Site icon Vistara News

IND vs PAK: ಶೋಯೆಬ್ ಅಖ್ತರ್ ಕಾಲೆಳೆದ ಸಚಿನ್​ ತೆಂಡೂಲ್ಕರ್-ವೀರೇಂದ್ರ ಸೆಹವಾಗ್

sachin tendulkar, shoaib akhtar and virender sehwag

ಮುಂಬಯಿ: ಪಾಕಿಸ್ತಾನ(IND vs PAK) ವಿರುದ್ಧ ಭಾರತ 7 ವಿಕೆಟ್​ಗಳ​ ಗೆಲುವು ಸಾಧಿಸಿದ ಬಳಿಕ, ಟೀಮ್​ ಇಂಡಿಯಾದ ಮಾಜಿ ಆಟಗಾರರಾದ ಸಚಿನ್​ ತೆಂಡೂಲ್ಕರ್(Sachin Tendulkar)​ ಮತ್ತು ವೀರೇಂದ್ರ ಸೆಹವಾಗ್(Virender Sehwag)​ ಅವರು ಪಾಕ್​ ತಂಡದ ಮಾಜಿ ಆಟಗಾರ ಶೋಯೆಬ್​ ಅಖ್ತರ್​(Shoaib Akhtar) ಅವರನ್ನು ಟ್ರೋಲ್ ಮಾಡಿದ್ದಾರೆ.

ನರೇಂದ್ರ ಮೋದಿ ಕ್ರಿಕೆಟ್​ ಸ್ಡೇಡಿಯಂನಲ್ಲಿ(Narendra Modi Stadium) ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಭಾರತ ಬಿಗಿ ಬೌಲಿಂಗ್ ದಾಳಿ ಸಂಘಟಿಸಿತು. ನಾಟಕೀಯ ಕುಸಿತ ಕಂಡ ಪಾಕಿಸ್ತಾನ 42.5 ಓವರ್ ಗಳಲ್ಲಿ 191 ರನ್ ಗಳಿಗೆ ಸರ್ವಪತನ ಕಂಡಿತು. ಗುರಿ ಬೆನ್ನಟ್ಟಿದ ಭಾರತ 30.3 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 192 ರನ್ ಗಳಿಸಿ ಭರ್ಜರಿ ಗೆಲುವು ತನ್ನದಾಗಿಸಿಕೊಂಡಿತು.

ಶೋಯೆಬ್ ಅಖ್ತರ್ ಅವರು ಪಂದ್ಯ ಆರಂಭಕ್ಕೂ ಮುನ್ನ ಟ್ವೀಟ್​ ಒಂದನ್ನು ಮಾಡಿ ಟೀಮ್​ ಇಂಡಿಯಾದ ಕಾಲೆಳೆದಿದ್ದರು. ಪಂದ್ಯ ಸೋಲುತ್ತಿದಂತೆ ಈ ಟ್ವೀಟ್​ಗೆ ತಿರುಗೇಟು ನೀಡಿದ ವೀರೇಂದ್ರ ಸೆಹವಾಗ್​, “ಬಹುಶಃ ಪಾಕಿಸ್ತಾನ ಬ್ಯಾಟ್ಸ್‌ಮನ್ಸ್ ಆದಷ್ಟು ಬೇಗ ಪೆವಿಲಿಯನ್‌’ಗೆ ಮರಳಲು ನಿರ್ಧರಿಸಿದ್ದಾರೆ. ಯಾರೂ ಇಲ್ಲ ಶೋಯೆಬ್ ಭಾಯ್. ಪ್ರೇಮವಿರಲಿ, ಇಲ್ಲದಿರಲಿ, ಮಜಾ ಇರೋದು 8-0 ಸೋಲಿನಲ್ಲಿ!” ಎಂದು ಟ್ವೀಟ್ ಮಾಡಿದ್ದಾರೆ.

ಒಂದೇ ಟ್ವೀಟ್​ಗೆ ಸುಮ್ಮನಾದ ವೀರು “ಪಾಕಿಸ್ತಾನದ ಈ ಪ್ರದರ್ಶನ ನೋಡಿದರೆ ಶಾಲಾ ಮಕ್ಕಳಿಗಿಂತ ಕೆಟ್ಟದಾಗಿದೆ. ಸೀನಿಯರ್​ಗಳು ಜೂನಿಯರ್​ ಜತೆ ಆಡಿದಂತೆ ಕಾಣುತ್ತಿದೆ” ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ IND vs PAK: ಡಿಜಿಟಲ್​ ವೀಕ್ಷಣೆಯಲ್ಲಿ ದಾಖಲೆ ಬರೆದ ಇಂಡೋ-ಪಾಕ್​ ಪಂದ್ಯ

