Site icon Vistara News

Sachin Tendulkar: ಹೋಳಿ ಹಬ್ಬ ಆಚರಿಸಿದ ಸಚಿನ್​ ತೆಂಡೂಲ್ಕರ್; ಫೋಟೊ ವೈರಲ್​

Sachin Tendulkar: Sachin Tendulkar celebrated Holi; The photo went viral

Sachin Tendulkar: Sachin Tendulkar celebrated Holi; The photo went viral

ಮುಂಬಯಿ: ದೇಶದೆಲ್ಲೆಡೆ ಹೋಳಿ ಹಬ್ಬದ(Holi Festival) ಸಂಭ್ರಮ ಆಚರಿಸಲಾಗುತ್ತಿದೆ. ಕೆಲವೆಡೆ ಇಂದು, ನಾಳೆ ಹೋಳಿ ಹಬ್ಬದ ಸಂಭ್ರಮ ಅದ್ಧೂರಿಯಾಗಿ ನೆರವೇರಲಿದೆ. ಟೀಮ್​ ಇಂಡಿಯಾದ ಮಾಜಿ ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡೂಲ್ಕರ್(Sachin Tendulkar)​ ಅವರು ಹೋಳಿ ಹಬ್ಬ ಆಚರಿಸಿದ ಫೋಟೊವನ್ನು ಟ್ವಿಟರ್​ನಲ್ಲಿ ಹಂಚಿಕೊಂಡು ಎಲ್ಲರಿಗೂ ಶುಭ ಕೋರಿದ್ದಾರೆ.

ಬಣ್ಣದೋಕುಳಿಯಲ್ಲಿ ಮಿಂದೆದ್ದ ಫೋಟೊವನ್ನು ಸಚಿನ್​ ತೆಂಡೂಲ್ಕರ್​ ಅವರು ತಮ್ಮ ಅಧಿಕೃತ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಇದೇ ವೇಳೆ ಅವರು ತಮ್ಮ ಪ್ಲೇಟ್​ನಲ್ಲಿರುವ ತಿಂಡಿಯನ್ನು ಊಹಿಸಬಹುದೇ ಎಂದು ಅಭಿಮಾನಿಗಳಿಗೆ ಪ್ರಶ್ನೆ ಮಾಡಿದ್ದಾರೆ.

ಹೋಳಿ ಬಣ್ಣದಲ್ಲಿ ಕಂಗೊಳಿಸಿದ ಸಚಿನ್​ ಅವರ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಹಲವು ಅಭಿಮಾನಿಗಳು ಸಚಿನ್​ ಅವರಿಗೂ ಟ್ವೀಟ್​ ಮೂಲಕ ಹೋಳಿ ಹಬ್ಬದ ಶುಭಾಶಯ ಕೋರಿದ್ದಾರೆ. ದೇಶಾದ್ಯಂತ ಹೋಳಿ ಆಚರಿಸಿದರೂ ಉತ್ತರ ಭಾರತದಲ್ಲಿ ಈ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

Exit mobile version