Site icon Vistara News

Sachin Tendulkar: ಸಫಾರಿ ವೇಳೆ ಮೂರನೇ ತಲೆ ಮಾರಿನ ಹುಲಿಯನ್ನು ತೋರಿಸಿದ ಸಚಿನ್​ ತೆಂಡೂಲ್ಕರ್​

Sachin Tendulkar In Tadoba Andhari Tiger Reserve

ಮುಂಬಯಿ: ರಾಷ್ಟ್ರೀಯ ಪ್ರವಾಸೋದ್ಯಮ ದಿನದಂದು(National Tourism Day) ಟೀಮ್​ ಇಂಡಿಯಾದ(Team India) ಮಾಜಿ ಕ್ರಿಕೆಟಿಗ ಸಚಿನ್​ ತೆಂಡೂಲ್ಕರ್(Sachin Tendulkar)​ ಅವರು ಮಹಾರಾಷ್ಟ್ರದ ಅತಿದೊಡ್ಡ ಹುಲಿ ಸಂರಕ್ಷಿತ ಪ್ರದೇಶವಾದ ತಡೋಬಾ(Tadoba) ರಾಷ್ಟ್ರೀಯ ಉದ್ಯಾನವನದಲ್ಲಿ(Tadoba-Andhari Tiger Reserve) ಸಫಾರಿ ಮಾಡಿದ್ದಾರೆ. ಜತೆಗೆ ಭಾರತದ ಪ್ರವಾಸೋದ್ಯಮದ ಬಗ್ಗೆಯೂ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಸಚಿನ್​ ತೆಂಡೂಲ್ಕರ್​ ಅವರು ತಡೋಬಾ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿ ಮಾಡುವ ವಿಡಿಯೊವನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. “ಘರ್ಜನೆಯೊಂದಿಗೆ ರಾಷ್ಟ್ರೀಯ ಪ್ರವಾಸೋದ್ಯಮ ದಿನವನ್ನು ಆಚರಿಸಲಾಗುತ್ತಿದೆ!. ತಡೋಬಾದಲ್ಲಿ, ನಾನು 3 ತಲೆಮಾರುಗಳ ಹುಲಿಗಳನ್ನು ನೋಡಿದ್ದೇನೆ. ಜುನಾಬಾಯಿ, ಅವಳ ಮರಿ ವೀರಾ, ಮತ್ತು ಮೀರಾನ ಮರಿಗಳು. ಇದೊಂದು ಮರೆಯಲಾಗದ ಅನುಭವ!. ಸಮುದಾಯದ ಭಾಗವಹಿಸುವಿಕೆ ಮತ್ತು ಜವಾಬ್ದಾರಿಯುತ ಪ್ರವಾಸೋದ್ಯಮದೊಂದಿಗೆ, ಭಾರತದಲ್ಲಿ ಅನ್ವೇಷಿಸಲು ಹಲವು ಸ್ಥಳಗಳಿವೆ” ಎಂದು ಬರೆದುಕೊಂಡಿದ್ದಾರೆ.

ಪ್ರತೀವರ್ಷ ಒಂದೊಂದು ಧ್ಯೇಯ ವಾಕ್ಯದೊಡನೆ ರಾಷ್ಟ್ರೀಯ ಪ್ರವಾಸೋದ್ಯಮ ದಿನವನ್ನು ಆಚರಿಸಿಕೊಂಡು ಬರಲಾಗಿದೆ. ಈ ಧ್ಯೇಯವನ್ನು ಪ್ರಧಾನವಾಗಿರಿಸಿಕೊಂಡು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜನರಲ್ಲಿ ಪ್ರವಾಸಿ ತಾಣಗಳನ್ನು ಪರಿಚಯಿಸಿಕೊಡುವ ಮತ್ತು ಅಲ್ಲಿನ ಮಹತ್ವಗಳ ಬಗೆಗೆ ಅರಿವು ಮೂಡಿಸುವ ಕಾರ್ಯವನ್ನು ಮಾಡುತ್ತ ಬರಲಾಗಿದೆ. ಈ ಮೂಲಕ ದೇಶದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಉತ್ತೇಜನ ನೀಡುತ್ತ ಬರಲಾಗಿದೆ. ಈ ಬಾರಿ ‘ಸುಸ್ಥಿರ ಪ್ರಯಾಣ, ಕಾಲಾತೀತ ನೆನಪು’ ಎಂಬ ಧ್ಯೇಯ ದೊಂದಿಗೆ ಪ್ರವಾಸೋದ್ಯಮ ದಿನವನ್ನು ಆಚರಿಸಲಾಗುತ್ತಿದೆ.