ಸಚಿನ್ ತೆಂಡೂಲ್ಕರ್​ ಟ್ವೀಟ್

ಸಚಿನ್ ತೆಂಡೂಲ್ಕರ್ ಕೂಡ ಶೋಯೆಬ್ ಅಖ್ತರ್ ಮಾಡಿರುವ ಟ್ವೀಟ್‌’ಗೆ ತಿರಿಗೇಟು ನೀಡಿದ್ದು, “ನನ್ನ ಸ್ನೇಹಿತನೇ, ನಿಮ್ಮ ಸಲಹೆಯನ್ನು ಅನುಸರಿಸಿದ್ದಾರೆ ಮತ್ತು ಎಲ್ಲವೂ ಸರಾಗವಾಗಿದೆ” ಎಂದು ಬರೆದಿದ್ದಾರೆ. ಪಂದ್ಯಕ್ಕೂ ಮುನ್ನ ಅಖ್ತರ್, ಸಚಿನ್​ ವಿಕೆಟ್​ ಪಡೆದ ಫೋಟೊವನ್ನು ಹಂಚಿಕೊಂಡು “ನೀವು ನಾಳೆ ಇಂತಹದ್ದನ್ನೇ ಮಾಡಲು ಬಯಸಿದರೆ, ಶಾಂತವಾಗಿರಿ’ ಎಂದು ಬರೆದ್ದರು.

ಜೆರ್ಸಿ ವಿಚಾರದಲ್ಲಿ ಬಾಬರ್​ಗೆ ಕುಟುಕಿದ ಅಕ್ರಮ್

ಭಾರತ(IND vs PAK) ವಿರುದ್ಧದ ಪಂದ್ಯದಲ್ಲಿ ಸೋಲಿನ ಬಳಿಕ ಪಾಕಿಸ್ತಾನ ತಂಡದ ನಾಯಕ ಬಾಬರ್​ ಅಜಂ(Babar Azam) ಅವರು ವಿರಾಟ್​ ಕೊಹ್ಲಿಯ ಹಸ್ತಾಕ್ಷರವುಳ್ಳ ಟೀಮ್​ ಇಂಡಿಯಾದ ಜೆರ್ಸಿಯನ್ನು ಪಡೆದಿದ್ದರು. ಉಭಯ ದೇಶಗಳ ಮಧ್ಯೆ ರಾಜಕೀಯ ಸಂಬಂಧ ಹದಗೆಟ್ಟಿದ್ದರೂ, ಎರಡು ತಂಡಗಳ ಆಟಗಾರರ ಈ ಉತ್ತಮ ಸ್ನೇಹ ಬಾಂಧವ್ಯಕ್ಕೆ ಎಲ್ಲ ಕಡೆಯಿಂದ ಮೆಚ್ಚುಗೆ ವ್ಯಕ್ತವಾಗಿದ್ದವು. ಆದರೆ ಇದನ್ನು ಪಾಕ್​ನ ಮಾಜಿ ಆಟಗಾರ ವಾಸಿಂ ಅಕ್ರಮ್(Wasim Akram) ಖಂಡಿಸಿದ್ದಾರೆ.

ಪಂದ್ಯ ಬಳಿಕ ಸಂದರ್ಶನದಲ್ಲಿ ಮಾತನಾಡಿದ ಅಕ್ರಮ್​ ಅವರು, ನಾನು ಚಿತ್ರವನ್ನು ನೋಡುವಾಗ ನಿಖರವಾಗಿ ಹೇಳುತ್ತೇನೆ. ಇದು ಬಾಬರ್​ ಮಾಡಿದ್ದು ನಿಜಕ್ಕೂ ತಪ್ಪು. ಅದರಲ್ಲೂ ಈ ಪರಿಸ್ಥಿತಿಯಲ್ಲಿ ಆತ ಹೀಗೆ ಮಾಡಬಾರದಿತ್ತು. ಜೆರ್ಸಿ ಪಡೆದಿರುವ ಬಗ್ಗೆ ನನಗೆ ಏನು ಆಕ್ಷೇಪ ಇಲ್ಲ. ಆದರೆ ಇದನ್ನೂ ಸಾರ್ವಜನಿಕವಾಗಿ ಪಡೆದದ್ದು ನಿಜಕ್ಕೂ ತಪ್ಪು” ಎಂದಿದ್ದಾರೆ.

Exit mobile version