Site icon Vistara News

Sachin Tendulkar: ಗೋವಾದಲ್ಲಿ ‘ದಿಲ್ ಚಾಹ್ತಾ ಹೈ’ ಎಂದ ಸಚಿನ್​ ತೆಂಡೂಲ್ಕರ್​

Sachin Tendulkar: Sachin Tendulkar said 'Dil Chahta Hai' in Goa

Sachin Tendulkar: Sachin Tendulkar said 'Dil Chahta Hai' in Goa

ಗೋವಾ: ಟೀಮ್​ ಇಂಡಿಯಾದ ಮಾಜಿ ಆಟಗಾರರಾದ ಸಚಿನ್​ ತೆಂಡೂಲ್ಕರ್​, ​ಅನಿಲ್‌ ಕುಂಬ್ಳೆ ಮತ್ತು ಯುವರಾಜ್​ ಸಿಂಗ್​ ಗೋವಾ ಪ್ರವಾಸದಲ್ಲಿದ್ದಾರೆ. ಈ ಮೂವರು ದಿಗ್ಗಜ ಆಟಗಾರರು ಬೀಚ್​ ಒಂದರ ಬಳಿ ಸೆಲ್ಫಿ ತೆಗೆದ ಫೋಟೊವನ್ನು ಸಚಿನ್​ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಗೋವಾದ ಬಿಚ್​ ಬದಿಯಲ್ಲಿ ಸಚಿನ್ ತೆಂಡೂಲ್ಕರ್ ಅವರು ಯುವರಾಜ್ ಸಿಂಗ್ ಮತ್ತು ಅನಿಲ್ ಕುಂಬ್ಳೆ ಅವರೊಂದಿಗಿನ ಚಿತ್ರವನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡು ‘ದಿಲ್ ಚಾಹ್ತಾ ಹೈ’ ಮರುಸೃಷ್ಟಿಯಾಗಿದೆ ಎಂದು ಬರೆದುಕೊಂಡಿದ್ದಾರೆ. 2001 ರಲ್ಲಿ ತೆರೆಕಂಡ ‘ದಿಲ್ ಚಾಹ್ತಾ ಹೈ’ ಹಿಂದಿ ಸಿನೆಮಾದಲ್ಲಿ ನಲ್ಲಿ ಅಮೀರ್ ಖಾನ್, ಅಕ್ಷಯ್ ಖನ್ನಾ ಮತ್ತು ಸೈಫ್ ಅಲಿ ಖಾನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು.

ಇದನ್ನೂ ಓದಿ Sachin Tendulkar: ಶೇನ್​ ವಾರ್ನ್​ ಮೊದಲ ಪುಣ್ಯಸ್ಮರಣೆಗೆ ಭಾವನಾತ್ಮಕ ಪತ್ರ ಬರೆದ ಸಚಿನ್​ ತೆಂಡೂಲ್ಕರ್​

ಇದೀಗ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ತಮ್ಮ ಸ್ನೇಹಿತರು ಮತ್ತು ಮಾಜಿ ಕ್ರಿಕೆಟಿಗರಾದ ಅನಿಲ್ ಕುಂಬ್ಳೆ ಮತ್ತು ಯುವರಾಜ್ ಸಿಂಗ್ ಅವರನ್ನು ಭೇಟಿಯಾದ ಫೋಟೊವನ್ನು ಹಂಚಿಕೊಂಡು, ‘ದಿಲ್ ಚಾಹ್ತಾ ಹೈ’ ಇದರಲ್ಲಿ ಯಾರು ‘ಆಕಾಶ್, ಸಮೀರ್ ಮತ್ತು ಸಿದ್’ ಎಂದು ಭಾವಿಸು‌ವಿರಿ ಎಂಬುದಾಗಿ ತಮ್ಮ ಅಭಿಮಾನಿಗಳಿಗೆ ಪ್ರಶ್ನಿಸಿದ್ದಾರೆ. ಸಚಿನ್​ ಶೇರ್​ ಮಾಡಿರುವ ಈ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Exit mobile version