಮಾತನಾಡಿದ ಅವರು, ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಭಾರತ ತಂಡ ಅತ್ಯುತ್ತಮವಾಗಿ ಆಡಿದೆ. ನಮ್ಮದು ಸಮತೋಲಿತ ಆಟ ಆಡಿದ್ದೇವೆ. ಹಾಗಾಗಿ ಇಂಗ್ಲೆಂಡ್​ನ ಪಿಚ್​ನ ಪರಿಸ್ಥಿತಿಗೆ ಅನುಗುಣವಾಗಿ ಅತ್ಯುತ್ತಮ ತಂಡವನ್ನು ಆಯ್ಕೆ ಮಾಡುವುದು ನಮ್ಮ ಗುರಿಯಾಗಿದೆ ಎಂದು ಹೇಳಿದರು.

ಇದನ್ನೂ ಓದಿ : IND VS AUS: ಸಚಿನ್​ ತೆಂಡೂಲ್ಕರ್​ ದಾಖಲೆ ಮುರಿದ ವಿರಾಟ್​ ಕೊಹ್ಲಿ; ಏನದು?

ವಿಶ್ವ ಕಪ್​ ಫೈನಲ್​ನಲ್ಲಿ ಅವರು ಸಮತೋಲಿತ ತಂಡವನ್ನು ಕಟ್ಟುವುದು ಸವಾಲಾಗಿದೆ. ಪ್ರಮುಖವಾಗಿ ಹೆಚ್ಚುವರಿ ಸ್ಪಿನ್ನರ್​ ಸೇವೆಯನ್ನು ಬಳಸುವುದು ಸುಲಭವಲ್ಲ. ಭಾರತಕ್ಕೆ ಈ ವಿಚಾರದಲ್ಲಿ ಹೆಚ್ಚಿನ ಅನುಕೂಲವಿದೆ. ಆದರೆ, ಆಸ್ಟ್ರೇಲಿಯಾ ತಂಡಕ್ಕೆ ತೊಂದರೆ ಹೆಚ್ಚು ಎಂದು ಅವರು ಹೇಳಿದ್ದಾರೆ.

ಬಿಸಿಸಿಐ ಅಧ್ಯಕ್ಷರಾಗುತ್ತಾರಾ ಸಚಿನ್​?

ಇದೇ ಕಾರ್ಯಕ್ರಮದಲ್ಲಿ ಬಿಸಿಸಿಐನ ಮುಂದಿನ ಅಧ್ಯಕ್ಷರಾಗುವ ಕುರಿತು ಸಚಿನ್ ತೆಂಡೂಲ್ಕರ್ ಅವರು ನೀಡಿದ ಪ್ರತಿಕ್ರಿಯೆಯೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗಿದೆ.

ಇಂಡಿಯಾ ಟುಡೇ ನಡೆಸಿದ ಸಂದರ್ಶನವೊಂದರಲ್ಲಿ ಸಚಿನ್​ ಅವರಿಗೆ ಬಿಸಿಸಿಐನ ಮುಂದಿನ ಅಧ್ಯಕ್ಷರಾಗುವ ಕುರಿತು ಪ್ರಶ್ನೆ ಕೇಳಲಾಗಿದೆ. ಇದಕ್ಕೆ ನಗುತ್ತಲೇ ಉತ್ತರ ನೀಡಿದ ಸಚಿನ್​, “ನಾನು ರೋಜರ್ ಬಿನ್ನಿ ಮತ್ತು ಸೌರವ್ ಗಂಗೂಲಿ(Sourav Ganguly) ಅವರಂತೆ ವೇಗವಾಗಿ ಬೌಲಿಂಗ್ ನಡೆಸುವುದಿಲ್ಲ. ಗಂಗೂಲಿ ಅವರು ಗಂಟೆಗೆ 140 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುವ ಬಗ್ಗೆ ನನ್ನ ಬಳಿ ಮಾತನಾಡುತ್ತಿದ್ದರು. ಆದರೆ ಅವರಿಗೆ ಬೆನ್ನುನೋವು ಕಾಣಿಸಿಕೊಂಡಿತು. ನಾನು ಗಂಟೆಗೆ 140 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುವುದಿಲ್ಲ” ಎಂದು ತಲೆಗೆ ಹುಳ ಬಿಟ್ಟಂತೆ ಉತ್ತರಿಸಿದ್ದಾರೆ.

ಸಚಿನ್​ ಅವರ ಈ ಉತ್ತರ ಕೇಳಿದ ಸಂದರ್ಶಕ ಏನೂ ತಿಳಿಯದೆ ಒಂದು ಕ್ಷಣ ಮೌನವಾಗಿದ್ದರು. ಬಳಿಕ ಕ್ರಿಕೆಟ್​ಗೆ ಸಂಬಂಧಿಸಿದ ಬೇರೆ ಪ್ರಶ್ನೆಗಳನ್ನು ಕೇಳಿದ್ದಾರೆ. ಕೊನೆಗೂ ಸಚಿನ್​ ಹೇಳಿದ ಉತ್ತರ ಮಾತ್ರ ಬಿಡಿಸಲಾಗದ ಒಗಟಿನಂತೆ ಉಳಿದಿದೆ.

Exit mobile version