ಇದನ್ನೂ ಓದಿ Sachin Tendulkar : ಸಾರಾ ಬಳಿಕ ಇದೀಗ ಸಚಿನ್​​​ಗೂ ಡೀಪ್​ಫೇಕ್​​ ​ ವಿಡಿಯೊ ಕಾಟ

ದೇಶೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಪ್ರವಾಸೋದ್ಯಮ ವಲಯ ಗುರುತಿಸಿಕೊಳ್ಳುವಂತಾಗಲು ಸರಕಾರದಿಂದ ಇನ್ನಷ್ಟು ಉತ್ತೇಜನ, ಪ್ರೋತ್ಸಾಹ ಲಭಿಸಬೇಕಿದೆ. ನಮ್ಮಲ್ಲಿರುವ ಪ್ರವಾಸಿ ತಾಣಗಳಿಗೆ ಒಂದಿಷ್ಟು ಕಾಯಕಲ್ಪದ ಆವಶ್ಯಕತೆ ಇದೆ. ಮೂಲಸೌಕರ್ಯದಿಂದ ಹಿಡಿದು ಇಂದಿನ ಅತ್ಯಾಧುನಿಕ ತಂತ್ರಜ್ಞಾನದ ಸೌಲಭ್ಯ, ವ್ಯವಸ್ಥೆಗಳನ್ನು ನಮ್ಮ ಪ್ರವಾಸಿ ತಾಣಗಳು ಹೊಂದಬೇಕಿದೆ. ಕೆಲ ದಿನಗಳ ಹಿಂದೆ ಲಕ್ಷದ್ವೀಪಕ್ಕೆ ತೆರಳಿದ್ದ ಪ್ರಧಾನಿ ನರೇಂದ್ರ ಮೋದಿ (Narendra Modi), ಅಲ್ಲಿನ ಸೌಂದರ್ಯ, ಬೀಚ್‌ಗಳು, ಶಾಂತಿಯುತ ವಾತಾವರಣದ ಬಗ್ಗೆ ಮಚ್ಚುಗೆ ವ್ಯಕ್ತಪಡಿಸಿದ್ದರು. ಹಾಗೆಯೇ, ದೇಶದ ಜನ ಪ್ರಮುಖ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಲಕ್ಷದ್ವೀಪವನ್ನು (Lakshadweep) ಸೇರಿಸಿಕೊಂಡು, ಇಲ್ಲಿಗೆ ಬರಬೇಕು ಎಂದು ಕರೆ ನೀಡಿದ್ದರು.

ಅಭಿವೃದ್ಧಿಯ ನೆಪದಲ್ಲಿ ಪ್ರವಾಸಿ ತಾಣಗಳ ಸಹಜ ಸೌಂದರ್ಯಕ್ಕೆ, ಸ್ಥಳೀಯ ಸಂಸ್ಕೃತಿ, ಆಚಾರ-ವಿಚಾರಗಳಿಗೆ ಧಕ್ಕೆಯಾಗದಂತೆ ಎಚ್ಚರಿಕೆ ವಹಿಸುವುದು ಬಲುಮುಖ್ಯ. ಇದೇ ವೇಳೆ ಪ್ರವಾಸಿಗರು ಕೂಡ ಇವೆಲ್ಲದರತ್ತ ಹೆಚ್ಚಿನ ಗಮನ ಹರಿಸಿ, ಪ್ರವಾಸಿ ತಾಣಗಳ ಪರಿಸರ ಹಾನಿಯಾಗದಂತೆ ಎಚ್ಚರ ವಹಿಸಬೇಕಾದ ಜವಾಬ್ದಾರಿಯೂ ನಮ್ಮಲ್ಲೆರ ಮೇಲಿದೆ.

Exit mobile version